ಹಿಂದಿಯಲ್ಲಿ 'ಜಿಗರ್ ಥಂಡ' ರೀಮೇಕ್: ನಾಯಕ ಯಾರು?
ಸೌತ್ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಆಗಿದ್ದ ಜಿಗರ್ ಥಂಡ ಈಗ ಬಾಲಿವುಡ್ ಗೆ ಪ್ರವೇಶ ಮಾಡುತ್ತಿದೆ. 2014ರಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಸಿದ್ಧಾರ್ಥ್, ಬಾಬಿ ಸಿಂಹ ನಟಿಸಿದ್ದರು.
ಇದೇ ಚಿತ್ರವನ್ನ ಕನ್ನಡದಲ್ಲಿ 2016ರಲ್ಲಿ ಜಿಗರ್ ಥಂಡ ಹೆಸರಿನಲ್ಲೇ ತೆರೆಗೆ ತರಲಾಯಿತು. ರಾಹುಲ್, ರವಿಶಂಕರ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದರು.
ಈಗ ತೆಲುಗಿನಲ್ಲಿ ವರುಣ್ ತೇಜ ಮತ್ತು ಅಥರ್ವ ಕಾಂಬಿನೇಷನ್ ನಲ್ಲಿ 'ಗದ್ದಲಕೊಂಡ ಗಣೇಶ್' ಎಂಬ ಹರೆಸರಿನಲ್ಲಿ ಸಿನಿಮಾ ರೀಮೇಕ್ ಆಗಿದೆ. ಹೀಗೆ, ದಕ್ಷಿಣ ಸಿನಿಲೋಕದಲ್ಲಿ ಯಶಸ್ಸು ಕಂಡ ಈ ಚಿತ್ರ ಈಗ ಬಾಲಿವುಡ್ ನಲ್ಲಿ ಮೂಡಿಬರುತ್ತಿದೆ.

ಹಿಂದಿ ನಿರ್ದೇಶಕ ಅಭಿಷೇಕ್ ಚೌಬೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಸಾಜಿದ್ ನದಿಯಾದ್ವಾಲ ನಿರ್ಮಿಸಲಿದ್ದಾರೆ. ಆದರೆ, ಯಾರು ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ವಿಷಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
English summary
South Super hit movie Jigarthanda will remade in hindi. director abhishek chaubey will direct this movie.


Click it and Unblock the Notifications