twitter
    For Quick Alerts
    ALLOW NOTIFICATIONS  
    For Daily Alerts

    ಜಾನ್ ಅಬ್ರಹಾಂ ಮುಂಬೈ ಫಿಲಂ ಸೆಟ್ ಮೇಲೆ ದಾಳಿ

    |

    ಬಾಲಿವುಡ್ ನಟ ಜಾನ್ ಅಬ್ರಹಾಂ ಅವರ ಬರಲಿರುವ ಇನ್ನೂ ಹೆಸರಿಡದ ಚಿತ್ರಕ್ಕಾಗಿ ನಿರ್ಮಿಸಲಾಗಿದ್ದ ಫಿಲಂ ಶೂಟಿಂಗ್ ಸೆಟ್, ದಾಳಿಗೆ ತುತ್ತಾಗಿದೆ. 'ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ' ಈ ದಾಳಿಯ ರೂವಾರಿ ಎನ್ನಲಾಗಿದೆ. ಎಂಎಸ್ ಎನ್ ವರ್ಕರ್ ಪ್ರಕಾಶ್ ಧಾರೇಕರ್ ಅವರ ಡ್ರೈವರ್ ಮೋರೆ ಹಾಗೂ ವಾಚ್ ಮನ್ ಸಂಜು ಭುಟ್ಕಿ ಅವರ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಈ ಘಟನೆಗೆ ಇದೇ ಕಾರಣ ಎನ್ನಲಾಗಿದೆ.

    ಸುದ್ದಿ ಮಾಧ್ಯಮಕ್ಕೆ ಬಂದ ಮಾಹಿತಿ ಪ್ರಕಾರ, ಜಾನ್ ಅಬ್ರಹಾಂ ಅವರ ಲಕ್ಷಾಂತರ ರು ಬೆಲೆಬಾಳುವ ವ್ಯಾನಿಟಿ ವ್ಯಾನ್ ಹಾಗೂ ಸಲಕರಣೆಗಳು ಈ ಘಟನೆ ವೇಳೆ ಧ್ವಂಸವಾಗಿವೆ. 12 ಜನರ ಗುಂಪೊಂದು ಈ ಕೃತ್ಯ ಎಸಗಿದ್ದು, ಎಂಎಸ್ ಎನ್ ಕಾರ್ಪೋರೇಟರ್ ಕೂಡ ಇದರಲ್ಲಿ ಸೇರಿದ್ದಾರೆ. ಈ 12 ಮಂದಿಯನ್ನು ದಾಳಿ ಸಂಬಂಧ ಬಂಧಿಸಲಾಗಿದೆ.

    ಧಾರೇಕರ್ ಡ್ರೈವರ್ ಮೋರೆ ಗಾರ್ಡನ್ ವೇಫರ್ಸ್ ಕಂಪನಿ, ಟಾಟಾ ಪವರ್ ಹೌಸ್ ಸಮೀಪ ಸ್ಕೂಟರ್ ಮೂಲಕ ಸಾಗುತ್ತಿದ್ದಾಗ ಸಂಜು ಭುಟ್ಕಿ ಅವರನ್ನು ತಡೆದು ನಿಲ್ಲಿಸಿದ್ದಾರೆ. ಅಲ್ಲಿಂದ ವಾದ-ವಿವಾದ ಪ್ರಾರಂಭವಾಗಿದೆ. ತದನಂತರ ಭುಟ್ಕಿ, ತನ್ನ ಕಡೆಯ ಸೀನಿಯರ್ ಕಿರಣ್ ಶಾ ಎಂಬವರನ್ನು ಕರೆದಾಗ, ಮೋರೆ ಕಿರಣ್ ಶಾಗೆ ಭಾರಿ ಅವಾಜ್ ಹಾಕಿದ್ದಾರೆ. ಅಲ್ಲಿಂದ ಮುಂದೆ ಮಾತಿನಲ್ಲಿ ನಡೆಯುತ್ತಿದ್ದ ಚಕಮಕಿ ದಾಳಿ ರೂಪ ಪಡೆದಿದೆ.

    ಇಷ್ಟಾಗಿದ್ದೇ ತಡ, ಎಂಎಸ್ ಎಸ್ ಕೆಲಸಗಾರರು ಜಾನ್ ಅಬ್ರಹಾಂ ಶೂಟಿಂಗ್ ಸೆಟ್ ಕೆಲಸ ನಡೆಯುತ್ತಿದ್ದ ಆ ಜಾಗದಲ್ಲಿ ಪಾರ್ಕ್ ಮಾಡಲಾಗಿದ್ದ ವಾಹನಗಳ ಮೇಲೆ ದಾಳಿ ಮಾಡಿ ಅವುಗಳನ್ನು ದ್ವಂಸಗೊಳಿಸಿದ್ದಾರೆ. ಅದರಲ್ಲಿ ಜಾನ್ ಅಬ್ರಹಾಂ ಅವರಿಗೆ ಸೇರಿದ ಲಕ್ಷಾಂತರ ರು. ಬೆಲೆಬಾಳುವ ವ್ಯಾನಿಟಿ ವ್ಯಾನ್ ಕೂಡ ಸೇರಿದೆ. ಫಿಲಂ ಸೆಟ್ ಕೂಡ ಹಾಳಾಗಿ ಬಹಳಷ್ಟು ನಷ್ಟ ಸಂಭವಿಸಿದೆ. ಎಂಎಸ್ ಎನ್ ಕಾರ್ಪೋರೇಟರ್ ಸೇರಿ 12 ಮಂದಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್)

    English summary
    In a recent case of hooliganism, actor John Abraham's upcoming untitled film's set was damaged by Raj Thackeray's Maharashtra Navnirman Sena. The incident took place after an argument broke out between MNS worker Prakash Darekar's driver More and a watchman named Sanju Bhutki.
 
    Thursday, August 2, 2012, 9:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X