For Quick Alerts
  ALLOW NOTIFICATIONS  
  For Daily Alerts

  ಪುಸ್ತಕ ರೂಪ ಪಡೆದ ನಟ ಸೋನು ಸೂದ್ ಜೀವನ ಅನುಭವ

  |

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮಾನವೀಯತೆ ಕಾರ್ಯಗಳನ್ನು ಮಾಡಿ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡ ಬಾಲಿವುಡ್ ನಟ ಸೋನು ಸೂದ್ ಅವರ ಬಗ್ಗೆ ಪುಸ್ತಕವೊಂದು ತಯಾರಾಗಿದೆ.

  ಪತ್ರಕರ್ತ ಮೀನಾ ಕೆ ಅಯ್ಯರ್ ಎಂಬುವರು ಈ ಪುಸ್ತಕ ಬರೆದಿದ್ದು, 'Penguin: I Am No Messiah' ಎಂದು ಹೆಸರಿಡಲಾಗಿದೆ. ಈ ಪುಸ್ತಕದಲ್ಲಿ ನಟ ಸೋನು ಸೂದ್ ಅವರ ಜೀವನ ಅನುಭವ ಒಳಗೊಂಡಿದೆಯಂತೆ.

  ನೀವು ನಮಗೆ ದೊಡ್ಡ ಸಮಸ್ಯೆ ಆಗಿದ್ದೀರಿ; ಸೋನು ಸೂದ್ ಗೆ ಮೆಗಾಸ್ಟಾರ್ ಹೀಗೆ ಹೇಳಿದ್ದೇಕೆ?

  ಈ ಬಗ್ಗೆ ನಟ-ನಿರ್ಮಾಪಕ ತುಷಾರ್ ಕಪೂರ್ ಟ್ವಿಟ್ಟರ್‌ ಮೂಲಕ ಸೋನು ಸೂದ್‌ಗೆ ಶುಭಕೋರಿದ್ದು, ''ದಬಾಂಗ್ ನಟ ಜೀವನ ಕಥೆಯನ್ನು ಓದಲು ಜನಸಾಮಾನ್ಯರು ಈಗಲೇ ಪುಸ್ತಕವನ್ನು ಬುಕ್ ಮಾಡಿಕೊಳ್ಳಿ'' ಎಂದು ವಿನಂತಿಸಿಕೊಂಡಿದ್ದಾರೆ.

  ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ರಾಜ್ ಕುಮಾರ್ ರಾವ್ ಸಹ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪುಸ್ತಕದ ಫೋಟೋ ಹಂಚಿಕೊಂಡಿದ್ದು, ಸೋನು ಸೂದ್‌ಗೆ ಶುಭಕೋರಿದ್ದಾರೆ.

  ಅಂದ್ಹಾಗೆ, ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದರು. ದಿಢೀರ್ ಅಂತ ಜಾರಿ ಮಾಡಿದ್ದ ಲಾಕ್‌ಡೌನ್‌ನಿಂದ ಊರುಗಳಿಗೆ ಹೋಗಲಾಗದೇ ಸಿಲುಕಿಕೊಂಡಿದ್ದ ಜನರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಊಟ, ನೀರು ಕೊಟ್ಟಿದ್ದರು. ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದರು. ಹಿರಿಯರಿಗೆ, ವೃದ್ಧರಿಗೆ ನೆರವು ನೀಡಿದರು. ವಿದೇಶದಲ್ಲಿದ್ದವರಿಗೂ ಸಹಾಯ ಮಾಡಿದರು. ಶಸ್ತ್ರಚಿಕಿತ್ಸೆಗಳಿಗೆ ಆರ್ಥಿಕ ನೆರವು ಕೊಡಿಸಿದರು.

  'ರಿಯಲ್ ಹೀರೋ' ಸೋನು ಸೂದ್ ಗೆ ದೇವಾಲಯ ಕಟ್ಟಿದ ತೆಲಂಗಾಣ ಜನತೆ

  ಉಲ್ಟಾ ಹೊಡೆದ Rajni ರಾಜಕೀಯ ಜೀವನ | Filmibeat Kannada

  ಹೀಗೆ, ಕಳೆದ ಆರೇಳು ತಿಂಗಳಿನಿಂದ ಬಾಲಿವುಡ್ ನಟ ಸೋನು ಸೂದ್, ವೈಯಕ್ತಿಕವಾಗಿ ಜನರ ಜೊತೆ ನಿಂತು ಅನೇಕ ರೀತಿಯ ಸಹಾಯ ಮಾಡಿದ್ದಾರೆ. ಇದರ ಪರಿಣಾಮ ಸೋನು ಸೂದ್ ಅವರನ್ನು ದೇವರೆಂದು ಪ್ರಾರ್ಥಿಸಿದ ಘಟನೆಗಳು, ದೇವಸ್ಥಾನ ಕಟ್ಟಿದ ಉದಾಹರಣೆಗಳು, ಹೀರೋ ಎಂದು ಪೂಜಿಸಿದ ಸಂದರ್ಭಗಳು ವರದಿಯಾಗಿದೆ.

  English summary
  Bollywood superstar Sonu Sood’s life experiences now in a book by 'Penguin: IAmNoMessiah' Penned by journalist Meena K Iyer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X