»   » ಶಾರುಖ್ ಪುತ್ರನೊಂದಿಗೆ ಶ್ರೀದೇವಿ ಪುತ್ರಿ ನಿಜನಾ!

ಶಾರುಖ್ ಪುತ್ರನೊಂದಿಗೆ ಶ್ರೀದೇವಿ ಪುತ್ರಿ ನಿಜನಾ!

By: ಉದಯರವಿ
Subscribe to Filmibeat Kannada

ಸದ್ಯಕ್ಕೆ ಬಾಲಿವುಡ್ ನಲ್ಲಿ ವಾರಸುದಾರರ ಹವಾ ಜೋರಾಗಿದೆ. ಇತ್ತೀಚೆಗೆ ಬಿ ಟೌನ್ ನಲ್ಲಿ ಬರುತ್ತಿರುವ ಎರಡನೇ ತಲೆಮಾರಿನ ನಟ, ನಟಿ, ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ ಕಡೆಗೆ ಗೀತರಚನೆಕಾರರೂ ವಾರಸುದಾರರೇ ಆಗಿರುವುದು ವಿಶೇಷ.

ಈಗಾಗಲೆ ಹಲವು ಸ್ಟಾರ್ ಗಳ ವಾರಸುದಾರರು ಬಾಲಿವುಡ್ ಗೆ ಅಡಿಯಿಟ್ಟಿದ್ದಾರೆ. ಇದೇ ಹಾದಿಯಲ್ಲಿ ಅಭಿನೇತ್ರಿ ಶ್ರೀದೇವಿ ಪುತ್ರಿ ಝಾನ್ವಿ ಕಪೂರ್ ಸಹ ಶೀಘ್ರದಲ್ಲೇ ಬಾಲಿವುಡ್ ಬಣ್ಣದ ದುನಿಯಾಗೆ ಅಡಿಯಿಡುತ್ತಿದ್ದಾರೆ. [ತುಂಡು ಚಡ್ಡಿಯಲ್ಲಿ ಶ್ರೀದೇವಿ ಮಗಳು ಜಾನ್ವಿ]

ಇನ್ನೊಂದು ಕಡೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಸಹ ಶೀಘ್ರದಲ್ಲೇ ಬೆಳ್ಳಿತೆರೆಗೆ ಜಿಗಿಯುತ್ತಿದ್ದಾರೆ. ತಾಜಾ ಸಮಾಚಾರ ಏನೆಂದರೆ, ಝಾನ್ವಿ ಕಪೂರ್ ಹಾಗೂ ಆರ್ಯನ್ ಇಬ್ಬರೂ ಒಂದೇ ಚಿತ್ರದ ಮೂಲಕ ಬಾಲಿವುಡ್ ಗೆ ಪರಿಚಯವಾಗುತ್ತಿದ್ದಾರೆ ಎಂಬುದು.

ಇಬ್ಬರೂ ಅಭಿನಯಿಸಲಿರುವ ಚಿತ್ರ ಆಷಿಕಿ 3 ಎನ್ನುತ್ತವೆ ಮೂಲಗಳು. ಈಗಾಗಲೆ ಬಾಲಿವುಡ್ ನಲ್ಲಿ ಬಂದಂತಹ ಆಷಿಕಿ, ಆಷಿಕಿ 2 ಚಿತ್ರಗಳು ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸು ಸಾಧಿಸಿವೆ. ಈಗ ಬರಲಿರುವ ಆಷಿಕಿ 3 ಚಿತ್ರದ ಬಗ್ಗೆಯೂ ಅದೇ ನಿರೀಕ್ಷೆಗಳಿವೆ. ಇನ್ನು ಝಾನ್ವಿ ಹಾಗೂ ಆರ್ಯನ್ ಜೊತೆಗೇ ಅಭಿನಯಿಸಿದರೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ ಗ್ಯಾರಂಟಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಲಂಡನ್ ನಲ್ಲಿ ಓದುತ್ತಿರುವ ಆರ್ಯನ್

ಸದ್ಯಕ್ಕೆ ಶಾರುಖ್ ಪುತ್ರ ಆರ್ಯನ್ ಖಾನ್ ಹೆಚ್ಚಿನ ವಿದ್ಯಾಭ್ಯಾಸದ ನಿಮಿತ್ತ ಲಂಡನ್ ನಲ್ಲಿದ್ದಾನೆ. ಲಂಡನ್ ನ ಪ್ರಸಿದ್ಧ ಸೆವೆನೋಕ್ಸ್ ಸ್ಕೂಲ್ ನಲ್ಲಿ ಓದುತ್ತಿದ್ದಾನೆ. ಶಾರುಖ್ ಹಾಗೂ ಅವರ ಪತ್ನಿ ಗೌರಿ ತಮ್ಮ ಪುತ್ರನನ್ನು ಆದಷ್ಟು ಮಾಧ್ಯಮಗಳಿಂದ ದೂರವಾಗಿಟ್ಟು ಬೆಳೆಸಿದ್ದಾರೆ. ತಮ್ಮ ಪುತ್ರನನ್ನು ದೂರದ ಲಂಡನ್ ಗೆ ಕಳುಹಿಸಲು ಇದೂ ಒಂದು ಕಾರಣವಂತೆ.

ಆರ್ಯನ್ ಭವಿಷ್ಯದ ಸೂಪರ್ ಸ್ಟಾರ್

ಶಾರುಖ್ ಅಭಿನಯದ 'ಕಭಿ ಖುಷಿ ಕಭಿ ಗಮ್' ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಆರ್ಯನ್ ಖಾನ್ ಭವಿಷ್ಯದ ಸೂಪರ್ ಸ್ಟಾರ್ ಎಂದೇ ಭಾವಿಸಲಾಗಿದೆ.

ಅಮ್ಮನಂತೆಯೇ ಮಗಳು ಝಾನ್ವಿ

ಇನ್ನು ಝಾನ್ವಿ ಕಪೂರ್ ಸಹ ಅಷ್ಟೇ ಅಮ್ಮನಂತೆ ಮಗಳು ಎಂಬಂತೆ ಈಗಾಗಲೆ ಬಾಲಿವುಡ್ ಗಮನಸೆಳೆದಿದ್ದಾರೆ. ತಮ್ಮದೇ ಆದಂತಹ ಮೈಮಾಟದ ಮೂಲಕ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ ಝಾನ್ವಿ.

ತಂದೆ ತಾಯಿ ಬೆಂಬಲವೂ ಸಾಕಷ್ಟಿದೆ

ಸಿನಿಮಾ ವಾತಾವರಣದಲ್ಲಿ ಬೆಳೆದ ಮಕ್ಕಳು ಆ ಕ್ಷೇತ್ರದ ಕಡೆಗೆ ಹೆಚ್ಚು ಆಕರ್ಷಿತರಾಗುವುದು ಸಾಮಾನ್ಯ. ಇನ್ನು ಝಾನ್ವಿ ಕಪೂರ್ ಗೆ ತಂದೆ ತಾಯಿಯ ಶೇಕಡಾ ಹಂಡ್ರಡ್ ರಷ್ಟು ಬೆಂಬಲವಿದೆ.

ಜಿಮ್ ಮಾಡಿ ದೇಹದ ಸೌಂದರ್ಯ

ಸದ್ಯಕ್ಕೆ ಝಾನ್ವಿ ಓದಿನೊಂದಿಗೆ ನೃತ್ಯವನ್ನೂ ಕಲಿಯುತ್ತಿದ್ದಾರೆ. ಡೈಲಾಗ್ಸ್ ಹೇಗೆ ಹೇಳಬೇಕು ಎಂಬುದನ್ನು ತಿಳಿದುಕೊಂಡಿದ್ದಾರಂತೆ. ಜಿಮ್ ನಲ್ಲಿ ಬೆವರಿಳಿಸುತ್ತಾ ದೇಹದ ಸೌಂದರ್ಯ ಕಾಪಾಡಿಕೊಂಡಿದ್ದಾರೆ. ಅವರು ಬೆಳ್ಳಿತೆರೆಗೆ ಅಡಿಯಿಡುವ ದಿನಗಳು ಹತ್ತಿರದಲ್ಲೇ ಇವೆ.

English summary
Bollywood Actor Sridevi daughter Jhanvi Kapoor who aims to become an actress is likely to be paired for Ashiqui -3 along with SRK’s Son Aryan Khan.
Please Wait while comments are loading...