ಅಕ್ಕನ ಮೇಲೆ ಆ ನಿರ್ದೇಶಕ ಲೈಂಗಿಕ ದೌರ್ಜನ್ಯ ಎಸಗಿದ್ದ: ಮೃತ ಜಿಯಾ ಖಾನ್ ಸಹೋದರಿ ಆರೋಪ

ನಟಿ ಜಿಯಾ ಖಾನ್ ಸಾವು ಬಾಲಿವುಡ್ ಅನ್ನು ತೀವ್ರವಾಗಿ ಕಾಡಿದ ಸಾವುಗಳಲ್ಲಿ ಒಂದು. ಕೇವಲ ಮೂರು ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಪ್ರತಿಭಾವಂತ, ಉದಯೋನ್ಮುಖ ನಟಿ ಎಂದು ಗುರುತಿಸಿಕೊಂಡಿದ್ದರು ಜಿಹಾ ಖಾನ್.

2013 ರಲ್ಲಿ ಜಿಯಾ ಖಾನ್ ಆತ್ಮಹತ್ಯೆಗೆ ಶರಣಾಗಿದ್ದರು. ಆರು ಪುಟಗಳ ಸುದೀರ್ಘ ಡೆತ್ ನೋಟ್ ಅನ್ನು ಬರೆದಿದ್ದ ಜಿಯಾ, ತನ್ನ ಸಾವಿಗೆ ಸೂರಜ್ ಪಂಚೋಲಿ ಕಾರಣ ಎಂದು ಆರೋಪಿಸಿದ್ದರು. ಅಂತೆಯೇ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಇದೀಗ ಬಿಬಿಸಿಯು 'ಬಾಲಿವುಡ್ ಡೆತ್ಸ್' ಹೆಸರಿನ ಹೊಸ ಡಾಕ್ಯುಮೆಂಟರಿ ಪ್ರಸಾರ ಮಾಡುತ್ತಿದ್ದು, ಡಾಕ್ಯುಮೆಂಟರಿಯಲ್ಲಿ ಜಿಯಾ ಖಾನ್‌ರ ಸಹೋದರಿ ಕರಿಶ್ಮಾ, 'ನನ್ನ ಸಹೋದರಿ ಜಿಯಾ ಖಾನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು' ಎಂದು ಆರೋಪಿಸಿದ್ದಾರೆ.

ಸಾಜಿದ್ ಖಾನ್ ನಟನೆಯ ಹೌಸ್‌ಫುಲ್ ಸಿನಿಮಾದಲ್ಲಿ ನಟನೆ

ಸಾಜಿದ್ ಖಾನ್ ನಟನೆಯ ಹೌಸ್‌ಫುಲ್ ಸಿನಿಮಾದಲ್ಲಿ ನಟನೆ

'ಸಾಜಿದ್ ಖಾನ್ ನಿರ್ದೇಶಿಸಿದ್ದ 'ಹೌಸ್‌ಫುಲ್' ಸಿನಿಮಾದಲ್ಲಿ ನನ್ನ ಸಹೋದರಿ ಜಿಯಾ ಖಾನ್ ನಟಿಸಿದ್ದರು. ಒಮ್ಮೆ ರಿಹರ್ಸಲ್ ಮಾಡುವಾಗ, 'ನಿನ್ನ ಟಾಪ್ ಹಾಗೂ ಒಳ ಉಡುಪು ತೆಗಿ' ಎಂದು ಸಾಜಿದ್ ಹೇಳಿದ್ದರಂತೆ. ಅದನ್ನು ಕೇಳಿ ಜಿಯಾ ಮನೆಗೆ ಮರಳಿ ಬಹಳ ಅತ್ತಿದ್ದಳು' ಎಂದು ಹೇಳಿದ್ದಾರೆ ಕರಿಶ್ಮಾ.

ಸಿನಿಮಾ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟಿದ್ದೇನೆ ಎಂದು ಅತ್ತಿದ್ದ ಜಿಯಾ

ಸಿನಿಮಾ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟಿದ್ದೇನೆ ಎಂದು ಅತ್ತಿದ್ದ ಜಿಯಾ

'ಸಿನಿಮಾ ಪ್ರಾರಂಭವಾಗುವ ಮುನ್ನವೇ ಹೀಗೆ ಎಂದರೆ ಮುಂದೆ ನನ್ನ ಗತಿಯೇನು ಎಂದು ಬಹಳವಾಗಿ ಅತ್ತಿದ್ದಳು ಅಕ್ಕ. ನಾನು ಕಾಂಟ್ರ್ಯಾಕ್ಟ್‌ಗೆ ಸಹಿ ಮಾಡಿದ್ದೇನೆ, ನಾನು ಸಿನಿಮಾದಿಂದ ಹೊರಬಂದರೆ ನನ್ನ ಮೇಲೆ ಪ್ರಕರಣ ದಾಖಲಿಸುತ್ತಾರೆ. ನನ್ನ ಹೆಸರು ಹಾಳು ಮಾಡುತ್ತಾನೆ ಆತ' ಎಂದಿದ್ದ ಅಕ್ಕ ಜಿಯಾ, ಕೊನೆಗೆ ಆ ಸಿನಿಮಾದಲ್ಲಿ ನಟಿಸಿದ್ದಳು' ಎಂದಿದ್ದಾರೆ ಕರಿಶ್ಮಾ.

ನನ್ನ ಮೇಲೂ ಸಾಜಿದ್ ಕಣ್ಣು ಹಾಕಿದ್ದ: ಕರಿಶ್ಮಾ

ನನ್ನ ಮೇಲೂ ಸಾಜಿದ್ ಕಣ್ಣು ಹಾಕಿದ್ದ: ಕರಿಶ್ಮಾ

'ನಾನು ಸಹ ಒಮ್ಮೆ ಅಕ್ಕನೊಂದಿಗೆ ಸಾಜಿದ್ ಖಾನ್ ಮನೆಗೆ ಹೋಗಿದ್ದೆ. ನನಗೆ ಆಗ 16 ವರ್ಷವಿರಬಹುದು ಅಷ್ಟೆ. ನಾನು ತುಸು ಸಣ್ಣ ಉಡುಪು ಧರಿಸಿದ್ದೆ. ನನ್ನನ್ನು ನೋಡಿದ ಸಾಜಿದ್ ಖಾನ್, 'ನಿನ್ನ ತಂಗಿಗೆ ಸೆಕ್ಸ್ ಬೇಕು ಎನಿಸುತ್ತದೆ' ಎಂದಿದ್ದ, ಆಗ ನನ್ನ ಬೆಂಬಲಕ್ಕೆ ಅಕ್ಕ, ಆಕೆ ಚಿಕ್ಕವಳು, ಆಕೆಗೆ ಏನೂ ಗೊತ್ತಾಗುವುದಿಲ್ಲ ಎಂದು ಸಾಜಿದ್ ಮೇಲೆ ಜಗಳ ಮಾಡಿ ಇಬ್ಬರೂ ಮನೆಗೆ ವಾಪಸ್ಸಾಗಿದ್ದೆವು' ಎಂದಿದ್ದಾರೆ ಕರಿಶ್ಮಾ.

ಹಲವು ನಟಿಯರು ಸಾಜಿದ್ ವಿರುದ್ಧ ಆರೋಪ ಮಾಡಿದ್ದರು

ಹಲವು ನಟಿಯರು ಸಾಜಿದ್ ವಿರುದ್ಧ ಆರೋಪ ಮಾಡಿದ್ದರು

ನಿರ್ದೇಶಕ, ನಟ ಸಾಜಿದ್ ಖಾನ್ ಮೇಲೆ 2018 ರಲ್ಲಿ ಹಲವು ನಟಿಯರು ಮೀ ಟೂ ಅಭಿಯಾನದಡಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಜಾಕ್ವೆಲಿನ್ ಫರ್ನಾಂಡೀಸ್, ಮಂದಣ್ಣ ಕರಿಮಿ, ರೇಚಲ್ ವೈಟ್, ಸಿಮ್ರನ್ ಸೂರಿ, ಮರೀನಾ ಕುವಾರ್, ಪತ್ರಕರ್ತೆ ಕೃಷ್ಣಮಾ ಉಪಾಧ್ಯಾಯ್ ಸಹ ಸಾಜಿದ್ ವಿರುದ್ಧ ಮೀ ಟೂ ಅಡಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಬಿಬಿಸಿ ಪ್ರಸಾರ ಮಾಡುತ್ತಿರುವ ಬಾಲಿವುಡ್ ನಲ್ಲಿ ಆದ ಆತ್ಮಹತ್ಯೆಗಳು ಅಥವಾ ಅಸಹಜ ಸಾವುಗಳ ಹೊಸ ಡಾಕ್ಯುಮೆಂಟರಿ ಯೂರೋಪ್‌ನಲ್ಲಿ ಮಾತ್ರವೇ ಪ್ರಸಾರ ಆಗುತ್ತಿವೆ. ಆದರೆ ಹಲವರು ಡಾಕ್ಯುಮೆಂಟರಿಯ ವಿಡಿಯೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

More from Filmibeat

English summary
Late Jiah Khan's sister Karishma accused that director Sajid Khan sexually harassed Jiah Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X