ಶ್ರೀದೇವಿ ಮಗಳಿಗೆ ಈ ಸೌತ್ ಸ್ಟಾರ್ ಜೊತೆ ನಟಿಸೋ ಆಸೆಯಂತೆ
ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಕೂಡ ಈಗಾಗಲೇ ಚಿತ್ರರಂಗಕ್ಕೆ ಬಂದಿದ್ದು ಆಗಿದೆ. 'ಸೈರಾಟ್' ಚಿತ್ರದ ರಿಮೇಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹೀಗಿರುವ ಜಾನ್ನವಿ ಕಪೂರ್ ಈಗ ಒಬ್ಬ ಸೌತ್ ಸ್ಟಾರ್ ಜೊತೆ ನಟಿಸೋ ಕನಸು ಹೊಂದಿದ್ದಾರೆ.
ಅರ್ಜುನ್ ರೆಡ್ಡಿ ಮೂಲಕ ಅಲ್ಲೋಲ್ಲ ಕಲ್ಲೋಲ ಮಾಡಿದ್ದ ನಟ ವಿಜಯ ದೇವರಕೊಂಡ ಜೊತೆ ಅನೇಕ ನಟಿಯರಿಗೆ ಸಿನಿಮಾ ಮಾಡುವ ಆಸೆ ಇದೆ. ಅದೇ ಸಾಲಿಗೆ ಈಗ ಶ್ರೀದೇವಿ ಮಗಳು ಕೂಡ ಸೇರಿದ್ದಾರೆ.
ಇತ್ತೀಚೆಗೆ, ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ಈ ಸಂಗತಿಯನ್ನ ಹೊರ ಹಾಕಿದ್ದಾರೆ. ಅರ್ಜುನ್ ರೆಡ್ಡಿ ಜೊತೆ ತೆರೆ ಹಂಚಿಕೊಳ್ಳುವ ಬಯಕೆಯನ್ನ ಹಂಚಿಕೊಂಡಿದ್ದಾರೆ.

ಅಂದಹಾಗೆ, ವಿಜಯ ದೇವರಕೊಂಡ ತಮ್ಮ ಡಿಫರೆಂಟ್ ಸ್ಟೈಲ್ ಮೂಲಕ ಕ್ರೇಜ್ ಶುರು ಮಾಡಿದ್ದರು. ಅವರ 'ಗೀತಾ ಗೋವಿಂದಂ' ಹಾಗೂ 'ನೋಟ' ಚಿತ್ರಗಳ ಬಳಿಕ ಅವರ 'ಟ್ಯಾಕ್ಸಿವಾಲ' ಇತ್ತೀಚೆಗಷ್ಟೆ ತೆರೆಗೆ ಬಂದಿತ್ತು.
English summary
Bollywood actress Jhanvi Kapoor like to work with tollywood actor Vijay Devarakonda.


Click it and Unblock the Notifications