For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಕಂಡ್ರೆ ಜಾನ್ ಅಬ್ರಹಾಂಗೆ ಅಷ್ಟಕಷ್ಟೆ: ಯಾಕೆ ಹಿಂಗೆ.?

  By Harshitha
  |

  ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಹೇಳುವುದರಲ್ಲಿ ಜಾನ್ ಅಬ್ರಹಾಂ ಎತ್ತಿದ ಕೈ. ಇದೇ ಕಾರಣಕ್ಕೆ ಹಲವಾರು ಬಾರಿ ನಟ ಜಾನ್ ಅಬ್ರಹಾಂ ವಿವಾದಗಳಿಗೆ ಸಿಲುಕಿದ್ದಾರೆ.

  ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಕಂಡ್ರೆ ಜಾನ್ ಅಬ್ರಹಾಂಗೆ ಅಷ್ಟಕಷ್ಟೆ. ವರ್ಷಗಳಿಂದಲೂ ಸಲ್ಲು ಹಾಗೂ ಜಾನ್ ಅಬ್ರಹಾಂ ನಡುವೆ ಕೋಲ್ಡ್ ವಾರ್ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನಟ ಜಾನ್ ಅಬ್ರಹಾಂ ಕೊಟ್ಟಿರುವ ಹೇಳಿಕೆ ಸಲ್ಲು ಹಾಗೂ ಜಾನ್ ನಡುವೆ ಇರುವ ಅಂತರ ಎತ್ತಿ ತೋರಿಸುತ್ತಿದೆ.

  ಅಷ್ಟಕ್ಕೂ, ಸಂದರ್ಶನದಲ್ಲಿ ನಟ ಜಾನ್ ಅಬ್ರಹಾಂ ಕೊಟ್ಟಿರುವ ಹೇಳಿಕೆ ಏನು.? ಸಲ್ಲು ಹಾಗೂ ಜಾನ್ ಅಬ್ರಹಾಂ ನಡುವೆ ಅಂತರ ಮೂಡಲು ಕಾರಣ ಏನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಓದಿರಿ...

  ಸಂದರ್ಶನದಲ್ಲಿ ನಟ ಜಾನ್ ಅಬ್ರಹಾಂಗೆ ಕೇಳಿದ ಪ್ರಶ್ನೆ ಏನು.?

  ಸಂದರ್ಶನದಲ್ಲಿ ನಟ ಜಾನ್ ಅಬ್ರಹಾಂಗೆ ಕೇಳಿದ ಪ್ರಶ್ನೆ ಏನು.?

  ''ಮುಳುಗುವ ಹಡಗಿನಲ್ಲಿ ಸಲ್ಮಾನ್ ಖಾನ್, ಆಮೀರ್ ಖಾನ್ ಹಾಗೂ ಶಾರುಖ್ ಖಾನ್ ಇದ್ದು, ಮೂವರ ಪೈಕಿ ಒಬ್ಬರನ್ನು ನೀವು ಸೇಫ್ ಮಾಡಬೇಕು ಅಂದ್ರೆ ಯಾರನ್ನ ಸೇಫ್ ಮಾಡ್ತೀರಾ'' ಎಂದು ಸಂದರ್ಶನದಲ್ಲಿ ಜಾನ್ ಅಬ್ರಹಾಂ ರನ್ನ ಕೇಳಲಾಗಿತ್ತು.

  ಸಲ್ಮಾನ್ ಗೆ ಸಿಟ್ಟು ಬಂದಿದ್ಯಾ, ಅಥವಾ ಕ್ಯಾರೇ ಅಂತಿಲ್ವಾ? ಒಂದೂ ಅರ್ಥ ಆಗ್ತಿಲ್ಲ.!ಸಲ್ಮಾನ್ ಗೆ ಸಿಟ್ಟು ಬಂದಿದ್ಯಾ, ಅಥವಾ ಕ್ಯಾರೇ ಅಂತಿಲ್ವಾ? ಒಂದೂ ಅರ್ಥ ಆಗ್ತಿಲ್ಲ.!

  ಯೋಚಿಸಿ ಜಾನ್ ಅಬ್ರಹಾಂ ಕೊಟ್ಟ ಉತ್ತರ ಏನು.?

  ಯೋಚಿಸಿ ಜಾನ್ ಅಬ್ರಹಾಂ ಕೊಟ್ಟ ಉತ್ತರ ಏನು.?

  ಪ್ರಶ್ನೆ ಕೇಳಿದ ಮೇಲೆ ಸ್ವಲ್ಪ ಹೊತ್ತು ಯೋಚಿಸಿದ ಜಾನ್ ಅಬ್ರಹಾಂ ಕೊಟ್ಟ ಉತ್ತರ ಹೀಗಿತ್ತು - ''ನಾನು ಶಾರುಖ್ ಖಾನ್ ರನ್ನ ಸೇಫ್ ಮಾಡುವೆ. ಯಾಕಂದ್ರೆ, ಅವರ ವ್ಯಕ್ತಿತ್ವ ನನಗೆ ಇಷ್ಟ. ಹಾಗೇ, ನಾನು ನಿರ್ದೇಶಕನಾಗುವ ಅವಕಾಶ ಸಿಕ್ಕರೆ, ಶಾರುಖ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವೆ''

  ನಟ ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಪಾತಕಿ ಬಂಧನನಟ ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಪಾತಕಿ ಬಂಧನ

  ಸಲ್ಮಾನ್ ಖಾನ್ ಹೆಸರು ಯಾಕೆ ತೆಗೆದುಕೊಳ್ಳಲಿಲ್ಲ ಅಂದ್ರೆ....

  ಸಲ್ಮಾನ್ ಖಾನ್ ಹೆಸರು ಯಾಕೆ ತೆಗೆದುಕೊಳ್ಳಲಿಲ್ಲ ಅಂದ್ರೆ....

  ಜಾನ್ ಅಬ್ರಹಾಂ ಕೊಟ್ಟ ಉತ್ತರ ಬಾಲಿವುಡ್ ಬಲ್ಲವರಿಗೆ ಖಂಡಿತ ಅಚ್ಚರಿ ನೀಡಿಲ್ಲ. ಯಾಕಂದ್ರೆ, ಸಲ್ಮಾನ್ ಹಾಗೂ ಜಾನ್ ಅಬ್ರಹಾಂ ನಡುವಿನ ಕೋಲ್ಡ್ ವಾರ್ ನಿನ್ನೆ ಮೊನ್ನೆಯದ್ದಲ್ಲ.

  ಸಲ್ಲು ಜೊತೆ 'ರೇಸ್' ಗಿಳಿದ ಬಾಲಿವುಡ್ ಬಿಗ್ ಸ್ಟಾರ್ಸ್ಸಲ್ಲು ಜೊತೆ 'ರೇಸ್' ಗಿಳಿದ ಬಾಲಿವುಡ್ ಬಿಗ್ ಸ್ಟಾರ್ಸ್

  ಇಬ್ಬರ ನಡುವೆ ಕಿತ್ತಾಟ ಆಗಲು ಕಾರಣ ಏನು.?

  ಇಬ್ಬರ ನಡುವೆ ಕಿತ್ತಾಟ ಆಗಲು ಕಾರಣ ಏನು.?

  ಸಲ್ಮಾನ್ ಖಾನ್ ಹಾಗೂ ಜಾನ್ ಅಬ್ರಹಾಂ ನಡುವೆ ಮನಸ್ತಾಪ ಉಂಟಾಗಿದ್ದು 'ರಾಕ್ ಸ್ಟಾರ್ಸ್' ಕಾನ್ಸರ್ಟ್ ನಲ್ಲಿ. ಅದು ಹಣದ ವಿಚಾರವಾಗಿ. ಅದಾದ್ಮೇಲೆ, 'ಬಾಬುಲ್' ಚಿತ್ರದಲ್ಲಿ ಇಬ್ಬರು ತೆರೆ ಹಂಚಿಕೊಂಡರು. ಆದ್ರೆ, ತೆರೆ ಹಿಂದೆ ಒಬ್ಬರನ್ನೊಬ್ಬರು ಅವಾಯ್ಡ್ ಮಾಡಿದ್ದೇ ಹೆಚ್ಚು.

  ಕತ್ರಿನಾ ಕೂಡ ಕಾರಣ...

  ಕತ್ರಿನಾ ಕೂಡ ಕಾರಣ...

  ಬಾಲಿವುಡ್ ನಲ್ಲಿ ನೆಲೆಯೂರಲು ಕತ್ರಿನಾ ಕೈಫ್ ಒದ್ದಾಡುತ್ತಿದ್ದಾಗ, ಆಕೆ ಜೊತೆ ಸ್ಕ್ರೀನ್ ಶೇರ್ ಮಾಡಲು ನಟ ಜಾನ್ ಅಬ್ರಹಾಂ ಒಲ್ಲೆ ಅಂದಿದ್ದರಂತೆ. ಆಗ ಕತ್ರಿನಾ ರನ್ನ ಸಮಾಧಾನ ಪಡಿಸಿದ್ದು ನಟ ಸಲ್ಮಾನ್ ಖಾನ್. ಕತ್ರಿನಾ ಪರಿಸ್ಥಿತಿಯನ್ನು ಕಂಡ ಸಲ್ಲುಗೆ ಜಾನ್ ಮೇಲಿನ ಸಿಟ್ಟು ಇನ್ನೂ ಹೆಚ್ಚಾಯ್ತು.

  ಮುಂದೆ ಒಟ್ಟಿಗೆ ಕೆಲಸ ಮಾಡಿದ ಜಾನ್-ಕತ್ರಿನಾ

  ಮುಂದೆ ಒಟ್ಟಿಗೆ ಕೆಲಸ ಮಾಡಿದ ಜಾನ್-ಕತ್ರಿನಾ

  'ನ್ಯೂಯಾರ್ಕ್' ಸಿನಿಮಾದಲ್ಲಿ ಜಾನ್ ಅಬ್ರಹಾಂ ಹಾಗೂ ಕತ್ರಿನಾ ಕೈಫ್ ಒಟ್ಟಿಗೆ ಕೆಲಸ ಮಾಡಿದ್ದರು. ಅದಾದ್ಮೇಲೂ, ಮನಸ್ತಾಪ ಮರೆಯಾಗಲಿಲ್ಲ. ಈಗಲೂ ಸಲ್ಲು ಕಂಡ್ರೆ ಜಾನ್ ಅಬ್ರಹಾಂಗೆ ಅಷ್ಟಕಷ್ಟೆ.

  'ರೇಸ್-3' ಚಿತ್ರದಲ್ಲಿ ಜಾನ್ ಇರಬೇಕಿತ್ತು

  'ರೇಸ್-3' ಚಿತ್ರದಲ್ಲಿ ಜಾನ್ ಇರಬೇಕಿತ್ತು

  ಹಾಗ್ನೋಡಿದ್ರೆ, 'ರೇಸ್-3' ಚಿತ್ರದಲ್ಲಿ ಜಾನ್ ಅಬ್ರಹಾಂ ನಟಿಸಬೇಕಿತ್ತು. ಆದ್ರೆ, ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಎಂಟ್ರಿಕೊಟ್ಟ ಮೇಲೆ, ಜಾನ್ ಅಬ್ರಹಾಂಗೆ ಜಾಗ ಸಿಗಲಿಲ್ಲ.

  English summary
  John Abraham-Salman Khan cold war continues. Take a look at the answer given by John Abraham in a recent Interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X