twitter
    For Quick Alerts
    ALLOW NOTIFICATIONS  
    For Daily Alerts

    ಕೋವಿಡ್ ಪೀಡಿತರ ಸಹಾಯಕ್ಕೆ ಸಾಮಾಜಿಕ ಜಾಲತಾಣ ಖಾತೆ ಬಿಟ್ಟುಕೊಟ್ಟ ಜಾನ್ ಅಬ್ರಹಾಂ!

    |

    ಕೋರೊನಾ ಪೀಡಿತರ ಸಹಾಯಕ್ಕೆ ಹಲವು ನಟರು ಆಮ್ಲಜನಕ ಸಿಲಿಂಡರ್‌ಗಳು, ಬೆಡ್‌ಗಳನ್ನು ನೀಡುತ್ತಿದ್ದರೆ ನಟ ಜಾನ್ ಅಬ್ರಹಾಂ ಭಿನ್ನ ದೇಣಿಗೆ ನೀಡಿದ್ದಾರೆ.

    ಕೊರೊನಾ ರೋಗಿಗಳ ಸಂಕಷ್ಟಕ್ಕೆ ಭಿನ್ನವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಅವರು ತಾತ್ಕಾಲಿಕವಾಗಿ ದೇಣಿಗೆ ನೀಡಿದ್ದಾರೆ.

    ಕೊರೊನಾ ರೋಗಿಗಳಿಗೆ ಅವರ ಕುಟುಂಬದವರಿಗೆ ಸಹಾಯವಾಗಲೆಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಎನ್‌ಜಿಓಗಳಿಗೆ ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ಪೋಸ್ಟ್ ಬರೆದಿರುವ ಜಾನ್, 'ಇದು ಬಹಳ ಸಂಕಷ್ಟದ ಸಮಯ. ನಾವೆಲ್ಲರೂ ಕೊರೊನಾದ ವಿರುದ್ಧ ಶಕ್ತಿಮೀರಿ ಹೋರಾಡಬೇಕಿದೆ'' ಎಂದಿದ್ದಾರೆ.

    John Abraham Hand Over His Social Media Accounts To NGOS To Help People Suffering From COVID 19

    ''ಕೊರೊನಾ ರೋಗಿಗಳಿಗೆ ಅವರ ಕುಟುಂಬದವರಿಗೆ ಶೀಘ್ರವಾಗಿ ನೆರವು ಒದಗಿಸಲು ಮಾಹಿತಿ ತಲುಪಿಸುವ ಕಾರಣದಿಂದ ನನ್ನ ಸಾಮಾಜಿಕ ಜಾಲತಾಣವನ್ನು ಕೆಲವು ಎನ್‌ಜಿಓಗಳಿಗೆ ಬಿಟ್ಟುಕೊಡುತ್ತಿದ್ದೇನೆ. ನನ್ನ ಸಾಮಾಜಿಕ ಜಾಲತಾಣವು ಕೊರೊನಾ ರೋಗಿಗಳ ಹಾಗೂ ಅವರ ಕುಟುಂಬಕ್ಕೆ ಸಹಾಯ ಮಾಡುವ ಪೋಸ್ಟ್‌ಗಳಿಗೆ ಸೀಮಿತವಾಗಿರಲಿದೆ'' ಎಂದಿದ್ದಾರೆ ಜಾನ್ ಅಬ್ರಹಾಂ.

    ಕೊರೊನಾ ರೋಗಿಗಳ ಸಹಾಯಕ್ಕಾಗಿ ಸಾಮಾಜಿಕ ಜಾಲತಾಣಕ್ಕೆ ಸಂದೇಶ ಕಳುಹಿಸಬಹುದು ಎಂದು ಸಹ ಜಾನ್ ಹೇಳಿದ್ದಾರೆ. ಇದು ಕೇವಲ ಆರಂಭವಷ್ಟೆ ಎಂದಿರುವ ಜಾನ್ ಇನ್ನೂ ಹಲವು ರೀತಿಯಲ್ಲಿ ತಾನು ಹಾಗೂ ತನ್ನ ಎನ್‌ಜಿಓ ಕೊರೊನಾ ಸಂಕಷ್ಟಕ್ಕೆ ನೆರವಾಗಲಿದ್ದೇವೆ ಎಂದಿದ್ದಾರೆ.

    Recommended Video

    ಕಿತ್ತಾಡೋದು ಬಿಟ್ಟು ಜನರ ಜೀವ ಉಳಿಸಿ ಸರ್ಕಾರಕ್ಕೆ ಇದು ದೊಡ್ಡ ಕೆಲಸ ಅಲ್ಲ | Filmibeat Kannada

    ಬಾಲಿವುಡ್‌ನ ಹಲವು ನಟರು ಕೊರೊನಾ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ್ದಾರೆ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ, ಸೋನು ಸೂದ್ ಇನ್ನೂ ಕೆಲವರು ಆಮ್ಲಜನಕ ಸಿಲಿಂಡರ್ ವ್ಯವಸ್ಥೆ, ಆಸ್ಪತ್ರೆ ಬೆಡ್ ವ್ಯವಸ್ಥೆ, ಹಣ ಸಹಾಯಗಳನ್ನು ಮಾಡಿದ್ದಾರೆ.

    English summary
    John Abraham hands over his social media accounts to NGOS to help people suffering from COVID 19.
    Friday, April 30, 2021, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X