John Abraham : ಬಾಲಿವುಡ್ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡಲ್ಲ ಎಂದ ಜಾನ್

ಬಾಲಿವುಡ್‌ನ ಕೆಲವು ನಟರಿದ್ದಾರೆ. ಅವರಿಗೆ ಬಾಲಿವುಡ್‌ ಸಿನಿಮಾರಂಗದ ಮುಂದೆ ಭಾರತದ ಇತರೆ ಸಿನಿಮಾ ರಂಗಗಳು ಕ್ಷುಲ್ಲಕವಾಗಿ ಕಾಣುತ್ತವೆ. ಅಂಥಹಾ ನಟರಲ್ಲಿ ಜಾನ್ ಅಬ್ರಹಾಂ ಸಹ ಒಬ್ಬರು.

ಬಾಲಿವುಡ್‌ನ ಖಾನ್‌ಗಳೇ ದಕ್ಷಿಣ ಭಾರತದ ಸಿನಿಮಾವನ್ನು ಹಾಡಿ ಹೊಗಳುವುದು ಮಾತ್ರವಲ್ಲ, ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಹೊತ್ತಿನಲ್ಲಿ ಜಾನ್ ಅಬ್ರಹಾಂ ''ನಾನು ಬಾಲಿವುಡ್ ಹೀರೋ ಬೇರೆ ಭಾಷೆಯ ಸಿನಿಮಾಗಳಲ್ಲಿ ನಾನು ನಟಿಸುವುದಿಲ್ಲ'' ಎಂದು ಹೇಳಿ ದಾರ್ಷ್ಯ ಪ್ರದರ್ಶಿಸಿದ್ದಾರೆ.

ಜಾನ್ ನಟಿಸಿರುವ 'ಅಟ್ಯಾಕ್' ಹೆಸರಿನ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರದರ್ಶನದಲ್ಲಿ ಜಾನ್ ಬ್ಯುಸಿಯಾಗಿದ್ದಾರೆ. ಈ ವೇಳೆ ನೀಡಿದ ಸಂದರ್ಶನದಲ್ಲಿ, ಜಾನ್ ಅಬ್ರಹಾಂ, ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಗಾಳಿ ಸುದ್ದಿ ಬಗ್ಗೆ ಪ್ರಶ್ನಿಸಲಾಗಿದೆ. ಪ್ರಭಾಸ್ ಅಂಥಹಾ ನಟರೊಟ್ಟಿಗೆ ನಟಿಸುವ ಅವಕಾಶ ಬಂದರೆ ಒಪ್ಪಿಕೊಳ್ಳುತ್ತೀರ ಎಂದು ಪ್ರಶ್ನಿಸಲಾಗಿದೆ.

John Abraham Said He Will Never Do South Indian Movies

ಇದಕ್ಕೆ ಉತ್ತರಿಸಿರುವ ಜಾನ್ ಅಬ್ರಹಾಂ, ''ನಾನು ಹಿಂದಿ ಸಿನಿಮಾಗಳ ಹೀರೋ, ನಾನು ಯಾವುದೇ ಕಾರಣಕ್ಕೂ ತೆಲುಗು ಅಥವಾ ಇನ್ನಾವುದೇ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಕೇವಲ ಮಾರುಕಟ್ಟೆ ಹೆಚ್ಚಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅಲ್ಲಿ ಹೋಗಿ ಎರಡನೇ ಹೀರೋ ಪಾತ್ರದಲ್ಲಿ ನಾನು ನಟಿಸಲಾರೆ'' ಎಂದಿದ್ದಾರೆ ಜಾನ್.

ಜಾನ್ ಅಬ್ರಹಾಂ ಬಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ನಟಿಸುತ್ತಿದ್ದಾರೆ. ಆದರೆ ಅಲ್ಲಿ ಅವರು ಆರಕ್ಕೇರಿದ ಮೂರಕ್ಕಿಳಿಯದ ನಾಯಕ ನಟರಾಗಿ ಅಷ್ಟೆ ಉಳಿದಿದ್ದಾರೆ. ನಟನಾ ಪ್ರತಿಭೆಯ ಕೊರತೆಯನ್ನು ಸಿಕ್ಸ್‌ ಪ್ಯಾಕ್ ಮೂಲಕ ಬ್ಯಾಲೆನ್ಸ್ ಮಾಡುತ್ತಾ ಹಾಗೋ ಹೀಗೋ ಇನ್ನೂ ಬಾಲಿವುಡ್‌ನಲ್ಲಿ ಉಳಿದುಕೊಂಡಿದ್ದಾರೆ.

John Abraham Said He Will Never Do South Indian Movies

ಕೇರಳದ ಮೂಲದವರಾದ ಜಾನ್ ಅಬ್ರಹಾಂ, ತಮ್ಮ 'ಅಟ್ಯಾಕ್' ಸಿನಿಮಾದ ಪ್ರಚಾರದ ವೇಳೆ ಪತ್ರಕರ್ತರ ಮೇಲೆ ಆಕ್ರೋಶ ಪ್ರಕಟಿಸಿ ಸುದ್ದಿಯಾಗಿದ್ದರು, ಸುದ್ದಿಗೋಷ್ಠಿ ವೇಳೆ ಮಾತನಾಡಿದ್ದ ಜಾನ್, ''ನಾನು ದೈಹಿಕ ವ್ಯಾಯಾಮಕ್ಕಿಂತಲೂ, ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುತ್ತೇನೆ. ಏಕೆಂದರೆ ಕೆಲವು ಬಾರಿ ಬಹಳ ದಡ್ಡ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ. ನಿಮ್ಮ ಬಗ್ಗೆ ನನಗೆ ಕರುಣೆ ಇದೆ. ನೀವು ನಿಮ್ಮ ಮೆದುಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದೀರಿ ಎನಿಸುತ್ತದೆ. ಮುಂದಿನ ಬಾರಿ ಮೆದುಳಿನ ಜೊತೆಗೆ ಬನ್ನಿ, ಆಗ ನಿಮ್ಮ ಕೆಲಸವನ್ನು ಇನ್ನೂ ಚೆನ್ನಾಗಿ ಮಾಡಬಲ್ಲಿರಿ'' ಎಂದು ಪತ್ರಕರ್ತನ ಕಾಲೆಳೆದಿದ್ದರು.

ಅಷ್ಟಕ್ಕೆ ಸುಮ್ಮನಾಗದ ಜಾನ್, 'ನೀವು ಅದೇ ಕಿತ್ತು ಹೋದ ಪ್ರಶ್ನೆಗಳನ್ನು ಕೇಳುತ್ತಾ ಇದ್ದರೆ ಹೇಗೆ. ನೀವು ಇಂದಿನ ಇವೆಂಟ್‌ಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಬೇಕು. ಕೇಳಿ 'ಅಟ್ಯಾಕ್' ಯಾಕೆ ವಿಶೇಷ ಸಿನಿಮಾ, 'ಅಟ್ಯಾಕ್' ಸಿನಿಮಾ ಭಿನ್ನವೇಕೆ? ಈ ಬಗ್ಗೆ ಪ್ರಶ್ನೆ ಕೇಳಿ? ಅದನ್ನು ಬಿಟ್ಟು ಹಳೆಯ ಪ್ರಶ್ನೆಗಳನ್ನು, ಸಂಬಂಧವಿಲ್ಲದ ಪ್ರಶ್ನೆಗಳನ್ನು ಏಕೆ ಕೇಳುತ್ತೀರಿ?'' ಎಂದಿದ್ದಾರೆ. ಜಾನ್ ಅಬ್ರಹಾಂ ನಟಿಸಿರುವ 'ಅಟ್ಯಾಕ್' ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ.

More from Filmibeat

English summary
John Abraham said he will never do south Indian movies. He said I am Hindi movie Hero. I wont do Telugu or any South Indian movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X