For Quick Alerts
  ALLOW NOTIFICATIONS  
  For Daily Alerts

  ಐಪಿಎಲ್ ಮುಗಿಸಿ ಬಂದು ಏರ್‌ಪೋರ್ಟ್ ಸಿಬ್ಬಂದಿ ಮೇಲೆ ಸಿಟ್ಟು ಪ್ರದರ್ಶಿಸಿದ ಜೂಹಿ ಚಾವ್ಲಾ

  |

  ಕೊಲ್ಕತ್ತ ನೈಟ್ ರೈಡರ್ಸ್‌ ತಂಡದ ಸಹ ಮಾಲಿಕರಾಗಿರುವ ನಟಿ ಜೂಹಿ ಚಾವ್ಲಾ ಐಪಿಎಲ್ 2020 ಮುಗಿಸಿಕೊಂಡು ಕೆಲವು ದಿನಗಳ ಹಿಂದಷ್ಟೆ ದುಬೈ ಇಂದ ವಾಪಸ್ಸಾಗಿದ್ದಾರೆ.

  ಆದರೆ ದುಬೈನಿಂದ ಭಾರತಕ್ಕೆ ವಾಪಸ್ ಬಂದ ಜೂಹಿ ಚಾವ್ಲಾ ಇಲ್ಲಿನ ಏರ್‌ಪೋರ್ಟ್ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜೂಹಿ ಚಾವ್ಲಾ ಮಾತ್ರವಲ್ಲ, ವಿದೇಶದಿಂದ ವಾಪಸ್ ಬರುತ್ತಿರುವ ಹಲವರು ಇದೇ ಅಸಮಾಧಾನ ಹೊರಹಾಕಿದ್ದಾರೆ.

  ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಒಳ್ಳೆಯ ಉಡುಗೊರೆ ನೀಡಿದ ಜೂಹಿ ಚಾವ್ಲಾಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಒಳ್ಳೆಯ ಉಡುಗೊರೆ ನೀಡಿದ ಜೂಹಿ ಚಾವ್ಲಾ

  ದುಬೈನಿಂದ ವಾಪಸ್ ಬಂದ ಜೂಹಿ ಚಾವ್ಲಾ ಹಾಗೂ ಇತರ ಪ್ರಯಾಣಿಕರನ್ನು, ಆರೋಗ್ಯ ತಪಾಸಣೆ ಹೆಸರಲ್ಲಿ ಗಂಟೆಗಳ ಕಾಲ ಕ್ಯೂ ನಲ್ಲಿ ಕಾಯಿಸಲಾಗಿದೆ. ಇದು ಜೂಹಿ ಚಾವ್ಲಾ ಸೇರಿದಂತೆ ಹಲವು ಪ್ರಯಾಣಿಕರಿಗೆ ಸಿಟ್ಟು ತರಿಸಿದೆ.

  ಏರ್‌ಪೋರ್ಟ್‌ನಲ್ಲಿ ಅನುಭವಿಸಿದ ಸಮಸ್ಯೆ ಬಗ್ಗೆ ವಿಡಿಯೋ

  ಏರ್‌ಪೋರ್ಟ್‌ನಲ್ಲಿ ಅನುಭವಿಸಿದ ಸಮಸ್ಯೆ ಬಗ್ಗೆ ವಿಡಿಯೋ

  ತಾವು ಹಾಗೂ ಹಲವಾರು ಪ್ರಯಾಣಿಕರು ಕ್ಯೂ ನಲ್ಲಿ ನಿಂತು ಕಾಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ ನಟಿ ಜೂಹಿ ಚಾವ್ಲಾ. ಅಲ್ಲದೆ, ವಿಮಾನ ನಿಲ್ದಾಣ ಸಿಬ್ಬಂದಿಯ ಟ್ವಿಟ್ಟರ್‌ನಲ್ಲಿ ದೂರಿದ್ದಾರೆ.

  ಹೆಚ್ಚು ಕೌಂಟರ್ ತೆರೆಯಿರೆಂದು ಜೂಹಿ ಒತ್ತಾಯ

  ಹೆಚ್ಚು ಕೌಂಟರ್ ತೆರೆಯಿರೆಂದು ಜೂಹಿ ಒತ್ತಾಯ

  ಆರೋಗ್ಯ ತಪಾಸಣೆ ಹೆಸರಲ್ಲಿ ಗಂಟೆಗಳವರೆಗೆ ಪ್ರಯಾಣಿಕರನ್ನು ಕಾಯಿಸಲಾಗುತ್ತದೆ. ಅವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಸಹ ಮಾಡಲಾಗಿಲ್ಲ. ವಿಮಾನ ನಿಲ್ದಾಣ ಸಿಬ್ಬಂದಿ ಕೂಡಲೇ ಹೆಚ್ಚಿನ ಸಿಬ್ಬಂದಿಯನ್ನು ಆರೋಗ್ಯ ತಪಾಸಣೆಗೆ ನಿಯೋಜಿಸಬೇಕು ಅಥವಾ ಹೆಚ್ಚು ಕೌಂಟರ್‌ಗಳನ್ನು ತೆರೆಯಬೇಕು ಎಂದು ಜೂಹಿ ಮನವಿ ಮಾಡಿದ್ದಾರೆ.

  ಅನ್ನದಾತ ರೈತರಿಗಾಗಿ ಮಿಡಿದ ನಟಿ ಜೂಹಿ ಚಾವ್ಲಾ ಮಾಡಿದ ಹೊಸ ಯೋಜನೆಅನ್ನದಾತ ರೈತರಿಗಾಗಿ ಮಿಡಿದ ನಟಿ ಜೂಹಿ ಚಾವ್ಲಾ ಮಾಡಿದ ಹೊಸ ಯೋಜನೆ

  ವಿಡಿಯೋ ಹಂಚಿಕೊಂಡಿರುವ ಜೂಹಿ ಚಾವ್ಲಾ

  ವಿಡಿಯೋ ಹಂಚಿಕೊಂಡಿರುವ ಜೂಹಿ ಚಾವ್ಲಾ

  ಜೂಹಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹಲವಾರು ಮಂದಿ ಒಟ್ಟಾಗಿ ಆರೋಗ್ಯ ತಪಾಸಣೆ ಕೌಂಟರ್‌ ಮುಂದೆ ಸಾಲಿನಲ್ಲಿ ನಿಂತಿದ್ದಾರೆ. ಒಬ್ಬ ಪ್ರಯಾಣಿಕ ಏರ್‌ಪೋರ್ಟ್‌ ಸಿಬ್ಬಂದಿ ಜೊತೆಗೆ ಜಗಳವಾಡುತ್ತಿರುವುದು ಸಹ ವಿಡಿಯೋದಲ್ಲಿ ಕಾಣುತ್ತದೆ.

  Recommended Video

  ನಾನು ಕರ್ಣ ಯಾವಾಗ್ಲೂ ರವಿ ಬೆಳಗೆರೆ ಹತ್ರ ಬೈಸಿಕೊಳ್ತಾ ಇದ್ವಿ ಎಂದ ರಾಕೇಶ್ ಅಡಿಗ
  ಕೆಕೆಆರ್‌ ತಂಡದ ಸಹ ಮಾಲಕಿ ಜೂಹಿ

  ಕೆಕೆಆರ್‌ ತಂಡದ ಸಹ ಮಾಲಕಿ ಜೂಹಿ

  ಕೊಲ್ಕತ್ತ ನೈಟ್ ರೈಡರ್ಸ್‌ ತಂಡದ ಒಡೆತನ ಶಾರುಖ್ ಹಾಗೂ ಜೂಹಿ ಚಾವ್ಲಾ ಅವರದ್ದಾಗಿದೆ. ಈ ಬಾರಿ ಕೆಕೆಆರ್‌ ತಂಡವು ಐಪಿಎಲ್ ಪ್ಲೇಆಫ್‌ ಅನ್ನು ಸಹ ತಲುಪಲು ವಿಫಲವಾಗಿದೆ. ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ತಂಡ ನಂತರ ಸೋಲು ಐಪಿಎಲ್‌ನಿಂದ ಹೊರಗಾಯಿತು.

  ಮುಚ್ಚಿಟ್ಟಿದ್ದ ಮದುವೆ ರಹಸ್ಯವನ್ನು ಈಗ ಬಹಿರಂಗ ಪಡಿಸಿದ ನಟಿ ಜೂಹಿ ಚಾವ್ಲಾಮುಚ್ಚಿಟ್ಟಿದ್ದ ಮದುವೆ ರಹಸ್ಯವನ್ನು ಈಗ ಬಹಿರಂಗ ಪಡಿಸಿದ ನಟಿ ಜೂಹಿ ಚಾವ್ಲಾ

  English summary
  Actress Juhi Chawla posted a video on social media about how she and many other passengers waiting for hours in queue for medical test.
  Saturday, November 14, 2020, 9:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X