For Quick Alerts
  ALLOW NOTIFICATIONS  
  For Daily Alerts

  ಇವ ಯಾವ ಆಂಗಲ್ಲಿಂದ ಅಮೀರ್ ಖಾನ್ ಥರ ಕಾಣ್ತಾನೆ?: ಬಾದ್‌ಶಾನನ್ನು ಅಣಕಿಸಿದ್ದ ಜೂಹಿ ಚಾವ್ಲಾ

  |

  'ಮಿಸ್ ಇಂಡಿಯಾ' ಕಿರೀಟ ತೊಟ್ಟು ಏಕಾಏಕಿ ಜನಪ್ರಿಯತೆ ಪಡೆದಿದ್ದ ಜೂಹಿ ಚಾವ್ಲಾ ಅವರಿಗೆ ಆ ಕಿರೀಟ ಸಿನಿಮಾರಂಗದ ಬಾಗಿಲು ತೆರೆಯುವಂತೆ ಮಾಡಿತು. 'ಸುಲ್ತಾನತ್' ಚಿತ್ರದ ಮೂಲಕ ಅವರು ಬಾಲಿವುಡ್ ಪ್ರವೇಶಿಸಿದರು. ಆದರೆ ಅದು ಯಶಸ್ಸು ಕಾಣಲಿಲ್ಲ. ಅಷ್ಟರಲ್ಲಿ ಜೂಹಿ ಚಾವ್ಲಾರನ್ನು ವಿ. ರವಿಚಂದ್ರನ್ ಕನ್ನಡಕ್ಕೆ ಕರೆತಂದು 'ಪ್ರೇಮಲೋಕ' ಸೃಷ್ಟಿಸಿದರು. ಚಿತ್ರರಂಗದಲ್ಲಿ ಅವರು ಯಶಸ್ಸು ಕಂಡಿದ್ದು ಈ ಚಿತ್ರದ ಮೂಲಕ.

  ಅವರಿಗೆ ಹಿಂದಿಯಲ್ಲಿ ಬ್ರೇಕ್ ನೀಡಿದ್ದು 'ಖಯಾಮತ್‌ಸೆ ಖಯಾಮತ್ ತಕ್' ಚಿತ್ರ. ಅಮೀರ್ ಖಾನ್ ನಾಯಕರಾಗಿದ್ದ ಈ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಲ್ಲಿಂದ ಮುಂದೆ ಜೂಹಿ ಹಿಂದಿರುಗಿ ನೋಡುವ ಪ್ರಮೇಯ ಬರಲಿಲ್ಲ. ಸಾಲು ಸಾಲು ಯಶಸ್ಸುಗಳನ್ನು ಕಂಡರು. ಆ ಸಂದರ್ಭದಲ್ಲಿ ನಟ ಶಾರುಖ್ ಖಾನ್ ಮುಂಬೈಗೆ ಬಂದು ನಟನೆಗೆ ಅವಕಾಶಕ್ಕಾಗಿ ಹುಡುಕಾಡುತ್ತಿದ್ದರು. ಧಾರಾವಾಹಿಗಳಿಂದ ಗುರುತಿಸಿಕೊಂಡಿದ್ದರು. ಮುಂದೆ ಓದಿ..

  ಕರಿಷ್ಮಾ ಕಪೂರ್ 'ಸ್ಟಾರ್' ಆಗಿದ್ದು ನನ್ನಿಂದಾಗಿ ಎಂದ ಜೂಹಿ ಚಾವ್ಲಾಕರಿಷ್ಮಾ ಕಪೂರ್ 'ಸ್ಟಾರ್' ಆಗಿದ್ದು ನನ್ನಿಂದಾಗಿ ಎಂದ ಜೂಹಿ ಚಾವ್ಲಾ

  ರಾಜು ಬನ್ಗಯಾ ಜಂಟಲ್‌ಮ್ಯಾನ್

  ರಾಜು ಬನ್ಗಯಾ ಜಂಟಲ್‌ಮ್ಯಾನ್

  ಶಾರುಖ್ ಖಾನ್ 'ದೀವಾನಾ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ಚಮತ್ಕಾರ್' ಎಂಬ ಚಿತ್ರದಲ್ಲಿಯೂ ನಟಿಸಿದ್ದರು. ಆದರೆ ಅವರು ಅಷ್ಟಾಗಿ ಜನಪ್ರಿಯತೆ ಪಡೆದಿರಲಿಲ್ಲ. ಬಳಿಕ ಅವರಿಗೆ 'ರಾಜು ಬನ್ಗಯಾ ಜಂಟಲ್‌ಮ್ಯಾನ್' ಎಂಬ ಹಾಸ್ಯ ಪ್ರಧಾನ ಚಿತ್ರ ದೊರಕಿತು.

  ಅಮೀರ್ ಖಾನ್ ಥರ ಇದ್ದಾರೆ...

  ಅಮೀರ್ ಖಾನ್ ಥರ ಇದ್ದಾರೆ...

  'ರಾಜು ಬನ್‌ಗಯಾ ಜಂಟಲ್‌ಮ್ಯಾನ್' ಚಿತ್ರಕ್ಕೆ ನಾಯಕಿಯನ್ನಾಗಿ ಜೂಹಿ ಚಾವ್ಲಾ ಅವರನ್ನು ಆಯ್ಕೆ ಮಾಡಲಾಗಿತ್ತು. ಕಥೆ ಹೇಳಿ ಜೂಹಿ ಕೂಡ ಇಷ್ಟಪಟ್ಟರು. ಹೀರೋ ಯಾರು ಎಂದು ಅವರು ವಿಚಾರಿಸಿದರು. ಹೊಸ ಹುಡುಗ ಹೀರೋ ಆಗ್ತಿದ್ದಾನೆ. ಅಷ್ಟೇ ಅಲ್ಲ, ಆತ ಅಮೀರ್ ಖಾನ್ ರೀತಿ ಕಾಣಿಸುತ್ತಾನೆ ಎಂದೆಲ್ಲಾ ಚಿತ್ರತಂಡದವರು ಬಿಲ್ಡಪ್ ನೀಡಿದ್ದರಂತೆ.

  ಮುಚ್ಚಿಟ್ಟಿದ್ದ ಮದುವೆ ರಹಸ್ಯವನ್ನು ಈಗ ಬಹಿರಂಗ ಪಡಿಸಿದ ನಟಿ ಜೂಹಿ ಚಾವ್ಲಾಮುಚ್ಚಿಟ್ಟಿದ್ದ ಮದುವೆ ರಹಸ್ಯವನ್ನು ಈಗ ಬಹಿರಂಗ ಪಡಿಸಿದ ನಟಿ ಜೂಹಿ ಚಾವ್ಲಾ

  ಶಾರುಖ್ ಪರಿಚಯವಿರಲಿಲ್ಲ

  ಶಾರುಖ್ ಪರಿಚಯವಿರಲಿಲ್ಲ

  ಅದಕ್ಕೂ ಮುನ್ನ ಶಾರುಖ್ ಸ್ವಲ್ಪ ಹೆಸರು ಮಾಡಿದ್ದರೂ ಅವರನ್ನು ಜೂಹಿ ನೋಡಿರಲಿಲ್ಲ. ಅಲ್ಲದೆ ಯಶಸ್ಸಿನ ಉತ್ತುಂಗದಲ್ಲಿದ್ದ ತಮಗೆ ತಾವು ಶ್ರೇಷ್ಠರೆಂಬ ಅಹಂಕಾರವೂ ಆಗ ಮೂಡಿತ್ತು ಎಂಬುದಾಗಿ ಜೂಹಿ ಹೇಳಿಕೊಂಡಿದ್ದರು.

  ಅಮೀರ್ ಥರ ಇದ್ದಾರಾ?

  ಅಮೀರ್ ಥರ ಇದ್ದಾರಾ?

  ಕಥೆ ಇಷ್ಟಪಟ್ಟು ಸಹಿ ಹಾಕಿದ್ದ ಜೂಹಿ, ಮೊದಲ ಬಾರಿ ಸೆಟ್‌ಗೆ ಹೋದಾಗಲೇ ಶಾರುಖ್ ಖಾನ್‌ರನ್ನು ನೋಡಿದ್ದು. ಅಮೀರ್ ಖಾನ್‌ರಂತೆ ಇದ್ದಾರೆ ಎಂದುಕೊಂಡಿದ್ದ ಅವರಿಗೆ ಬಹಳ ನಿರಾಸೆಯಾಗಿತ್ತು. ಚಿತ್ರತಂಡದ ಮೇಲೆ ಕೋಪವೂ ಬಂದಿತ್ತು. ಶಾರುಖ್ ಯಾವ ರೀತಿ ಅಮೀರ್ ಖಾನ್‌ರಂತೆ ಕಾಣಿಸುತ್ತಾರೆ ಎಂದು ಪ್ರಶ್ನಿಸಿದರಂತೆ.

  ಇಬ್ಬರ ಗೆಳೆತನ ಬೆಳೆಯಿತು

  ಇಬ್ಬರ ಗೆಳೆತನ ಬೆಳೆಯಿತು

  ನಿರ್ದೇಶಕರು ಹೇಗೋ ಜೂಹಿಯನ್ನು ಸಮಾಧಾನಪಡಿಸಿದರಂತೆ. ಕೊನೆಗೆ ಚಿತ್ರೀಕರಣವೆಲ್ಲ ನಡೆಯಿತು. ಎಲ್ಲವೂ ಸರಾಗವಾಗಿ ಆಯಿತು. ಚಿತ್ರ ದೊಡ್ಡ ಮಟ್ಟದಲ್ಲೇನೂ ಹಿಟ್ ಆಗಲಿಲ್ಲ. ಆದರೆ ಶಾರುಖ್ ಮತ್ತು ಜೂಹಿ ಗೆಳೆತನ ಬೆಳೆಯಿತು. ಬಿಜಿನೆಸ್‌ನಲ್ಲಿಯೂ ಪಾರ್ಟ್‌ನರ್‌ಗಳಾದರು. ಆದರೆ ಶಾರುಖ್‌ರಲ್ಲಿ ಅಮೀರ್‌ಖಾನ್‌ರನ್ನು ಹುಡುಕಿ ಬೇಸರಪಟ್ಟುಕೊಂಡ ಕಥೆಯನ್ನು ಜೂಹಿ ಈಗಲೂ ನೆನಪಿಸಿಕೊಳ್ಳುತ್ತಾರೆ.

  English summary
  Actress Juhi Chawla once compared Shah Rukh Khan to Aamir Khan and mocked his phyique.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X