ನನ್ನ ಮೊದಲ ಸಿನಿಮಾ ಬ್ಲಾಕ್‌ಬಸ್ಟರ್, ಆದರೆ ಹಾಸಿಗೆ ಹಂಚಿಕೊಳ್ಳದಿದ್ದಕ್ಕೆ ನನ್ನ ಬದುಕು ಹಾಳಾಯ್ತು-ಖ್ಯಾತ ನಟಿ ಕಣ್ಣೀರು

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.

ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ.

Jividha Sharma My Self-Worth Was Shaken Over Casting Couch Demands After a Blockbuster Hit

ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಇದಕ್ಕೆ ಪುರಾವೆ ಎನ್ನುವಂತೆ ಇಲ್ಲಿಯವರೆಗೆ ಹಲವಾರು ಜನ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಸಾಲಿಗೆ ಈಗ ''ಜಿವಿಧಾ ಶರ್ಮಾ'' ಸೇರಿಕೊಂಡಿದ್ಧಾರೆ.

ಹೌದು.. ಜಿವಿಧಾ ಶರ್ಮಾ.. ಬಾಲಿವುಡ್‌ನ ಬೆಡಗಿ. ಐಶ್ವರ್ಯ ರೈ ಅಭಿನಯದ ''ತಾಲ್'' ಚಿತ್ರದಲ್ಲಿ ಐಶ್ವರ್ಯ ರೈ ತಂಗಿಯ ಪಾತ್ರವನ್ನು ಮಾಡಿದ್ದರು ಇವರು. ಇನ್ನು 2002ರಲ್ಲಿ ನಾಯಕಿಯಾಗಿ ಕೂಡ ಬಡ್ತಿ ಪಡೆದ ಜಿವಿಧಾ ''ಯೆ ದಿಲ್ ಆಶಿಕಾನಾ'' ಚಿತ್ರದಲ್ಲಿ ಕಾಣಿಸಿಕೊಂಡರು.

ಜಿವಿಧಾ ಅದೃಷ್ಟ ಮೊದಲ ಚಿತ್ರವೇ ಬ್ಲಾಕ್‌ಬಸ್ಟರ್ ಕೂಡ ಆಯ್ತು. ಇನ್ನೇನು ಬದುಕು ಬದಲಾಯ್ತು, ಬಣ್ಣದ ಲೋಕ ನನ್ನ ಕೈ ಹಿಡಿಯಿತು ಎಂದೇ ಜಿವಿಧಾ ಎಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ಹೇಳ ಹೆಸರಿಲ್ಲದಂತೆ ಕಾಣೆಯಾದರು ಜೆವಿಧಾ.

ಇಂಥಾ ಜಿವಿಧಾ ಚಿತ್ರರಂಗದಿಂದ ತಾವು ದೂರವಾಗಿದ್ದೇಕೆ..? ಖ್ಯಾತಿಯ ಉತ್ತುಂಗವನ್ನೇರಬೇಕಿದ್ದ ತಮ್ಮ ವೃತ್ತಿ ಬದುಕು ಹಾಳಾಗಿದ್ದೇಕೆ..? ಎನ್ನುವುದನ್ನು ಹೇಳಿದ್ದಾರೆ. ಚಿತ್ರರಂಗದ ಕರಾಳ ಸತ್ಯವನ್ನು ಹೇಳಿದ್ದಾರೆ.

Jividha Sharma My Self-Worth Was Shaken Over Casting Couch Demands After a Blockbuster Hit

ಈ ಕುರಿತು ''ಲಲ್ಲನ್ ಟಾಪ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಜಿವಿಧಾ ''ಯೆ ದಿಲ್ ಆಶಿಕಾನಾ'' ನನ್ನ ವೃತ್ತಿ ಬದುಕಿನ ಮೈಲಿಗಲ್ಲು. ಆ ಕಾಲದಲ್ಲಿ ಸಿಲ್ವರ್ ಜ್ಯುಬಿಲಿ ಪ್ರದರ್ಶನ ಕಂಡ ಚಿತ್ರ ಅದು. ಈ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಎಲ್ಲರ ಕಣ್ಣು ನನ್ನ ಮೇಲಿತ್ತು ಎಂದು ಹೇಳಿದ್ದಾರೆ.

ಮುಂದುವರೆದು ನನ್ನ ಜೊತೆ ಕೆಲಸ ಮಾಡಲು ಹಲವರು ಉತ್ಸುಕರಾಗಿದ್ದರು, ಈ ಹಿನ್ನೆಲೆ ಆ ಕಾಲದ ಪ್ರತಿಯೊಬ್ಬ ನಿರ್ದೇಶಕರನ್ನು ಕೂಡ ನಾನು ಭೇಟಿಯಾದೆ ಎಂದು ಹೇಳಿರುವ ಜಿವಿಧಾ, ಜ್ಯೂ ಎನ್‌ಟಿಆರ್ ಅವರ ಚಿತ್ರಕ್ಕೆ ಕೂಡ ನಾನು ನಾಯಕಿಯಾಗಿದ್ದೇ ತೆಲುಗಿನ ತಾರಕರತ್ನ ಅವರ ಜೊತೆ ''ಯುವ ರತ್ನ'' ಚಿತ್ರವನ್ನು ಕೂಡ ಮಾಡಿದೆ. ಆದರೆ ಇದರ ಹೊರತಾಗಿಯೂ ಕೂಡ ನನಗೆ ಸವಾಲುಗಳು ಎದುರಾಗಲು ಶುರುವಾದವು ಎಂದು ಹೇಳಿದ್ಧಾರೆ.

ನನಗೆ ಆಗ ಸಿಕ್ಕವರಲ್ಲಿ ಬಹುತೇಕರು ನನ್ನ ಜೊತೆ ಮಲಗಲು ಬಯಸಿದ್ದರು, ಹಾಸಿಗೆ ಹಂಚಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದರು, ಆದರೆ ನಾನು ಇದಕ್ಕೆ ಸುತಾರಾಂ ರೆಡಿ ಇರಲಿಲ್ಲ. ಗೌರವಯುತವಾಗಿ ಕೆಲಸ ಮಾಡಬೇಕೆನ್ನುವುದು ನನ್ನ ಆಶಯ ಮತ್ತು ಉದ್ದೇಶವಾಗಿತ್ತು ಎಂದು ಹೇಳಿರುವ ಜಿವಿಧಾ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿಯಿಂದ ನನ್ನ ವೃತ್ತಿ ಬದುಕು ಸರ್ವನಾಶವಾಯ್ತು ಎಂದು ಹೇಳಿದ್ಧಾರೆ.

ಇನ್ನೂ ಕೆಲವರು ಭೇಟಿಯ ನೆಪದಲ್ಲಿ ದೈಹಿಕವಾಗಿ ಹತ್ತಿರವಾಗಲು ಪ್ರಯತ್ನ ಮಾಡುತ್ತಿದ್ದರು. ಸುಮ್ಮ ಸುಮ್ಮನೆ ನನ್ನನ್ನು ಮುಟ್ಟುತ್ತಿದ್ದರು. ನೀವು ತುಂಬಾ ಸುಂದರವಾಗಿದ್ದೀರಾ. ನೀವು ಎಂದರೆ ನನಗೆ ತುಂಬಾ ಇಷ್ಟ ಎಂದೆಲ್ಲಾ ಹೇಳುತ್ತಿದ್ದರು. ಆಗ ನಾನು ಅಪಾಯವನ್ನರಿತು ಅಲ್ಲಿಂದ ಮೆಲ್ಲನೆ ಜಾಗ ಖಾಲಿ ಮಾಡುತ್ತಿದ್ದೇ ಎಂದಿರುವ ಜಿವಿಧಾ ಇದರಿಂದ ಕೂಡ ಹಲವು ಅವಕಾಶಗಳು ನನಗೆ ಕೈ ತಪ್ಪಿದವು ಎಂದು ಹೇಳಿದ್ಧಾರೆ.

ಇದಲ್ಲದೇ ಮಲಗುವಂತೆ ಎಷ್ಟು ನನ್ನ ಮೇಲೆ ಒತ್ತಡ ಹಾಕುತ್ತಿದ್ದರು ಎಂದರೆ, ಎಲ್ಲರೂ ಇಲ್ಲಿ ಮಲಗೆದ್ದೇ ಅವಕಾಶಗಳನ್ನು ಪಡೆಯುತ್ತಾರೆ. ನೀನು ಮಲಗುವುದಿಲ್ಲ ಎಂದರೆ ನಿನ್ನಲ್ಲಿ ಅಂತಹ ವಿಶೇ‍ಷತೆ ಏನಿದೆ ಎಂದು ಕೂಡ ನನ್ನನ್ನು ಕೇಳಿದವರು ಇದ್ದಾರೆ. ಹೇಳಿದವರು ಇದ್ದಾರೆ ಎಂದು ಹೇಳೀರುವ ಜಿವಿಧಾ ಇವೆಲ್ಲವು ನನ್ನನ್ನು ಮಾನಸಿಕವಾಗಿ ಜರ್ಜರಿತಗೊಳಿಸಿತ್ತು ಈ ಕಾರಣಕ್ಕೆ ನಾನು ಹಿಂದೆ ಸರಿದೆ ಎಂದು ಸಂದರ್ಶನದಲ್ಲಿ ಹೇಳಿದ್ಧಾರೆ.

ಅಂದ್ಹಾಗೇ ಜಿವಿಧಾ ಈ ಸಂದರ್ಶನವನ್ನು ಈ ವರ್ಷದ ಏಪ್ರಿಲ್‌ನಲ್ಲಿ ನೀಡಿದ್ದರು. ಇವರು ನೀಡಿದ ಸಂದರ್ಶನದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿವೆ.

More from Filmibeat

English summary
Explore the untold story of Jividha Sharma's career after 'Yeh Dil Aashiqanaa.' Discover how she stood against the casting couch and why she was sidelined despite her success.
Read more about: casting couch me too
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X