ಜಾನ್ ಅಬ್ರಾಹಮ್ ಮತ್ತು ಪತ್ನಿಗೆ ಕೊರೊನಾ!
ಬಾಲಿವುಡ್ ನಟ ಜಾನ್ ಅಬ್ರಾಹಮ್ ಮತ್ತು ಪತ್ನಿ ಪ್ರಿಯಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಜಾನ್ ಅಬ್ರಾಹಮ್ ಹಂಚಿಕೊಂಡಿದ್ದಾರೆ. "ನನಗೂ ನನ್ನ ಪತ್ನಿ ಪ್ರಿಯಾಗೂ ಕೊರೋನಾ ಪಾಸಿಟಿವ್ ಆಗಿದೆ. 3 ದಿನಗಳಿಂದ ನಾವು ಯಾರ ಸಂಪರ್ಕಕ್ಕೂ ಬಂದಿಲ್ಲ. ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದೇವೆ. ನಾವಿಬ್ಬರೂ ವ್ಯಾಕ್ಸೀನ್ ಪಡೆದುಕೊಂಡಿದ್ದೇವೆ. ನೀವು ಎಚ್ಚರಿಕೆ ಇಮದ ಇರಿ. ಮಾಸ್ಕ್ ಧರಿಸಿ" ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಜಾನ್ ಬರೆದುಕೊಂಡಿದ್ದಾರೆ.

ಅರ್ಜುನ್ ಕಪೂರ್ ಮತ್ತು ಅನ್ಸುಲ್‌ಗೆ ಕೊರೊನಾ!
ಇತ್ತೀಚೆಗೆ ಅರ್ಜುನ್ ಕಪೂರ್ ಮತ್ತು ಸಹೋದರಿ ಅನ್ಸುಲ್ ಕಪೂರ್‌ಗೆ ಕರೊನಾ ಪಾಸಿಟ್ ಆಗಿತ್ತು. ಹಾಗಾಗಿ ಅರ್ಜುನ್ ಕಪೂರ್ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಈ ವರ್ಷದಲ್ಲಿ ನಟ ಅರ್ಜುನ್ ಕಪೂರ್‌ಗೆ ಎರಡನೇ ಬಾರಿ ಕೊರೊನಾ ಕಾಣಿಸಿಕೊಂಡಿದೆ. ಬಳಿಕ ಸಹೋದರಿ ಅನ್ಸುಲ್ ಕಪೂರ್‌ಗೂ ಕೂಡ ಕೊರೊನಾ ಬಂದಿರೋದು ವರದಿ ಆಗಿತ್ತು.

ಕೊರೊನಾ ಇದ್ದರು ಪಾರ್ಟಿ ಮಾಡಿದ್ದ ಕರೀನಾ!
ಇನ್ನು ನಟಿ ಕರೀನಾ ಕಪೂರ್‌ಗೆ ಕೊರೊನಾ ಇದ್ದರೂ ಕೂಡ ಪಾರ್ಟಿ ಮಾಡಿ ಸುದ್ದಿ ಆಗಿದ್ದರು. ಪಾರ್ಟಿಯಲ್ಲಿ ಕರಿನಾ ಜೊತೆಗೆ ಭಾಗಿ ಆದ ಅಮೃತ ಅರೋರಾ, ಮಹೀಪ್ ಕಪೂರ್ ಗೂ ಕೊರೊನಾ ತಗುಲಿತ್ತು.ಹಾಗಾಗಿ ಕರೀನಾ ಮನೆಯನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿತ್ತು. ಜೊತೆಗೆ ಈ ವಿಚಾರವಾಗಿ ಕರೀನಾ ಟ್ರೋಲ್ ಕೂಡ ಆಗಿದ್ರು.

ಬಾಲಿವುಡ್ ಪಾರ್ಟಿಗಳೇ ಕೊರೊನಾ ಹಬ್ಬಲು ಕಾರಣ?
ಇನ್ನು ಬಾಲಿವುಡ್ ಸಿನಿಮಾ ಮಂದಿಯಲ್ಲಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಅವರ ಪಾರ್ಟಿ ಎನ್ನಾಲಾಗುತ್ತಿದೆ. ಹೆಚ್ಚಾಗಿ ಬಾಲಿವುಡ್ ತಾರೆಯರು ಪಾರ್ಟಿಗಳನ್ನು ಮಾಡುತ್ತಾರೆ. ಪಾರ್ಟಿಯಲ್ಲಿ ಹೆಚ್ಚೆಚ್ಚು ಜನ ಸೇರುತ್ತಾರೆ. ಇನ್ನು ಕೊರೊನಾ ಇರುವ ವಿಚಾರ ಬಹಿರಂಗ ಆದರೂ ಕೂಡ, ಅರ್ಜುನ್ ಕಪೂರ್ ಮಲೈಕಾ ಜೊತೆಗೆ ಸೇರಿ ಹೊಸ ವರ್ಷದ ಪಾರ್ಟಿ ಮಾಡಿ ಫೋಟೊ ಹಂಚಿಕೊಂಡಿದ್ದಾರೆ. ಹಾಗಾಗಿ ಅರ್ಜುನ್ ಕೂಡ ಟೀಕೆಗೆ ಗುರಿಯಾಗಿದ್ದರು.


Click it and Unblock the Notifications











