twitter
    For Quick Alerts
    ALLOW NOTIFICATIONS  
    For Daily Alerts

    ಯುವ ಜಾಗೃತಿಗಾಗಿ ಜೋಶ್-ಮ್ಯಾಶ್ ಒಂದಾಗಿ ತಂದಿದೆ 'ಯುವಜೋಶ್'

    By ಫಿಲ್ಮೀಬೀಟ್ ಡೆಸ್ಕ್‌
    |

    ಭಾರತದ ಟಾಪ್ ಕಿರು ವಿಡಿಯೋ ಅಪ್ಲಿಕೇಶನ್ ಯುವಕರನ್ನು ಇನ್ನಷ್ಟು ಸಮಾಜಮುಖಿಗೊಳಿಸುವ ಉದ್ದೇಶದಿಂದ ಮ್ಯಾಶ್ (MASH) ಫೌಂಡೇಶನ್ ಜೊತೆ ಸೇರಿ 'ಯುವಜೋಶ್' ಎಂಬ ಹೊಸ ಚಾಲೆಂಜ್ ಅನ್ನು ಲಾಂಚ್ ಮಾಡಿದೆ.

    ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 10 ಎನ್‌ಜಿಓಗಳು ಹಾಗೂ ಇತರೆ ಸ್ವಯಂಸೇವಕರ ಗುಂಪುಗಳನ್ನು ಒಟ್ಟುಗೂಡಿಸಿ, ಕಿರು ವಿಡಿಯೋಗಳ ಮೂಲಕ ಯುವಕರನ್ನು ಸಮಾಜಮುಖಿ ಕಾರ್ಯಗಳತ್ತ ಸೆಳೆಯುವ, ಅವರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುವ ಜಾಗೃತಿ ಮೂಡಿಸುವ ಕಾರ್ಯಕ್ರಮ 'ಯುವಜೋಶ್' ಆಗಿದ್ದು, ಈ ಚಾಲೆಂಜ್ ಆಗಸ್ಟ್ 23ರಿಂದ ಆರಂಭವಾಗಲಿದೆ.

    ಎನ್‌ಜಿಓಗಳ ಸಹಯೋಗದೊಂದಿಗೆ ಸಮಾಜಿಕ ಕಾರ್ಯಗಳ ಕಿರು ವಿಡಿಯೋಗಳ ನಿರ್ಮಾಣ ಮಾಡುವುದು ಮ್ಯಾಶ್ ಪ್ರಾಜೆಕ್ಟ್‌ನ ಉದ್ದೇಶವಾಗಿದ್ದು, ಜೋಶ್‌ ಕಿರು ವಿಡಿಯೋ ಫ್ಲ್ಯಾಟ್‌ಫಾರ್ಮ್‌ನಲ್ಲಿ ವಿಡಿಯೋಗಳನ್ನು ಭಾರತದ ಯುವಕರಿಗೆ ತಲುಪಿಸಿ ಅವರನ್ನು ಸಮಾಜಮುಖಿ ಕಾರ್ಯದೆಡೆಗೆ ಉತ್ತೇಜಿಸುವ ಕಾರ್ಯ ಮಾಡಲಾಗುತ್ತಿದೆ.

    ''ಸಮಾಜಮುಖಿ ಕಾರ್ಯದೆಡೆಗೆ ಯುವಕರನ್ನು ಸೆಳೆಯಲು ಅವರನ್ನು ಸಬಲರನ್ನಾಗಿಸುವ ಮೂಲಕ ಸಮಾಜವನ್ನು ಸಬಲಗೊಳಿಸಲು ಮ್ಯಾಷ್‌ ಕಟಿಬದ್ಧವಾಗಿದೆ. ಹೇಗೆ ಹೊಸ ತಲೆಮಾರಿನ ಕಂಟೆಂಟ್ ಫ್ಲ್ಯಾಟ್‌ಫಾರ್ಮ್‌ಗಳು ಸಮಾಜದ ಬದಲಾವಣೆಗೆ ಕಾರಣವಾಗಬಲ್ಲದು ಎಂಬುದಕ್ಕೆ ಜೋಶ್‌ ಅಪ್ಲಿಕೇಶನ್ ಜೊತೆಗಿನ ನಮ್ಮ ಪಾಲುದಾರಿಕೆಯೇ ಸಾಕ್ಷಿ'' ಎಂದಿದ್ದಾರೆ ಮ್ಯಾಷ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಆಶಿಷ್ ಬೀರ್ಗಿ.

    Josh And Mash Project Foundation Collaborate To Launch Yuvajosh Challenge

    'ಯುವಜೋಶ್' ಕಾರ್ಯಕ್ರಮದ ಬಗ್ಗೆ ಮಾತನಾಡಿದ ಜೋಶ್‌ ಅಪ್ಲಿಕೇಶನ್‌ನ ಕ್ರಿಯೇಟರ್, ಕಂಟೆಂಟ್ ಇಕೊಸಿಸ್ಟಮ್ ಹೆಡ್ ಸುಂದರ್ ವೆಂಕಟ್‌ರಾಮನ್, ''ಸಾಮಾಜಿಕ ಬದಲಾವಣೆಯಲ್ಲಿ ಜೋಶ್ ಅನ್ನು ಭಾರತದ ನಂಬರ್ 1 ಕಿರು ವಿಡಿಯೋ ಫ್ಲ್ಯಾಟ್‌ಫಾರ್ಮ್ ಆಗಿಸುವುದು ನಮ್ಮ ಗುರಿ. ಮ್ಯಾಷ್‌ ಜೊತೆ ನಮ್ಮ ಕೈಜೋಡಿಸುವಿಕೆ ಇದೇ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ. ಒಂದೇ ಮಾದರಿಯಲ್ಲಿ ಯೋಚಿಸುವ ಪಾಲುದಾರ ದೊರೆಯುವುದು ಅದೃಷ್ಟ ಮ್ಯಾಷ್‌ ಮೂಲಕ ನಮಗೆ ನಮ್ಮಂತೆ ಯೋಚಿಸುವ ಪಾಲುದಾರ ದೊರೆತಂತಾಗಿದೆ'' ಎಂದಿದ್ದಾರೆ.

    ಜ್ಞಾನ್‌ದೀಪ್ ಗ್ರೋತ್ ಫೌಂಡೇಶನ್, ದಿ ಗುಡ್ ಕ್ವೆಸ್ಟ್ ಫೌಂಡೇಶನ್, ಟ್ವಿರಿಲ್ ಸ್ಟೋರ್, ಕ್ಯಾಪ್ಟನ್ಸ್ ಸೋಷಿಯಲ್ ಸೊಲ್ಯೂಷನ್ಸ್, ಅವರ್ ಒಯಿಕ್ಸ್, ಯುವಾ ಜಾಗೃತಿ ಸಂಸ್ಥಾನ್, ಝೀರೊ ಬಜೆಟ್ ಪಾಲಿಟಿಕ್ಸ್, ಈಶ್ವರ್ ಸಂಕಲ್ಪ, ಲೋನ್‌ಪ್ಯಾಕ್, ಲೈಫ್ ಪೀಡಿಯಾ ಅಂಥಹಾ ಪ್ರಮುಖ ಎನ್‌ಜಿಓಗಳ ಜೊತೆಗೆ ಇನ್ನೂ ಕೆಲವು ಎನ್‌ಜಿಓಗಳು ಹಾಗೂ ಸ್ವಯಂಸೇವಕರು ಈ ಅಭಿಯಾನದ ಭಾಗವಾಗಿದ್ದಾರೆ.

    ''ಜೋಶ್‌ ಮೂಲಕ ನಾವು ಹೆಚ್ಚು-ಹೆಚ್ಚು ಯುವಕರನ್ನು ತಲುಪಿ ಆ ಮೂಲಕ ಕಸರಹಿತ ಸಮಾಜ ನಿರ್ಮಾಣ ಹಾಗೂ ಮಹಿಳಾ ಸಬಲೀಕರಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುವ ನಿರೀಕ್ಷೆ ಇದೆ'' ಎಂದಿದ್ದಾರೆ ಟ್ವಿರಿಲ್ ಸ್ಟೋರ್‌ನ ವ್ಯವಸ್ಥಾಪಕ ನಿರ್ದೇಶಕಿ ಸುಜಾತಾ ಚಟರ್ಜಿ.

    ''ಇಂದಿನ ಯುವಕರು ನಾಳಿನ ನಾಯಕರು. ಜೋಶ್‌ ಅಂಥಹಾ ಫ್ಲ್ಯಾಟ್‌ಫಾರ್ಮ್‌ಗಳು ಯುವಕರನ್ನು ಜಾಗೃತಿಗೊಳಿಸಲು ಮುಂದೆಬರುತ್ತಿರುವುದು ನೋಡಲು ಖುಷಿಯಾಗುತ್ತದೆ'' ಎಂದಿದ್ದಾರೆ ಕ್ಯಾಪ್ಟೆನ್ಸ್ ಸೋಷಿಯಲ್ ಸೊಲುಷನ್‌ನ ಸಂಸ್ಥಾಪಕ ಅಫ್ಜಲ್ ಮೊಹಮ್ಮದ್ ಬಿ.

    ''ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ಜೋಶ್‌ ಅತ್ಯುತ್ತಮ ವೇದಿಕೆ ಆಗಲಿದೆ. ಜಾಗೃತಿ ಮೂಡಿಸುವ ಜೊತೆಗೆ ಮಕ್ಕಳ ದೌರ್ಜನ್ಯದ ವಿರುದ್ಧ ದನಿ ಎತ್ತುವವರ ಪಡೆ ಕಟ್ಟಲು ಜೋಶ್ ಸಹಕಾರಿಯಾಗಲಿದೆ'' ಎಂದಿದ್ದಾರೆ ಅವರ್ ವೋಯಿಕ್ಸ್‌ನ ಸಂಸ್ಥಾಪಕಿ ಮೇಘಾ ಭಾಟಿಯಾ.

    ''ನಮ್ಮ ಆಲೋಚನೆಗಳನ್ನು ಎಲ್ಲ ವಯೋಮಾನದ ಜನರಿಗೆ ತಲುಪಿಸಲು ಜೋಶ್ ಅದ್ಭುತವಾದ ಫ್ಲ್ಯಾಟ್‌ಫಾರ್ಮ್. ಸರ್ಕಾರೇತರ ಸಂಸ್ಥೆಗಳು ಆನ್‌ಲೈನ್‌ನಲ್ಲಿ ತಮ್ಮದೇ ಆದ ಸಮುದಾಯವೊಂದನ್ನು ಕಟ್ಟಿಕೊಳ್ಳಲು ಜೋಶ್‌ ನೆರವಾಗಲಿದೆ'' ಎಂದಿದ್ದಾರೆ ಯುವ ಜಾಗೃತಿ ಸಂಸ್ಥಾನದ ಗೋಕುಲ್ ಸೈನಿ.

    ಭಾರತದಲ್ಲಿ ಸ್ಥಾಪಿಸಲಾದ ಜೋಶ್ ಅಪ್ಲಿಕೇಶನ್ ದೇಶದ ಅತ್ಯುತ್ತಮ ಕಿರು ವಿಡಿಯೋ ಅಪ್ಲಿಕೇಶನ್. 2020 ರಲ್ಲಿ ಲಾಂಚ್ ಆದ ಜೋಶ್‌ನಲ್ಲಿ 1000ಕ್ಕೂ ಹೆಚ್ಚು ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳಿದ್ದಾರೆ. 20000 ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ ಗುಂಪುಗಳಿವೆ. 10 ಅತ್ಯುತ್ತಮ ಸಂಗೀತ ಬ್ರ್ಯಾಂಡ್‌ಗಳು, 15 ಮಿಲಿಯನ್‌ಗೂ ಹೆಚ್ಚು ಯುಜಿಸಿ ಕ್ರಿಯೇಟರ್‌ಗಳು ಇವೆ. ಜೋಶ್‌ ಭಾರತದ ಅತ್ಯುತ್ತಮ ಕಿರು ವಿಡಿಯೋ ಫ್ಲ್ಯಾಟ್‌ಫಾರ್ಮ್ ಆಗಿ ಹೆಸರುಗಳಿಸಿದೆ. ಫ್ಲೇಸ್ಟೋರ್‌ನಲ್ಲಿ 100 ಮಿಲಿಯನ್‌ಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಈ ಅಪ್ಲಿಕೇಶನ್ ಕಂಡಿದೆ. ಪ್ರಸ್ತುತ, ಜೋಶ್ ದೇಶದ ಅತಿ ವೇಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋ ಅಪ್ಲಿಕೇಶನ್. ಜೋಶ್‌ 56ಮಿಲಿಯನ್‌ಗೂ ಹೆಚ್ಚು ಡೈಲಿ ಆಕ್ಟಿವ್ ಬಳಕೆದಾರರನ್ನು, 115 ಮಿಲಿಯನ್‌ಗೂ ಹೆಚ್ಚು ತಿಂಗಳ ಆಕ್ಟಿವ್ ಬಳಕೆದಾರರನ್ನೂ ಹೊಂದಿದೆ.

    English summary
    Josh and Mash project foundation collaborate to launch Yuvajosh challenge to empower Youths of India to create better society.
    Tuesday, August 31, 2021, 20:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X