ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ಸಾಕ್ಷ್ಯಾಧಾರಗಳ ಕೊರತೆಯಿಂದ ನಟ ಸೂರಜ್ ಪಾಂಚೋಲಿ ಖುಲಾಸೆ
ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದ ತೀರ್ಪನ್ನು ಇಂದು(ಏಪ್ರಿಲ್ 28) ಸಿಬಿಐ ಕೋರ್ಟ್ ಪ್ರಕಟಿಸಿದೆ. ಸಾಕ್ಷಾಧಾರಗಳ ಕೊರತೆಯಿಂದ ನಟ ಸೂರಜ್ ಪಾಂಚೋಲಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ಖುಲಾಸೆಯಾಗಿದ್ದಾರೆ. ಜೂನ್ 3, 2013 ರಂದು, ನಟಿ ಜಿಯಾಖಾನ್ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಖ್ಯಾತ ನಟ ಆದಿತ್ಯ ಪೈಂಚೋಲಿ, ಜರೀನಾ ವಾಹಬ್ ದಂಪತಿ ಪುತ್ರ, ಬಾಲಿವುಡ್ ನಟನಾದ ಸೂರಜ್ ಪಂಚೋಲಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದಾನೆ. ಮುಂಬೈನ ಜುಹುದಲ್ಲಿರುವ ತಮ್ಮ ನಿವಾಸದಲ್ಲಿ ನಟಿ ಜಿಯಾ ಖಾನ್ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದರು. 6 ಪುಟಗಳ ಪತ್ರ ಬರೆದು ಆಕೆ ಸೂರಜ್ ಪಂಚೋಲಿ ಬಗ್ಗೆ ಆರೋಪಿಸಿದ್ದರು. ಪ್ರೀತಿಯ ಹೆಸರಿನಲ್ಲಿ ಸೂರಜ್ ಪಾಂಚೋಲಿ ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದರು ಎಂದು ಉಲ್ಲೇಖಿಸಿದ್ದರು. ಹಲವು ಬಾರಿ ಗರ್ಭಿಣಿಯಾಗಿ ಗರ್ಭಪಾತ ಮಾಡಿಕೊಂಡಿದ್ದಾಗಿ ಪ್ರಸ್ತಾಪಿಸಿದ್ದರು.

ಅಮಿತಾಭ್ ಬಚ್ಚನ್ ನಟನೆಯ 'ನಿಶಬ್ದ್' ಚಿತ್ರದಲ್ಲಿ ಜಿಯಾ ಖಾನ್ ನಟಿಸಿ ಮೆಚ್ಚುಗೆ ಪಡೆದಿದ್ದು. ಮಾಡಿದ್ದು 3ನೇ ಸಿನಿಮಾ ಆದರೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಕ್ಸಸ್ ಕಂಡಿದ್ದರು. ಮುಂಬೈ ಪೊಲೀಸರಿಂದ ಸಿಬಿಐ ಈ ಈಕೆಯ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು. ಎರಡೂ ಕಡೆಯ ವಾದ ಆಲಿಸಿದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎ. ಎಸ್ ಸೈಯದ್ ಕಳೆದ ವಾರ ತೀರ್ಪನ್ನು (ಇಂದಿಗೆ)ಏಪ್ರಿಲ್ 28ಕ್ಕೆ ಕಾಯ್ದಿರಿಸಿದ್ದರು.
ನಟಿ ಜಿಯಾ ಖಾನ್ ಅವರ ತಾಯಿ ರಾಬಿಯಾ ಅಮೀನ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾರೆ. ಈ ಪ್ರಕರಣದಲ್ಲಿ ಹೊಸದಾಗಿ ವಿಚಾರಣೆ ನಡೆಸುವಂತೆ ಆಕೆಯ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಜಿಯಾ ಖಾನ್ ಅವರನ್ನು ಸೂರಜ್ ಪಾಂಚೋಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ಅವರು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ಸಾಬೀತುಪಡಿಸಲು ಪೊಲೀಸರು ಮತ್ತು ಸಿಬಿಐ ಕಾನೂನು ಸಾಕ್ಷ್ಯಗಳನ್ನು ಸಂಗ್ರಹಿಸಿಲ್ಲ ಎಂದು ಆರೋಪಿಸಿದರು.

ಈ ಪ್ರಕರಣದಲ್ಲಿ ಸಿಬಿಐ ಕೋರ್ಟ್ ತೀರ್ಪು ಏನು ಅನ್ನುವ ಕುತೂಹಲ ಹಲವರಲ್ಲಿತ್ತು. ಸದ್ಯ ತೀರ್ಪು ಹೊರಬಿದ್ದಿದ್ದು ನಟ ಸೂರಜ್ ಪಂಚೋಲಿಗೆಬಿಗ್ ರಿಲೀಫ್ ಸಿಕ್ಕಿದೆ.
*2013, ಜೂನ್ 3ರಂದು ನಟಿ ಜಿಯಾ ಖಾನ್ ಮುಂಬೈ ಜುಹುದ ತಮ್ಮ ನಿವಾಸದಲ್ಲಿ(25) ಶವವಾಗಿ ಪತ್ತೆ ಆಗಿದ್ದರು.
*ಘಟನೆ ಸ್ಥಳದಲ್ಲಿ ಸಿಕ್ಕಿದ 6 ಪುಟಗಳ ಪತ್ರವನ್ನು ಆಧರಿಸಿ, ಜೂನ್ 10ರಂದು ಮುಂಬೈ ಪೊಲೀಸರು ನಟ ಸೂರಜ್ ಪಂಚೋಲಿನ ಬಂಧಿಸಿದ್ದರು. ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಸೂರಜ್ ಬಂಧನವಾಗಿತ್ತು.
*201ರಿಂದ ಜಿಯಾ ಖಾನ್ ಹಾಗೂ ಸೂರಜ್ ಪಂಚೋಲಿ ಡೇಟಿಂಗ್‌ನಲ್ಲಿ ಇದ್ದರು ಎನ್ನುವ ಮಾಹಿತಿ ಸಿಕ್ಕಿದೆ.
*ಜಿಯಾ ಖಾನ್ ತಾಯಿ ರಾಬಿಯಾ ಅಮೀನ್ ತಮ್ಮ ಮಗಳದ್ದು ಆತ್ಮಹತ್ಯೆ ಅಲ್ಲ, ಅದು ನಿಜಕ್ಕೂ ಕೊಲೆ ಎಂದು ಆರೋಪಿಸುತ್ತಾ ಬರ್ತಿದ್ದಾರೆ.
*ತನ್ನ ಮಗಳಿಗೆ ಸೂರಜ್ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಅದನ್ನು ಸಹಿಸಲು ಸಾಧ್ಯವಾಗದೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಕೆಯ ತಾಯಿ ಹೇಳಿದ್ದರು.
*2013ರ ಅಕ್ಟೋಬರ್‌ನಲ್ಲಿ ರಬಿಯಾ, ಜಿಯಾ ಖಾನ್ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಅರ್ಜಿಯನ್ನು ಒಪ್ಪಿದ ಕೋರ್ಟ್, ಸಿಬಿಐ ತನಿಖೆಗೆ ಆದೇಶ ನೀಡಿತ್ತು.
*2014ರ ಜುಲೈನಲ್ಲಿ ಮುಂಬೈ ಪೊಲೀಸರಿಂದ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತ್ತು.
*ಸೂರಜ್ ಪಂಚೋಲಿ ಬಲವಂತವಾಗಿ ನನ್ನ ಮಗಳೊಟ್ಟಿಗೆ ಸಂಬಂಧ ಇಟ್ಟುಕೊಂಡಿದ್ದ ಎಂದು ರಬಿಯಾ ಆರೋಪಿಸಿದ್ದಾರೆ. ಈ ಕೋನದಲ್ಲಿ ಪೊಲೀಸರು, ಸಿಬಿಐ ಪ್ರಕರಣದಲ್ಲಿ ಸಾಕ್ಷಾಧಾರ ಸಾಕ್ಷಾಧಾರಗಳನ್ನು ಸಂಗ್ರಹಿಸಿಲ್ಲ ಎಂದು ಆಕೆ ಆರೋಪಿಸಿದ್ದಾರೆ.
*2018ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಸೂರಜ್ ಪಾಂಚೋಲಿ ವಿರುದ್ಧ ಹೆಚ್ಚಿನ ತನಿಖೆಯ ಮನವಿಯನ್ನು ತಿರಸ್ಕರಿಸಿತು.
*ಸಿಬಿಐ ಈ ಪ್ರಕರಣ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ವಿಚಾರಣೆ ನಮ್ಮಲ್ಲಿ ಸಾಧ್ಯವಿಲ್ಲ ಎಂದು ಹೇಳಿ 2021ರಲ್ಲಿ ಮುಂಬೈ ಕೋರ್ಟ್ ಪ್ರಕರಣವನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
*ಕಳೆದ ವರ್ಷ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ಮಾಡುವಂತೆ ಕೋರಿ ರಾಬಿಯಾ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತು.
*ಇನ್ನು ನಟಿ ಸೂರಜ್ ಪಂಚೋಲಿ ಮಾತ್ರ ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ನಾನು ಅಮಾಯಕ, ನಿರಪರಾಧಿ ಎಂದು ವಾದಿಸುತ್ತಾ ಬರ್ತಿದ್ದಾರೆ.
*ಈ ಪ್ರಕರಣದಲ್ಲಿ ಈವರೆಗೆ 22 ಮಂದಿ ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸಿದೆ.
ಇಂದು(28, ಏಪ್ರಿಲ್ 2023) ಸಿಬಿಐ ಕೋರ್ಟ್ ಪ್ರಕರಣದ ತೀರ್ಪು ಪ್ರಕಟಿಸಿದ್ದು ನಟ ಸೂರಜ್ ನಿರಪರಾಧಿ ಎಂದು ಕೋರ್ಟಿ ತಿಳಿಸಿದೆ. ಜಿಯಾ ಖಾನ್ ಆತ್ಮಹತ್ಯೆಗೆ ಸೂರಜ್ ಕುಮ್ಮಕ್ಕು ನೀಡಿದ್ದರು ಎನ್ನುವ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ ಎಂದು ಕೋರ್ಟ್ ಹೇಳಿದೆ.


Click it and Unblock the Notifications











