Don't Miss!
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Sports
IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್
- News
Srirangapatna bypass: ಸಂಚಾರಕ್ಕೆ ಮುಕ್ತವಾದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯ ಶ್ರೀರಂಗಪಟ್ಟಣ ಬೈಪಾಸ್
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಧಾರ್ಮಿಕ ಭಾವನೆಗೆ ಧಕ್ಕೆ: 'ಸತ್ಯಮೇವ ಜಯತೆ' ಚಿತ್ರತಂಡದ ವಿರುದ್ಧ ದೂರು ದಾಖಲು.!
ಜಾನ್ ಅಬ್ರಹಾಂ ಹಾಗೂ ಮನೋಜ್ ಬಾಜ್ಪೈ ಅಭಿನಯದ ಮಿಲಪ್ ಝವೇರಿ ನಿರ್ದೇಶನದ 'ಸತ್ಯಮೇವ ಜಯತೆ' ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 'ಸತ್ಯಮೇವ ಜಯತೆ' ಸಿನಿಮಾ ಬಿಡುಗಡೆ ಆಗಬೇಕು. ಆದ್ರೀಗ, ಸಿನಿಮಾದ ರಿಲೀಸ್ ಗೆ ಕಂಟಕ ಎದುರಾಗಿದೆ.
'ಸತ್ಯಮೇವ ಜಯತೆ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ''ಸಿನಿಮಾದ ಕೆಲ ಸನ್ನಿವೇಶಗಳು ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ'' ಎಂದು ಹೈದರಾಬಾದ್ ಮೂಲದ ಸೈಯದ್ ಅಲಿ ಜಾಫರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಐ.ಪಿ.ಸಿ ಸೆಕ್ಷನ್ 295, 295-A ಹಾಗೂ 153-A ಪ್ರಕಾರ Emmy Entertainments ವಿರುದ್ಧ ಪ್ರಕರಣ ದಾಖಲಾಗಿದೆ.
ಚಿತ್ರಗಳು:
ಹೀಗಿದೆ
ನೋಡಿ
ನಟ
ಜಾನ್
ಅಬ್ರಹಾಂ
ರವರ
ವಿಲಾಸಿ
ನಿವಾಸ.!
'ಸತ್ಯಮೇವ ಜಯತೆ' ಚಿತ್ರದಲ್ಲಿ ಇರುವ ಕೆಲ ಸನ್ನಿವೇಶಗಳನ್ನು ಅಳಿಸಿ ಬಿಡುಗಡೆ ಮಾಡಬೇಕು ಎಂದು ಶಿಯಾ ಮುಸ್ಲಿಮರು ಒತ್ತಾಯ ಮಾಡಿದ್ದಾರೆ. ಸದ್ಯಕ್ಕೆ ಈ ವಿವಾದದ ಬಗ್ಗೆ ಚಿತ್ರತಂಡ ಪ್ರತಿಕ್ರಿಯೆ ನೀಡಿಲ್ಲ.
'ಸತ್ಯಮೇವ ಜಯತೆ' ಬಿಡುಗಡೆ ಆಗಲು ಇನ್ನೂ ಹದಿನೈದು ದಿನ ಟೈಮ್ ಇದೆ. ಅಷ್ಟರೊಳಗೆ ವಿವಾದಿತ ಸನ್ನಿವೇಶವನ್ನ ಚಿತ್ರತಂಡ ತೆಗೆದು ಹಾಕುತ್ತಾ.? ನೋಡಬೇಕು.
ಅಂದ್ಹಾಗೆ, ಆಗಸ್ಟ್ 15 ರಂದು 'ಸತ್ಯಮೇವ ಜಯತೆ' ಸಿನಿಮಾದ ಜೊತೆಗೆ ಕಂಗನಾ ಅಭಿನಯದ 'ಮಣಿಕಾರ್ಣಿಕಾ' ಹಾಗೂ ಅಕ್ಷಯ್ ಕುಮಾರ್ ನಟನೆಯ 'ಗೋಲ್ಡ್' ಚಿತ್ರದ ತೆರೆಗೆ ಬರಲಿದೆ.