For Quick Alerts
  ALLOW NOTIFICATIONS  
  For Daily Alerts

  ವಿವಾದದ ಸುಳಿಯಲ್ಲಿ ಜಾನ್ ಅಬ್ರಹಾಂ 'ಮದ್ರಾಸ್ ಕೆಫೆ'

  By Prasad
  |

  ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಈ) ಅನ್ನು ಅತ್ಯಂತ ಕೀಳುಮಟ್ಟದಲ್ಲಿ ತೋರಿಸಲಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು, ಆ.23ರಂದು ಬಿಡುಗಡೆಯಾಗಬೇಕಿರುವ ಬಾಲಿವುಡ್ ಚಿತ್ರ 'ಮದ್ರಾಸ್ ಕೆಫೆ' ವಿರುದ್ಧ ಪ್ರತಿಭಟನೆ ಆರಂಭವಾಗಿದ್ದು, ತಮಗೆ ವಿಶೇಷ ಪ್ರದರ್ಶನ ತೋರಿಸಿದ ನಂತರವೇ ಚಿತ್ರ ಬಿಡುಗಡೆ ಮಾಡಬೇಕೆಂದು ತಮಿಳು ಸಂಘಟನೆಯೊಂದು ಷರತ್ತು ಒಡ್ಡಿದೆ.

  ಶೂಜಿತ್ ಸರ್ಕಾರ್ ನಿರ್ದೇಶಿಸಿರುವ, ಜಾನ್ ಅಬ್ರಹಾಂ ಮತ್ತು ನರ್ಗೀಶ್ ಫಕ್ರಿ ಪ್ರಮುಖ ಭೂಮಿಕೆಯಲ್ಲಿರುವ ಹಿಂದಿ ಚಿತ್ರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಚಿತ್ರಕಥೆಯನ್ನು ಹೊಂದಿದೆ. ರಾಜೀವ್ ಹತ್ಯೆಯ ಸಂಚನ್ನು ಮದ್ರಾಸ್ ಕೆಫೆ ಎಂಬ ಹೋಟೆಲಿನಲ್ಲಿ ಹೂಡಲಾಗಿದ್ದರಿಂದ ಚಿತ್ರಕ್ಕೆ ಮದ್ರಾಸ್ ಕೆಫೆ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಮೊದಲು ಜಾಫ್ನಾ ಎಂದು ಹೆಸರಿಡಲಾಗಿತ್ತು.

  ನಾಮ್ ತಮಿಳಗಾರ್ ಕಚ್ಚಿ ಎಂಬ ತಮಿಳು ಸಂಘಟನೆ, ಎಲ್ಟಿಟಿಈಯನ್ನು ಅತ್ಯಂತ ಕೀಳಾಗಿ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟಿನಲ್ಲಿ, ಚಿತ್ರವನ್ನು ನಿಷೇಧಿಸಬೇಕೆಂದು ಅರ್ಜಿ ಸಲ್ಲಿಸಿದೆ. ಈ ಹೋರಾಟದ ನೇತೃತ್ವವನ್ನು ತಮಿಳು ಚಿತ್ರ ನಿರ್ದೇಶಕ ಸೀಮನ್ ಅವರು ವಹಿಸಿಕೊಂಡಿದ್ದಾರೆ.

  ಇನ್ನೆರಡು ದಿನಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ನೋಡುತ್ತೇವೆ ಯಾವುದೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದ ನಂತರವೇ ಚಿತ್ರಬಿಡುಗಡೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಚಿತ್ರ ಬಿಡುಗಡೆಯಾಗುತ್ತಿರುವ ಮಂದಿರದ ಮಾಲಿಕರು ಕೂಡ ವಿಶೇಷ ಪ್ರದರ್ಶನ ಆಯೋಜಿಸುತ್ತಿರುವುದಾಗಿ ಹೇಳಿದ್ದಾರೆ.

  1980ರ ದಶಕದಲ್ಲಿ ಶ್ರೀಲಂಕಾದಲ್ಲಿ ನಡೆದ ತಮಿಳು ಸಂಘರ್ಷದ ಕಥೆಯನ್ನು ಈ ಚಿತ್ರ ಹೊಂದಿದೆ ಎಂದು ಜಾನ್ ಅಬ್ರಹಾಂ ಹೇಳಿದ್ದು, ಚಿತ್ರಕಥೆ ಕಾಲ್ಪನಿಕವಾಗಿದೆ ಮತ್ತು ಯಾವ ಸಂಘಟನೆಯನ್ನೂ ಕೀಳಾಗಿ ತೋರಿಲ್ಲ. ಬೇಕಿದ್ದರೆ ಪ್ರಿವ್ಯೂ ಆಯೋಜಿಸುತ್ತೇವೆ ಎಂದು 40 ವರ್ಷದ ನಟ ಜಾನ್ ಭರವಸೆ ನೀಡಿದ್ದಾರೆ.

  ತಮಿಳುನಾಡಿನಲ್ಲಿ ಇತ್ತೀಚೆಗೆ ವಿವಾದಕ್ಕೆ ಗುರಿಯಾಗಿರುವ ಮೂರನೇ ಚಿತ್ರ ಮದ್ರಾಸ್ ಕೆಫೆ. ಪ್ರತಿಭಾವಂತ ನಟ ವಿಜಯ್ ನಟಿಸಿರುವ ತಲೈವಾ ವಿವಾದದಲ್ಲಿ ಸಿಲುಕಿದ್ದು ತಮಿಳುನಾಡಿನಲ್ಲಿ ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ. ಆದರೆ, ಬೆಂಗಳೂರಿನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಕೆಲ ತಿಂಗಳ ಹಿಂದೆ ಮತ್ತೊಬ್ಬ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ನಟಿಸಿದ್ದ ವಿಶ್ವರೂಪಂ ಕೂಡ ವಿವಾದದ ಮಡುವಿನಲ್ಲಿ ಸಿಲುಕಿ ಬಿಡುಗಡೆಯಾಗಿತ್ತು.

  English summary
  Bollywood movie Madras Cafe, a political thriller directed by Shoojit Sircar, is in the middle of controversy. A Tamil organization has filed writ petition in Madras HC to ban the movie alleging LTTE is shown in bad light. John Abraham and Nargis Fakri are in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X