For Quick Alerts
  ALLOW NOTIFICATIONS  
  For Daily Alerts

  ತಾಪ್ಸಿ ಪನ್ನು ನಟನೆಯ ಹಿಂದಿ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ

  |

  ಬಾಲಿವುಡ್‌ನ ಖ್ಯಾತ ನಟಿ ತಾಪ್ಸಿ ಪನ್ನು ಭಾರತೀಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ ಬಯೋಪಿಕ್‌ಗೆ ಕನ್ನಡ ಖ್ಯಾತ ನಟರೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ನಟ ಜೆಕೆ.

  ಶಬಾಷ್ ಮಿಥು ಹೆಸರಿನಲ್ಲಿ ಸೆಟ್ಟೇರಿರುವ ಚಿತ್ರದಲ್ಲಿ ತಾಪ್ಸಿ ಪನ್ನು ಮಿಥಾಲಿ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಸದ್ಯ ಚಿತ್ರದ ಹೊಸ ಅಪ್ ಡೇಟ್ ಅಂದರೆ ಚಿತ್ರದಲ್ಲಿ ಕನ್ನಡದ ನಟ ಜೆಕೆ ನಟಿಸುತ್ತಿರುವ ಮಾಹಿತಿ ಬಹಿರಂಗವಾಗಿರುವುದು. ಮುಂದೆ ಓದಿ...

  ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಭಾಮ ಹರೀಶ್, ಜೆಕೆಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಭಾಮ ಹರೀಶ್, ಜೆಕೆ

  ಜೆಕೆ ಚುರುಕುತನ ನೋಡಿ ಆಯ್ಕೆ ಮಾಡಿದ ಚಿತ್ರತಂಡ

  ಜೆಕೆ ಚುರುಕುತನ ನೋಡಿ ಆಯ್ಕೆ ಮಾಡಿದ ಚಿತ್ರತಂಡ

  ಸ್ನೇಹಿತನ ಮೂಲಕ ಆಡಿಷನ್‌ಗೆ ಹೋಗಿದ್ದ ಜೆಕೆ ಚಿತ್ರತಂಡ ಕೊಟ್ಟ ಸ್ಕ್ರಿಪ್ಟ್ ಅನ್ನು ಕೇವಲ 10 ನಿಮಿಷದಲ್ಲಿ ರೆಡಿಯಾಗಿ ಪ್ರದರ್ಶನ ಮಾಡಿದ್ದಾರಂತೆ. ಜೆಕೆ ಅವರ ಚುರುಕುತನ ನೋಡಿ ಚಿತ್ರತಂಡ ಆಯ್ಕೆ ಮಾಡಿದೆ. ಜೆಕೆ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ, ಆದರೆ ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಜೆಕೆ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

  ಜೆಕೆ ಹೇಳಿದ್ದೇನು?

  ಜೆಕೆ ಹೇಳಿದ್ದೇನು?

  ಈ ಬಗ್ಗೆ ಸಂತಸಗೊಂಡಿರುವ ಜೆಕೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ನಾನು ನನ್ನ ಪರಿಶ್ರಮದಲ್ಲಿ ಮಾತ್ರ ನಂಬಿದ್ದೇನೆ. ನಾನು ಯಶಸ್ವಿಯಾಗದೆ ಇರಬಹುದು ಆದರೆ ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಎಂದಿಗೂ ಬಿಟ್ಟುಕೊಡಲ್ಲ' ಎಂದು ಹೇಳಿದ್ದಾರೆ.

  ಈಗಾಗಲೇ ಬಿಡುಗಡೆಯಾಗಿದೆ ಆಗಿದೆ ಫಸ್ಟ್ ಲುಕ್

  ಈಗಾಗಲೇ ಬಿಡುಗಡೆಯಾಗಿದೆ ಆಗಿದೆ ಫಸ್ಟ್ ಲುಕ್

  ಶಬಾಷ್ ಮಿಥು ಚಿತ್ರಕ್ಕೆ ಶಾರುಖ್ ಖಾನ್ ನಟನೆಯ ರಯೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ರಾಹುಲ್ ಧೋಲಾಕಿಯಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕಾಗಿ ತಾಪ್ಸಿ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದಾರೆ. ಇನ್ನು ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಸಿನಿ ಅಭಿಮಾನಿಗಳ ಗಮನ ಸೆಳೆದಿದೆ.

  Bhojpuri ಸೇರಿಸಿದಂತೆ ಎಂಟು ಭಾಷೆಗಳಲ್ಲಿ ನಟಿಸಿದ ಕನ್ನಡತಿ Harshika Poonacha | Filmibeat Kannada
  ಮಹಿಳಾ ಕ್ರಿಕೆಟರ್ ಮೊದಲ ಬಯೋಪಿಕ್

  ಮಹಿಳಾ ಕ್ರಿಕೆಟರ್ ಮೊದಲ ಬಯೋಪಿಕ್

  ಅಂದ್ಹಾಗೆ ಮಹಿಳಾ ಕ್ರಿಕೆಟರ್ ಬಗ್ಗೆ ಬರುತ್ತಿರುವ ಮೊದಲ ಬಯೋಪಿಕ್ ಇದಾಗಿದೆ. ಈಗಾಗಲೆ ಸಾಕಷ್ಟು ಬಯೋಪಿಕ್‌ಗಳು ಬಿಡುಗಡೆಯಾಗಿವೆ. ಇನ್ನು ಕೆಲವು ಬಯೋಪಿಕ್ ಗಳು ರಿಲೀಸ್ ಗೆ ರೆಡಿಯಾಗುತ್ತಿವೆ. ಇತ್ತೀಚಿಗಷ್ಟೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ರಿಲೀಸ್ ಆಗಿದೆ. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇನ್ನು ಭಾರತ ಮೊದಲಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆದ್ದ ಕ್ಷಣ, ಜೊತೆಗೆ ಅನುಷ್ಕಾ ಶರ್ಮಾ ಅಭಿನಯದ ಮತ್ತೋರ್ವ ದಿಗ್ಗಜ ಆಟಗಾರ್ತಿ ಜೂಲನ್ ನಿಶಿತ್ ಗೋಸ್ವಾಮಿ ಜೀವನ ಕೂಡ ತೆರೆಮೇಲೆ ಬರುತ್ತಿದೆ.

  English summary
  Kannada Actor JK will playing important role in Taapsee Pannu's Shabaash Mithu biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X