ಶಾರುಖ್ ಖಾನ್ ಜೊತೆ ನಟಿಸಲು ದೀಪಿಕಾ ಮತ್ತು ಜಾನ್ ಅಬ್ರಹಾಂ ಇಷ್ಟೊಂದು ಸಂಭಾವನೆ ಕೇಳಿದ್ರಾ?
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಎರಡು ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದ್ದರು. ಇದೀಗ ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಈಗಾಗಲೇ ಶಾರುಖ್ ಬಳಿ 4 ಸಿನಿಮಾಗಳಿವೆ ಎಂದು ಹೇಳಲಾಗುತ್ತಿದೆ. ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ತಮಿಳು ನಿರ್ದೇಶಕ ಅಟ್ಲೀ, ಸಿದ್ಧಾರ್ಥ್ ಆನಂದ್ ಅವರ ಸಿನಿಮಾಗಳು ಸೇರಿದಂತೆ ಒಟ್ಟು ಸಿನಿಮಾಗಳಲ್ಲಿ ಶಾರುಖ್ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇದೀಗ ಶಾರುಖ್ ಖಾನ್ ಮೊದಲು ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಶಾರುಖ್ ಖಾನ್ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಪಠಾಣ್ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಚಿತ್ರದಲ್ಲಿ ಶಾರುಖ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುದ್ದಾರೆ. ಖಳನಟನ ಪಾತ್ರದಲ್ಲಿ ನಟ ಜಾನ್ ಅಬ್ರಹಾಂ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಜೊತೆ ನಟಿಸಲು ದೀಪಿಕಾ ಮತ್ತು ಜಾನ್ ಅಬ್ರಹಾಂ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಮುಂದೆ ಓದಿ..

ಶಾರುಖ್ ಜೊತೆ ನಟಿಸಲು ದೀಪಿಕಾ ಪಡೆಯುವ ಸಂಭಾವನೆವಿದು
ಬಾಲಿವುಡ್ ನ ಬಹುಬೇಡಿಕೆಯ ನಟಿಯಾಗಿರುವ ದೀಪಿಕಾ ಪಡುಕೋಣೆ ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ನಟಿಯಲ್ಲಿ ಒಬ್ಬರಾಗಿದ್ದಾರೆ. ಇದೀಗ ಕೇಳಬರುತ್ತಿರುವ ಸುದ್ದಿಯ ಪ್ರಕಾರ ದೀಪಿಕಾ, ಶಾರುಖ್ ಖಾನ್ ಜೊತೆ ನಟಿಸಲು ಬರೋಬ್ಬರಿ 15 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ಈ ಮೂಲಕ ದೀಪಿಕಾ ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದರೆ.

ಜಾನ್ ಅಬ್ರಹಾಂ ಬೇಡಿಕೆ ಇಟ್ಟ ಸಂಭಾವನೆ
ಚಿತ್ರದಲ್ಲಿ ಜಾನ್ ಅಬ್ರಹಾಂ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಜಾನ್ ಅಬ್ರಹಾಂ, ಶಾರುಖ್ ಜೊತೆ ನಟಿಸಲು 20 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜಾನ್ ಸದ್ಯ ಸತ್ಯಮೇವ ಜಯತೆ-2, ಏಕ್ ವಿಲನ್-2 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

200 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಸಿನಿಮಾ
ಶಾರುಖ್ ಖಾನ್ 2 ವರ್ಷದ ಬಳಿಕ ಸಿನಿಮಾ ಮಾಡುತ್ತಿರುವ ಕಾರಣ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಪಠಾಣ್ ಸಿನಿಮಾ ಬರೋಬ್ಬರಿ 200 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆಯಂತೆ.

2021 ದೀಪಾಳಿಗೆ ಸಿನಿಮಾ ರಿಲೀಸ್
2 ವರ್ಷದ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿರುವ ಶಾರುಖ್ ಹೊಸ ಸಿನಿಮಾ ದೀಪಾಳಿಗೆ ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಶಾರುಖ್ ಸದ್ಯ ಐಪಿಎಲ್ ನಲ್ಲಿ ಬ್ಯುಸಿ ಇರುವ ಕಾರಣ ಐಪಿಎಲ್ ಮುಗಿಯುತ್ತಿದ್ದಂತೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಡಿಸೆಂಬರ್ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.


Click it and Unblock the Notifications











