ಸಲ್ಮಾನ್ ಖಾನ್ ವಿರುದ್ಧ ಪತ್ರಕರ್ತ ದೂರು: ಕೋರ್ಟ್‌ನಿಂದ ಸಮನ್ಸ್
ಬಾಲಿವುಡ್ ಬಿಗ್‌ಬಾಸ್ ಸಲ್ಮಾನ್ ಖಾನ್ ವಿರುದ್ಧ 2019ರ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ನೀಡಿದ್ದ ದೂರಿನ ವಿಚಾರಣೆ ನಡೆದು ಸಲ್ಮಾನ್ ಖಾನ್ ಹಾಗೂ ಅವರ ಬಾಡಿಗಾರ್ಡ್‌ಗೆ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.
ಪತ್ರಕರ್ತ ಅಶೋಕ್ ಪಾಂಡೆ ಎಂಬುವರ ದೂರು ಆಧರಿಸಿ ಸಲ್ಮಾನ್ ಖಾನ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಉದ್ದೇಶಪೂರ್ವಕ ಹಿಯಾಳಿಕೆ, ಅಪಮಾನ, ನಿಂದನೆ, ಶಾಂತಿ ಕದಡುವ ಯತ್ನ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ RR ಖಾನ್ ಸಲ್ಮಾನ್ ಖಾನ್ ಹಾಗೂ ಅವರ ಬಾಡಿಗಾರ್ಡ್‌ಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಆಗಿದ್ದಿಷ್ಟು 2019 ರಲ್ಲಿ ಸಲ್ಮಾನ್ ಖಾನ್ ಸೈಕಲ್ ರೈಡ್ ಮಾಡುವಾಗ ಪತ್ರಕರ್ತ ಅಶೋಕ್ ಪಾಂಡೆ ಮೊಬೈಲ್‌ನಿಂದ ಫೋಟೊ ತೆಗೆಯುತ್ತಿದ್ದರಂತೆ ಇದರಿಂದ ಸಿಟ್ಟಿಗೆದ್ದ ಸಲ್ಮಾನ್ ಖಾನ್, ಅಶೋಕ್ ಪಾಂಡೆಯ ಮೊಬೈಲ್ ಕಿತ್ತುಕೊಂಡಿದ್ದಾರೆ ಅಲ್ಲದೆ ಅಶೋಕ್ ಪಾಂಡೆ ಅನ್ನು ಸಿಟ್ಟಿನಿಂದ ಬೈದಿದ್ದಾರೆ. ಅದೇ ಸಮಯದಲ್ಲಿ ಸಲ್ಮಾನ್ ರ ಬಾಡಿಗಾರ್ಡ್ ಸಹ ಅಶೋಕ್ ಪಾಂಡೆಯನ್ನು ನಿಂದಿಸಿದ್ದಾರೆ.
ಈ ಸಂಬಂಧ ಅಶೋಕ್ ಪಾಂಡೆ ದೂರು ನೀಡಿದ್ದರು, ಹಾಗೂ ತಮ್ಮ ಮೊಬೈಲ್ ಕಿತ್ತುಕೊಂಡಿದ್ದ ಸಲ್ಮಾನ್ ಖಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ಮುಂಬೈನ ಡಿಎನ್ ನಗರ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಲ್ಮಾನ್ ಖಾನ್ ಮನೆಯ ಮುಂದೆ ಸದಾ ದೊಡ್ಡ ಸಂಖ್ಯೆಯ ಪಾಪಾರಾಟ್ಜಿಗಳು ಇದ್ದೇ ಇರುತ್ತಾರೆ. ಸಲ್ಮಾನ್ ಖಾನ್ ಹೊರಗೆಲ್ಲಿಯಾದರೂ ಹೋದರೆ, ಸಲ್ಮಾನ್ ಖಾನ್ ಮನೆಗೆ ಯಾರಾದರೂ ಬಂದರೆ ಕೂಡಲೇ ಅವರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ ಇದು ಸಾಮಾನ್ಯ. ಸದಾ ತಮ್ಮ ಬೆನ್ನ ಹಿಂದೆ ಬಿದ್ದಿರುವ ಪಾಪಾರಾಟ್ಜಿಗಳನ್ನು ಸಲ್ಮಾನ್ ಖಾನ್ ಅಷ್ಟಾಗಿ ಎನ್‌ಕರೇಜ್ ಮಾಡುವುದಿಲ್ಲ ಹಾಗಾಗಿ ಅವರಿಂದ ಅಂತರ ಕಾಯ್ದುಕೊಂಡಿರುತ್ತಾರೆ. ಒಮ್ಮೊಮ್ಮೆ ಜಗಳ ಸಹ ಆಡುತ್ತಾರೆ.
ಸಲ್ಮಾನ್ ಖಾನ್ ವಿರುದ್ಧ ಕೆಲವು ದಿನಗಳ ಹಿಂದೆ ಅವರ ನೆರೆಯವರೇ ಹಲವು ಆರೋಪ ಮಾಡಿದ್ದರು. ಸಲ್ಮಾನ್ ಖಾನ್‌ರ ಪನ್ವೇಲ್‌ನ ದೊಡ್ಡ ಫಾರಂ ಹೌಸ್‌ನ ಪಕ್ಕದಲ್ಲಿ ಜಮೀನು ಖರೀದಿಸಿರುವ ಮುಂಬೈನ ಉದ್ಯಮಿ ಒಬ್ಬರು ಸಲ್ಮಾನ್ ಖಾನ್ ವಿರುದ್ಧ ವಿವಿಧ ಆರೋಪಗಳನ್ನು ಮಾಡಿದ್ದರು. ನಮ್ಮ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿದ್ದರು. ಸಲ್ಮಾನ್ ಖಾನ್ ಫಾರಂ ಹೌಸ್‌ನಲ್ಲಿ ಸೆಲೆಬ್ರಿಟಿಗಳ ಶವ ಹೂಳಲಾಗುತ್ತಿದೆ ಎಂದೂ ಸಹ ಆರೋಪಿಸಿದ್ದರು. ಆರಂಭದಲ್ಲಿ ಸುಮ್ಮನಿದ್ದ ಸಲ್ಮಾನ್ ಖಾನ್ ಆ ಬಳಿಕ ಆ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಪ್ರಕರಣ ವಿಚಾರಣೆ ಚಾಲ್ತಿಯಲ್ಲಿದೆ.


Click it and Unblock the Notifications











