For Quick Alerts
  ALLOW NOTIFICATIONS  
  For Daily Alerts

  ವಜ್ರದ ಕಿವಿಯೋಲೆ ಕಳೆದುಕೊಂಡಿರುವ ಜೂಹಿ ಚಾವ್ಲಾ; ಹುಡುಕಿ ಕೊಟ್ಟವರಿಗೆ ಸಿಗಲಿದೆ ಭರ್ಜರಿ ಗಿಫ್ಟ್

  |

  ಬಾಲಿವುಡ್ ನ ಸುಂದರ ನಟಿ ಜೂಹಿ ಚಾವ್ಲಾ ಸದ್ಯ ಸಿನಿಮಾದಿಂದ ದೂರ ಉಳಿದಿದ್ದರೂ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರೇಮಲೋಕದ ಸುಂದರಿ ಇತ್ತೀಚಿಗಷ್ಟೆ ಏರ್ ಪೋರ್ಟ್ ಸಿಬ್ಬಂದಿ ವಿರುದ್ಧ ಹರಿಹಾಯ್ದು ಸುದ್ದಿಯಾಗಿದ್ದರು. ಇದೀಗ ತನ್ನ ವಿಶೇಷವಾದ ಕಿವಿಯೋಲೆ ಕಳೆದುಕೊಂಡು ಪರದಾಡುತ್ತಿದ್ದಾರೆ.

  ಅಭಿಮಾನಿಗಳಿಗೆ ಭರ್ಜರಿ ಆಫರ್ ಕೊಟ್ಟ ಪ್ರೇಮಲೋಕ ಬೆಡಗಿ ಜೂಹಿ ಚಾವ್ಲಾ| Juhi Chawla | Filmibeat Kannada

  ಬೆಲೆಬಾಳುವ ವಜ್ರದ ಕಿವಿಯೋಲೆ ಕಳೆದುಕೊಂಡಿರುವ ಜೂಹಿ ಅದನ್ನು ಹುಡುಕಿಕೊಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರೇಮಲೋಕ ಸುಂದರಿ, ಕಿವಿಯೋಲೆ ಪೋಟೋವನ್ನು ಬಹಿರಂಗ ಪಡಿಸಿ, ದೀರ್ಘವಾದ ಪತ್ರ ಬರೆದಿದ್ದಾರೆ. ಕಳೆದ 15 ವರ್ಷಗಳಿಂದ ಈ ಕಿವಿಯೋಲೆ ಧರಿಸುತ್ತಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ.

  ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಒಳ್ಳೆಯ ಉಡುಗೊರೆ ನೀಡಿದ ಜೂಹಿ ಚಾವ್ಲಾಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಒಳ್ಳೆಯ ಉಡುಗೊರೆ ನೀಡಿದ ಜೂಹಿ ಚಾವ್ಲಾ

  ದಯವಿಟ್ಟು ಕಿವಿಯೋಲೆ ಹುಡುಕಿಕೊಡಿ ಎಂದ ಜೂಹಿ ಚಾವ್ಲಾ

  ದಯವಿಟ್ಟು ಕಿವಿಯೋಲೆ ಹುಡುಕಿಕೊಡಿ ಎಂದ ಜೂಹಿ ಚಾವ್ಲಾ

  'ಡಿಸಂಬರ್ 13ರಂದು ಬೆಳಗ್ಗೆ ಮುಂಬೈ ಏರ್ ಪೋರ್ಟ್ ನ ಗೇಟ್ ನಂ. 8ರಲ್ಲಿ ಬಳಿ ಸೆಕ್ಯೂರಿಟಿ ಚೆಕ್ ಮುಗಿಸಿ ಹೊರಬಿಂದಿದ್ದೇನೆ. ಅಲ್ಲೇ ಎಲ್ಲೋ ತನ್ನ ವಜ್ರದ ಕಿವಿಯೋಲೆ ಕಳೆದುಹೋಗಿದೆ. ಇನ್ನು ಹುಡುಕಲು ದಯವಿಟ್ಟು ಸಹಾಯ ಮಾಡಿ. ಎಲ್ಲಾದರೂ ಸಿಕ್ಕಿದರೆ ಪೊಲೀಸರಿಗೆ ತಲುಪಿಸಿ. ಈ ಕಿವಿಯೋಲೆಯನ್ನು ಸುಮಾರು 15 ವರ್ಷಗಳಿಂದ ಧರಿಸುತ್ತಿದ್ದೇನೆ. ದಯವಿಟ್ಟು ಇದನ್ನು ಹುಡುಕಲು ಸಹಾಯಮಾಡಿ' ಎಂದು ಬರೆದುಕೊಂಡಿದ್ದಾರೆ.

  ಹುಡುಕಿಕೊಟ್ಟವರಿಗೆ ಸಿಗಲಿದೆ ವಿಶೇಷವಾದ ಬಹುಮಾನ

  ಹುಡುಕಿಕೊಟ್ಟವರಿಗೆ ಸಿಗಲಿದೆ ವಿಶೇಷವಾದ ಬಹುಮಾನ

  ಕಿವಿಯೋಲೆ ಹುಡುಕಿಕೊಡಿ ಎಂದು ಮಾತ್ರ ಹೇಳಿಲ್ಲ. ವಜ್ರದ ಕಿವಿಯೋಲೆ ಹುಡುಕಿಕೊಟ್ಟವರಿಗೆ ಭರ್ಜರಿ ಗಿಫ್ಟ್ ಸಹ ಕೊಡುವುದಾಗಿ ಹೇಳಿದ್ದಾರೆ. ಪತ್ರದ ಜೊತೆಗೆ ವಜ್ರದ ಕಿವಿಯೋಲೆಯನ್ನು ಶೇರ್ ಮಾಡಿದ್ದಾರೆ. ವಜ್ರದ ಹರಳುಗಳಿಂದ ತುಂಬಿರುವ ವಶೇಷವಾದ ಕಿವಿಯೋಲೆ ಮೇಲೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿದ್ದಾರೆ ಜೂಹಿ ಚಾವ್ಲಾ.

  ಐಪಿಎಲ್ ಮುಗಿಸಿ ಬಂದು ಏರ್‌ಪೋರ್ಟ್ ಸಿಬ್ಬಂದಿ ಮೇಲೆ ಸಿಟ್ಟು ಪ್ರದರ್ಶಿಸಿದ ಜೂಹಿ ಚಾವ್ಲಾಐಪಿಎಲ್ ಮುಗಿಸಿ ಬಂದು ಏರ್‌ಪೋರ್ಟ್ ಸಿಬ್ಬಂದಿ ಮೇಲೆ ಸಿಟ್ಟು ಪ್ರದರ್ಶಿಸಿದ ಜೂಹಿ ಚಾವ್ಲಾ

  'ಪುಷ್ಪಕ ವಿಮಾನ' ಮೂಲಕ ಮತ್ತೆ ಕನ್ನಡಕ್ಕೆ ಬಂದ ನಟಿ

  'ಪುಷ್ಪಕ ವಿಮಾನ' ಮೂಲಕ ಮತ್ತೆ ಕನ್ನಡಕ್ಕೆ ಬಂದ ನಟಿ

  ಒಂದು ಕಾಲದ ಅದ್ಭುತ ನಟಿ ಜೂಹಿ ಅನೇಕ ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದರು. ಅನೇಕ ವರ್ಷಗಳ ಬಳಿಕ ಜೂಹಿ ಪುಷ್ಪಕ ವಿಮಾನ ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗಿದ್ದರು. ಈ ಸಿನಿಮಾದ ಒಂದು ಹಾಡಿನಲ್ಲಿ ಜೂಹಿ ಚಾವ್ಲಾ ಕಾಣಿಸಿಕೊಂಡಿದ್ದರು. ಈ ಮೂಲಕ ಕನ್ನಡ ಅಭಿಮಾನಿಗಳನ್ನು ಮತ್ತೆ ರಂಜಿಸಿದ್ದರು.

  ಜೂಹಿ ಚಾವ್ಲಾ ನಟನೆಯ ಕನ್ನಡ ಸಿನಿಮಾಗಳು

  ಜೂಹಿ ಚಾವ್ಲಾ ನಟನೆಯ ಕನ್ನಡ ಸಿನಿಮಾಗಳು

  ನಟಿ ಜೂಹಿ ಚಾವ್ಲಾ 'ಪ್ರೇಮಲೋಕ' ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರವಿಚಂದ್ರನ್ ನಾಯಕನಾಗಿ ಮಿಂಚಿದ್ದ ಈ ಸಿನಿಮಾ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದಾಗಿದೆ. ಬಳಿಕ ಕನ್ನಡದಲ್ಲಿ ರಣಧೀರ, ಶಾಂತಿ ಕ್ರಾಂತಿ, ಕಿಂದರಿ ಜೋಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೂಹಿ ಚಾವ್ಲಾ ಕೊನೆಯದಾಗಿ 2019ರಲ್ಲಿ ರಿಲೀಸ್ ಆದ ಏಕ್ ಲಡ್ಕಿ ಕೋ ದೇಖಾ ತೋಹ್ ಐಸಾ ಲಗಾ ಬಾಲಿವುಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  English summary
  Bollywood Actress Juhi Chawla Asks her Followers To Help Find Her Lost diamond Earring She's Worn For 15 Years

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X