ಜಿಯಾ ಖಾನ್ ಸಾವಿನ ಪ್ರಕರಣದ ತನಿಖೆಯಲ್ಲಿ ಸಲ್ಮಾನ್ ಖಾನ್ ಪ್ರಭಾವ: ತಾಯಿ ಆರೋಪ

By Avani Malnad

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಬಳಿಕ ಬಾಲಿವುಡ್‌ನ ಅನೇಕರು ತಮಗೆ ಆದ ಅನ್ಯಾಯಗಳು, ತಾವು ಅನುಭವಿಸಿದ ನೋವುಗಳ ಬಗ್ಗೆ ದನಿ ಎತ್ತುವ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹುಟ್ಟುಹಾಕುತ್ತಿರುವ ಅಭಿಯಾನದಲ್ಲಿ ಅನೇಕ ಸೆಲೆಬ್ರಿಟಿಗಳೂ ಸೇರಿಕೊಳ್ಳುತ್ತಿದ್ದಾರೆ. ಸುಶಾಂತ್ ಸಾವಿಗೆ ಬಾಲಿವುಡ್ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುತ್ತಿರುವ ಬೆನ್ನಲ್ಲೇ ಹೊಸ ಹೊಸ ಆರೋಪಗಳು ಹೊರಬರುತ್ತಿವೆ.

Recommended Video

Case filed against 8 people including Karan Johar, Sanjay Leela Bhansali, Salman Khan | Filmibeat

2013ರಲ್ಲಿ ನಟಿ ಜಿಯಾ ಖಾನ್ ತಮ್ಮ 25ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಕೂಡ ಬಾಲಿವುಡ್‌ಗೆ ಆಘಾತ ಮೂಡಿಸಿತ್ತು. ಇದರ ಸುತ್ತ ಅನೇಕ ಚರ್ಚೆಗಳು ಹುಟ್ಟಿಕೊಂಡಿದ್ದರೂ ನಂತರ ಪ್ರಕರಣ ತಣ್ಣಗಾಗಿತ್ತು. ಸುಶಾಂತ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಜಿಯಾ ಖಾನ್ ತಾಯಿ ರಬಿಯಾ ಅಮಿನ್, ಸುಶಾಂತ್ ಸಾವನ್ನು ಖಂಡಿಸುತ್ತಾ, ಸಲ್ಮಾನ್ ಖಾನ್ ವಿರುದ್ಧ ಆರೋಪ ಮಾಡುವ ವಿಡಿಯೋ ಹರಿಬಿಟ್ಟಿದ್ದಾರೆ. ಮುಂದೆ ಓದಿ...

ಸೂರಜ್ ಪಾಂಚೋಲಿ ವಿರುದ್ಧ ತನಿಖೆ

ಸೂರಜ್ ಪಾಂಚೋಲಿ ವಿರುದ್ಧ ತನಿಖೆ

ಜಿಯಾ ಖಾನ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅವರ ಆಗಿನ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ವಿರುದ್ಧ ತನಿಖೆ ನಡೆದಿತ್ತು. ಜಿಯಾ ಖಾನ್ ಡೆತ್ ನೋಟ್ ಆಧಾರದಲ್ಲಿ ಸೂರಜ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಸಲ್ಮಾನ್ ಖಾನ್ ಪ್ರಭಾವ

ಸಲ್ಮಾನ್ ಖಾನ್ ಪ್ರಭಾವ

2015ರಲ್ಲಿ ಲಂಡನ್‌ನಿಂದ ಮುಂಬೈಗೆ ತಮ್ಮನ್ನು ಕರೆಸಿಕೊಂಡಿದ್ದ ಸಿಬಿಐ ತನಿಖಾಧಿಕಾರಿ, ಈ ಪ್ರಕರಣದಲ್ಲಿ ಸೂರಜ್ ಅವರನ್ನು ಹಿಂಸಿಸಬಾರದು ಮತ್ತು ವಿಚಾರಣೆಗೆ ಒಳಪಡಿಸಬಾರದು ಎಂದು ಸಲ್ಮಾನ್ ಖಾನ್ ಫೋನ್ ಮಾಡಿ ಮನವಿ ಮಾಡಿದ್ದಾಗಿ ಹೇಳಿದ್ದರು ಎಂದು ರಬಿಯಾ ಅಮಿನ್ ಆರೋಪಿಸಿದ್ದಾರೆ.

ಆತನ ವಿಚಾರಣೆ ಮಾಡಬೇಡಿ

ಆತನ ವಿಚಾರಣೆ ಮಾಡಬೇಡಿ

'ಲಂಡನ್‌ನಿಂದ ಬರುವಂತೆ ಅವರು ಕರೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿ ನಮಗೆ ಸಿಕ್ಕಿದೆ. ನಾನು ಅಲ್ಲಿಗೆ ಹೋದೆ. ಸಲ್ಮಾನ್ ಖಾನ್ ನನಗೆ ಕಾಲ್ ಮಾಡಿದ್ದರು. ಪ್ರತಿ ದಿನವೂ ಅವರು ನನಗೆ ಕರೆ ಮಾಡುತ್ತಿರುತ್ತಾರೆ. ತುಂಬಾ ಹಣ ಹೂಡಿಕೆ ಮಾಡಿದ್ದೇನೆ. ಆ ಹುಡುಗನಿಗೆ ಕಿರುಕುಳ ನೀಡಬೇಡಿ. ದಯವಿಟ್ಟು ಆತನನ್ನು ವಿಚಾರಣೆ ಮಾಡಬೇಡಿ. ಆತನನ್ನು ಮುಟ್ಟಬೇಡಿ. ಹೀಗಾಗಿ ನಾವೇನು ಮಾಡಲು ಸಾಧ್ಯ?' ಎಂದು ಹೇಳಿದ್ದಾಗಿ ರಬಿಯಾ ಹೇಳಿದ್ದಾರೆ.

ದಯವಿಟ್ಟು ಹೋರಾಡಿ

ದಯವಿಟ್ಟು ಹೋರಾಡಿ

ಈ ವಿಚಾರವನ್ನು ದೆಹಲಿಯಲ್ಲಿನ ಉನ್ನತ ಸಿಬಿಐ ಅಧಿಕಾರಿಗಳ ಮುಂದೆ ಈ ವಿಚಾರ ಕೊಂಡೊಯ್ದು ದೂರು ಕೂಡ ನೀಡಿದ್ದೆ. ನೀವು ತನಿಖೆಯನ್ನು ಕೆಡಿಸಲು ನಿಮ್ಮ ಹಣ ಮತ್ತು ಪ್ರಭಾವವನ್ನು ಬಳಸಿದರೆ ಹಾಗೂ ಒತ್ತಡ ಹೇರುವುದಾದರೆ, ನಾಗರಿಕರು ಎಲ್ಲಿ ಹೋಗುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಹೇಳಲಿಚ್ಚಿಸುವುದು ಇದು, ದಯವಿಟ್ಟು ಎದ್ದೇಳಿ, ಹೋರಾಡಿ, ಪ್ರತಿಭಟಿಸಿ ಮತ್ತು ಬಾಲಿವುಡ್‌ನ ಈ ವಿಷಕಾರಿ ವರ್ತನೆಯನ್ನು ತಡೆಯಿರಿ ಎಂದಿದ್ದಾರೆ.

ಬಾಲಿವುಡ್ ಬದಲಾಗಬೇಕಿದೆ

ಬಾಲಿವುಡ್ ಬದಲಾಗಬೇಕಿದೆ

ಬಾಲಿವುಡ್ ಬದಲಾಗಬೇಕಿದೆ. ಬಾಲಿವುಡ್ ಎದ್ದೇಳಬೇಕಿದೆ. ಬಾಲಿವುಡ್‌ನಲ್ಲಿನ ದಬ್ಬಾಳಿಕೆಯನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಂದು ಜಿಯಾ ಖಾನ್ ತಾಯಿ ರಬಿಯಾ ಸಲಹೆ ನೀಡಿದ್ದಾರೆ. ಸುಶಾಂತ್ ಸಾವಿನ ಬಳಿಕ ಸಲ್ಮಾನ್ ಖಾನ್ ವಿರುದ್ಧವೂ ಉಂಟಾಗಿರುವ ಆಕ್ರೋಶಕ್ಕೆ ಜಿಯಾ ತಾಯಿ ಆರೋಪ ಮತ್ತಷ್ಟು ತುಪ್ಪ ಸುರಿದಿದೆ.

More from Filmibeat

English summary
Jiah Khan's mother Rabia Amin has alleged that Salman Khan influenced the case investigation against Sooraj Panchol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X