For Quick Alerts
  ALLOW NOTIFICATIONS  
  For Daily Alerts

  ಫೈಟ್ ದೃಶ್ಯದ ಚಿತ್ರೀಕರಣದಲ್ಲಿ ಗಾಯಗೊಂಡ ಜಾನ್ ಅಬ್ರಹಾಂ

  |

  ನಟ ಜಾನ್ ಅಬ್ರಹಾಂ ತಮ್ಮ ಅದ್ಭುತ ಅಂಗಸೌಷ್ಟವ, ಸಿನಿಮಾಗಳಲ್ಲಿ ಮಾಡುವ ಆಕ್ಷನ್‌ನಿಂದ ಚಿರ ಪರಿಚಿತರು.

  ಹಲವು ಆಕ್ಷನ್ ಸಿನಿಮಾಗಳನ್ನು, ಚೇಸ್ ದೃಶ್ಯಗಳನ್ನು ಮಾಡಿರುವ ಜಾನ್ ಅಬ್ರಹಾಂ ಹಲವು ಬಾರಿ ತಮ್ಮ ಸ್ಟಂಟ್‌ಗಳನ್ನು ತಾವೇ ಮಾಡುತ್ತಾರೆ. ಇತ್ತೀಚಿನ ಸಿನಿಮಾ ಒಂದರಲ್ಲಿಯೇ ಇದೇ ರೀತಿ ಸ್ಟಂಟ್ ಮಾಡಲು ಹೋಗಿ ಗಾಯ ಮಾಡಿಕೊಂಡಿದ್ದಾರೆ.

  ಹೌದು, 'ಅಟ್ಯಾಕ್' ಸಿನಿಮಾದ ಚಿತ್ರೀಕರಣದಲ್ಲಿ ಜಾನ್ ಅಬ್ರಹಾಂ ತೊಡಗಿಕೊಂಡಿದ್ದು, ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಆಗಿದೆ. ಸಿನಿಮಾದ ಫೈಟ್ ದೃಶ್ಯದಲ್ಲಿ ನಟಿಸಬೇಕಾದರೆ ಜಾನ್ ಅಬ್ರಹಾಂ ಗೆ ಗಾಯವಾಗಿದೆ.

  ಸಹ ಫೈಟರ್ ಒಬ್ಬ ಟ್ಯೂಬ್‌ ಲೈಟ್‌ನಿಂದ ಜಾನ್ ಅಬ್ರಹಾಂ ಕುತ್ತಿಗೆಗೆ ಹೊಡೆದಿದ್ದು, ದೊಡೆತದಿಂದಾಗಿ ಜಾನ್ ಕುತ್ತಿಗೆ, ಕಿವಿಯ ಬಳಿ ಗಾಯಗಳಾಗಿವೆ. ಸಹ ಫೈಟರ್ ಕುತ್ತಿಗೆಯಿಂದ ತುಸು ಕೆಳಗೆ ಟ್ಯೂಬ್‌ ಲೈಟ್ ಒಡೆಯಬೇಕಿತ್ತು, ಆದರೆ ತುಸು ಮೇಲೆ ಹೊಡೆದ ಕಾರಣ ಈ ಘಟನೆ ಸಂಭವಿಸಿದೆ.

  ಜಾನ್ ಗೆ ಬಹಳ ದೊಡ್ಡ ಗಾಯವೇನೂ ಆಗಿಲ್ಲ, ಆದರೆ ಹೊಡೆತ ಬಿದ್ದ ಜಾಗ ಬಹಳ ಸೂಕ್ಷ್ಮವಾದುದಾಗಿದೆ, ತುಸು ಆಚೀಚೆ ಆಗಿದ್ದಿದ್ದರೆ ಜಾನ್ ಕಿವಿ ಭಾರಿ ಪೆಟ್ಟು ಬೀಳುತ್ತಿತ್ತು. ಗಾಯಗೊಂಡ ಜಾನ್ ಗೆ ಚಿತ್ರತಂಡ ಸುಶ್ರೂಶೆ ಮಾಡುತ್ತಿರುವ ವಿಡಿಯೋವನ್ನು ಜಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ಅಟ್ಯಾಕ್‌'ನ ಹೊರತಾಗಿ ಜಾನ್ ಅಬ್ರಹಾಂ, ಶಾರುಖ್ ಖಾನ್-ದೀಪಿಕಾ ಪಡುಕೋಣೆ ಜೊತೆಗೆ 'ಪಠಾಣ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ 'ಸತ್ಯಮೇವ ಜಯತೆ 2' ಹಾಗೂ 'ಏಕ್ ವಿಲನ್ 2' ಸಿನಿಮಾದಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದಾರೆ. ಇದರ ಜೊತೆಗೆ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಹಕ್ಕು ಖರೀದಿಸಿರುವ ಜಾನ್, ಅದನ್ನು ಹಿಂದಿಯಲ್ಲಿ ರೀಮೇಕ್ ಮಾಡುವ ಚಿಂತನೆಯಲ್ಲಿದ್ದಾರೆ.

  English summary
  Jhon Abraham injured during shooting of movie Attack. He injured during performing a stunt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X