ಹೊಸ ಸೂಪರ್ ಬೈಕ್ ಖರೀದಿಸಿದ ಜಾನ್ ಅಬ್ರಹಾಂ, ಬೆಲೆ ಎಷ್ಟು ಗೊತ್ತೆ?

ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಹಂ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಬೈಕ್‌ಗಳ ಬಗ್ಗೆ ವಿಪರೀತ ಮೋಹವುಳ್ಳ ಜಾನ್ ಅಬ್ರಹಂ ಹೊಸ ಬೈಕ್ ಅನ್ನು ಖರೀದಿಸಿದ್ದಾರೆ.

ಈಗಾಗಲೇ ಹಲವು ಸೂಪರ್ ಬೈಕ್‌ಗಳನ್ನು ಹೊಂದಿರುವ ಜಾನ್ ಅಬ್ರಹಾಂ ಇದೀಗ ಬಿಎಂಡಬ್ಲು ಎಸ್ 1000 ಆರ್‌ಆರ್‌ ಮಾದರಿಯ ಹೊಸ ದುಬಾರಿ ಸೂಪರ್ ಬೈಕ್ ಖರೀದಿಸಿದ್ದಾರೆ.

ಭಾರಿ ದುಬಾರಿಯಾಗಿರುವ ಈ ಬೈಕ್‌ನ ಎಕ್ಸ್‌ ಶೋ ರೂಂ ಬೆಲೆಯೇ 21 ಲಕ್ಷವಿದೆ. ದುಬಾರಿ ಮಾತ್ರವೇ ಅಲ್ಲ, ಭಾರಿ ಶಕ್ತಿಯುತ ಬೈಕ್ ಸಹ ಇದಾಗಿದೆ. ಬೈಕ್ ರೈಡ್ ಎಂಜಾಯ್ ಮಾಡುವ ಜಾನ್‌ ಗೆ ಇದು ಹೇಳಿ ಮಾಡಿಸಿದ ಬೈಕ್.

Jhon Abraham Purchased New Super Bike

ಜಾನ್ ಈಗ ಖರೀದಿಸಿರುವ ಬಿಎಂಡಬ್ಲು ಎಸ್ 1000 ಆರ್‌ಆರ್‌ ಬೈಕ್ 2010 ರಲ್ಲಿಯೇ ಬಿಡುಗಡೆ ಆಗಿ ಈಗಲೂ ಸೂಪರ್‌ ಬೈಕ್‌ಗಳ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ವರ್ಷ ಸೂಕ್ತ ಬದಲಾವಣೆಗಳೊಂದಿಗೆ ಬಿಎಂಡಬ್ಲು ಎಸ್ 1000 ಆರ್‌ಆರ್‌ ಬಿಡುಗಡೆ ಆಗುತ್ತಿದೆ. ಜಾನ್ ಈಗ ಖರೀದಿಸಿರುವುದು ಇದೇ ಬೈಕ್‌ನ ಹೊಸ ಅವತರಣಿಕೆ.

Recommended Video

ಬಾಲ ನಟಿಯಾಗಿ ನಟಿಸಿದ್ದ ದೃಶ್ಯ ಲೀಕ್ ಆಗಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ನಟಿ | Sona Abhraham | Filmibeat

ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ಹಲವು ಜನಪ್ರಿಯ ಕಾರುಗಳಿಗಿಂತಲೂ ಹೆಚ್ಚು ಶಕ್ತಿಯುತವಾಗಿರುವ ಬೈಕ್ ಇದಾಗಿದೆ. ಇದು 207 ಎಚ್‌ಪಿ ಸಾಮರ್ಥ್ಯ ಹೊಂದಿದೆ. ಹೊಸ ಇನ್ನೋವಾ ಕ್ರಿಸ್ಟಾ ಕಾರು 148 ಎಚ್‌ಪಿ ಶಕ್ತಿ ಹೊಂದಿದೆ. ಅಲ್ಲಿಗೆ ಜಾನ್ ಕೊಂಡಿರುವ ಹೊಸ ಬೈಕ್‌ನ ಶಕ್ತಿ ನೀವು ಊಹಿಸಬಹುದು.

More from Filmibeat

English summary
Bollywood actor John Abraham purchased new super bike BMW S 1000 RR. Which has 21 lakh rs. price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X