»   » 'ಡಿಶೂಂ' ಸ್ಪೆಷಲ್ ಶೋಗೆ ದೌಡಾಯಿಸಿದ ಬಾಲಿವುಡ್ ಸೆಲೆಬ್ರಿಟಿಗಳು

'ಡಿಶೂಂ' ಸ್ಪೆಷಲ್ ಶೋಗೆ ದೌಡಾಯಿಸಿದ ಬಾಲಿವುಡ್ ಸೆಲೆಬ್ರಿಟಿಗಳು

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಲ್ಲಿ ಭಾರಿ ಕುತೂಹಲ ಮೂಡಿಸಿದ್ದ 'ಡಿಶೂಂ' ಇಂದು (ಜುಲೈ 29) ಭರ್ಜರಿಯಾಗಿ ತೆರೆ ಕಂಡಿದೆ. ವರುಣ್ ಧವನ್ ಸಹೋದರ ರೋಹಿತ್ ಧವನ್ ನಿರ್ದೇಶನ ಮಾಡಿರುವ 'ಡಿಶೂಂ' ಚಿತ್ರದಲ್ಲಿ ಜಾನ್ ಅಬ್ರಾಹಂ, ನಟಿ ಜಾಕ್ವೆಲೀನ್ ಪೆರ್ನಾಂಡೀಸ್ ಮತ್ತು ನಟ ವರುಣ್ ಧವನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ನಿನ್ನೆ ರಾತ್ರಿ (ಜುಲೈ 28) ಮುಂಬೈನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ 'ಡಿಶೂಂ' ಚಿತ್ರದ ಸ್ಪೆಷಲ್ ಶೋ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಾಲಿವುಡ್ ಸ್ಟಾರ್ ನಟ-ನಟಿಯರು ಪಾಲ್ಗೊಂಡಿದ್ದರು.[ಜಾನ್ ಅಬ್ರಹಾಂ ಮದುವೆ ಸುದ್ದಿ ಬಹಿರಂಗ]

ಸಣ್ಣಗೆ ಸುರಿಯುತ್ತಿದ್ದ ಜಿಟಿಜಿಟಿ ಮಳೆಯ ನಡುವೆಯೂ ಬಾಲಿವುಡ್ ಖ್ಯಾತ ನಟ-ನಟಿಯರು ಪಕ್ಕಾ ಆಕ್ಷನ್-ಎಂರ್ಟಟೈನರ್ 'ಡಿಶೂಂ' ಚಿತ್ರದ ಸ್ಪೆಷಲ್ ಶೋ ನೋಡಿ ಆನಂದಪಟ್ಟರು.

ಭಾರತದ ಖ್ಯಾತ ಬ್ಯಾಟ್ಸ್ ಮೆನ್ ಒಬ್ಬ ಕ್ರಿಕೆಟ್ ಮ್ಯಾಚ್ ಆರಂಭ ಆಗಲು ಇನ್ನೇನು ಸ್ವಲ್ಪ ಹೊತ್ತು ಇದೆ ಎನ್ನುವಾಗ ಕಿಡ್ನ್ಯಾಪ್ ಆಗುತ್ತಾನೆ. ಆತನನ್ನು ಹುಡುಕಲು ಇವರಿಬ್ಬರು ಏನು ಮಾಡುತ್ತಾರೆ, ಅನ್ನೋದೇ ಇಡೀ 'ಡಿಶೂಂ' ಚಿತ್ರದ ಕಥಾಹಂದರ.

ತುಂಬಾ ಗ್ಯಾಪ್ ಗಳ ಬಳಿಕ ಮತ್ತೆ ತೆರೆ ಮೇಲೆ ಖ್ಯಾತ ನಟ ಅಕ್ಷಯ್ ಖನ್ನಾ ಅವರು ಈ ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಸ್ಪೆಷಲ್ ಶೋಗೆ ಯಾವ-ಯಾವ ಸೆಲೆಬ್ರಿಟಿಗಳು ಆಗಮಿಸಿದ್ದರು, ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಜಾನ್ ಅಬ್ರಾಹಂ ದಂಪತಿ

ನಟ ಜಾನ್ ಅಬ್ರಾಹಂ ಅವರು ತಮ್ಮ ಪತ್ನಿ ಪ್ರಿಯಾ ಅಬ್ರಾಹಂ ಜೊತೆ ಸ್ಪೆಷಲ್ ಶೋಗೆ ಆಗಮಿಸಿದ್ದರು. ದಂಪತಿಗಳಿಬ್ಬರು ಕಪ್ಪು ಬಣ್ಣದ ಬಟ್ಟೆ ತೊಟ್ಟು ಲಕಲಕ ಹೊಳೆಯುತ್ತಿದ್ದರು.

ವಿವಾದಕ್ಕೆ ತೆರೆ

ಅಂದಹಾಗೆ ಈ ಮೊದಲು ಇವರಿಬ್ಬರ ಸಂಸಾರದ ಬಗ್ಗೆ ಭಾರಿ ವಿವಾದ ಏರ್ಪಟ್ಟಿತ್ತು. ಇವರಿಬ್ಬರ ಸಂಸಾರ ಸರಿ ಇಲ್ಲ. ಡೈವೋರ್ಸ್ ಗೆ ಅರ್ಜಿ ಹಾಕಿದ್ದಾರೆ ಎಂಬಿತ್ಯಾದಿ ಅಂತೆ-ಕಂತೆಗಳ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಆದರೆ ಇದೀಗ ಗಂಡ-ಹೆಂಡತಿ ಒಂದಾಗಿ ಆಗಮಿಸುವ ಮೂಲಕ ಎಲ್ಲಾ ಸುಳ್ಳು ಸುದ್ದಿಗಳಿಗೆ ಅಬ್ರಾಹಂ ದಂಪತಿ ಬ್ರೇಕ್ ಹಾಕಿದ್ದಾರೆ.

ನಟ ರಣವೀರ್ ಸಿಂಗ್

ನಟ ರಣವೀರ್ ಸಿಂಗ್ ಅವರು 'ಡಿಶೂಂ' ಚಿತ್ರದ ಸ್ಪೆಷಲ್ ಶೋನಲ್ಲಿ ಪಾಲ್ಗೊಂಡಿದ್ದರು.

ನಟ ಅಭಿಷೇಕ್ ಬಚ್ಚನ್

ಬಿಗ್ ಫ್ಯಾಮಿಲಿ ಕುಡಿ ಅಭಿಷೇಕ್ ಬಚ್ಚನ್ ಅವರು ಕೂಡ 'ಡಿಶೂಂ' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ಅಕ್ಷಯ್ ಕುಮಾರ್

ಸದ್ಯಕ್ಕೆ ಬಿಟೌನ್ ನಲ್ಲಿ ಯಶಸ್ಸಿನ ಕುದುರೆ ಬೆನ್ನೇರಿ ಸವಾರಿ ಮಾಡುತ್ತಿರುವ ನಟ ಅಕ್ಷಯ್ ಕುಮಾರ್ ಅವರು ಜಾನ್ ಅಬ್ರಾಹಂ ಅವರ 'ಡಿಶೂಂ' ಚಿತ್ರದ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು.[ಗೆಲುವಿನ ಕುದುರೆ ಅಕ್ಷಯ್ ಕುಮಾರ್ ಪಡೆಯುವ ಸಂಭಾವನೆ ಎಷ್ಟು?]

ಪರಿಣಿತಿ ಚೋಪ್ರಾ

ನಟಿ ಪರಿಣಿತಿ ಚೋಪ್ರಾ ಅವರು ಈ ಚಿತ್ರದ ಐಟಂ ಸಾಂಗ್ ಒಂದಕ್ಕೆ ವರುಣ್ ಧವನ್ ಅವರ ಜೊತೆ ಸೊಂಟ ಬಳುಕಿಸಿದ್ದು, ಸ್ಪೆಷಲ್ ಶೋಗು ಆಗಮಿಸಿದ್ದರು.

ಅನಿಲ್ ಕಪೂರ್

ನಟ ಅನಿಲ್ ಕಪೂರ್ ಅವರು ಆಗಮಿಸಿ, ಸಿನಿಮಾ ನೋಡಿದ ನಂತರ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಟಿ ಅಥಿಯಾ ಶೆಟ್ಟಿ

ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಕೂಡ ಸ್ಪೆಷಲ್ ಶೋನಲ್ಲಿ ಭಾಗವಹಿಸಿದ್ದರು.

ನಟ ಸೂರಜ್ ಪಾಂಚೋಲಿ

'ಹೀರೋ' ಚಿತ್ರದ ಮೂಲಕ ಬಾಲಿವುಡ್ ಗೆ ಪರಿಚಯವಾದ ನಟ ಸೂರಜ್ ಪಾಂಚೋಲಿ ಅವರು ಕೂಡ ಸ್ಪೆಷಲ್ ಶೋನಲ್ಲಿದ್ದರು.

ಪೋಸ್ ಕೊಟ್ಟ ಜಾನ್ ಅಬ್ರಾಹಂ

ಸ್ಪೆಷಲ್ ಶೋಗೆ ಆಗಮಿಸಿದ ನಟ ಜಾನ್ ಅಬ್ರಾಹಂ ಅವರು ಮಾಧ್ಯಮದ ಮುಂದೆ ಫೋಟೋ ಗೆ ಪೋಸ್ ನೀಡಿದರು.

English summary
Bollywood Actor John Abraham and Priya Runchal, Anil Kapoor, Sooraj Pancholi, Parineeti Chopra, Akshay Kumar, Ranveer Singh, Abhishek Bachchan were present at the Hindi Movie 'Dishoom' screening. Dishoom starring John Abraham, Varun Dhawan and Jacqueline Fernandez has released today (July 29th). The movie is directed by Varun Dhawan's brother Rohit Dhawan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada