For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಒಳ್ಳೆಯ ಉಡುಗೊರೆ ನೀಡಿದ ಜೂಹಿ ಚಾವ್ಲಾ

  |

  ಶಾರುಖ್ ಖಾನ್-ಜೂಹಿ ಚಾವ್ಲಾ ಜೋಡಿ ಬಾಲಿವುಡ್‌ನ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು. ಡರ್, ಯೆಸ್ ಬಾಸ್, ರಾಮ್ ಜಾನೇ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದೆ ಈ ಜೋಡಿ.

  ಶಾರುಖ್ ಖಾನ್ ಕಾಜೋಲ್ ಜೋಡಿಯಷ್ಟೇ ಶಾರುಖ್-ಜೂಹಿ ಚಾಲ್ವಾ ಜೋಡಿಯೂ ಖ್ಯಾತವಾಗಿತ್ತು. ಶಾರುಖ್-ಜೂಹಿ ಒಟ್ಟಿಗೆ ನಟಿಸಿ ಬಹುಕಾಲವೇ ಆಗಿದೆ. ಆದರೆ ಇಬ್ಬರೂ ಸಹ ಈಗಲೂ ಅತ್ಯುತ್ತಮವಾದ ಸ್ನೇಹಿತರು.

  ಕುಡಿದು ಶಾರುಖ್ ಖಾನ್ ಅನ್ನೇ ಕಾಡಿಸಿದ್ದಳಂತೆ ಈ ಬಾಲಿವುಡ್ ನಟಿಕುಡಿದು ಶಾರುಖ್ ಖಾನ್ ಅನ್ನೇ ಕಾಡಿಸಿದ್ದಳಂತೆ ಈ ಬಾಲಿವುಡ್ ನಟಿ

  ಶಾರುಖ್ ಖಾನ್ ಒಡೆತನದ ಕೊಲ್ಕತ್ತ ನೈಟ್ ರೈಡರ್ಸ್ ಐಪಿಎಲ್ ತಂಡದಲ್ಲಿ ಜೂಹಿ ಚಾಲ್ವಾ ಅವರದ್ದೂ ಪಾಲುದಾರಿಕೆ ಇದೆ. ಕೆಕೆಆರ್ ಗೆದ್ದಾಗ ಇಬ್ಬರೂ ಕುಣಿದು ಕುಪ್ಪಳಿಸುತ್ತಾರೆ.

  ಇಂದು (ನವೆಂಬರ್ 2) ಶಾರುಖ್ ಖಾನ್ ಹುಟ್ಟುಹಬ್ಬವಾಗಿದ್ದು, ಗೆಳತಿ ಜೂಹಿ ಚಾವ್ಲಾ, ಶಾರುಖ್‌ಗಾಗಿ ಅತ್ಯುತ್ತಮವಾದ ಉಡುಗೊರೆಯೊಂದನ್ನು ನೀಡಿದ್ದಾರೆ.

  ವೈಭವೋಪೇತ ಮನೆ 'ಮನ್ನತ್' ಅನ್ನು ಮಾರುತ್ತಾರೆಯೇ ಶಾರುಖ್ ಖಾನ್?ವೈಭವೋಪೇತ ಮನೆ 'ಮನ್ನತ್' ಅನ್ನು ಮಾರುತ್ತಾರೆಯೇ ಶಾರುಖ್ ಖಾನ್?

  500 ಗಿಡ ಉಡುಗೊರೆ ನೀಡಿದ ಜೂಹಿ ಚಾವ್ಲಾ

  500 ಗಿಡ ಉಡುಗೊರೆ ನೀಡಿದ ಜೂಹಿ ಚಾವ್ಲಾ

  ಹೌದು, ನಟಿ ಜೂಹಿ ಚಾವ್ಲಾ, ಶಾರುಖ್ ಖಾನ್ ಹುಟ್ಟುಹಬ್ಬದ ಸಂದರ್ಭದಲ್ಲಿ 500 ಸಸಿಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಆ ಎಲ್ಲಾ ಸಸಿಗಳು ಕಾವೇರಿ ನದಿ ತೀರದಲ್ಲಿ ನೆಡಲಾಗುತ್ತದೆ.

  ಇಶಾ ಫೌಂಡೇಶನ್‌ಗೆ ಗಿಡ ನೀಡಿದ ಜೂಹಿ

  ಇಶಾ ಫೌಂಡೇಶನ್‌ಗೆ ಗಿಡ ನೀಡಿದ ಜೂಹಿ

  ಹೌದು, ಜೂಹಿ ಚಾವ್ಲಾ, ಶಾರುಖ್ ಹುಟ್ಟುಹಬ್ಬದ ಪ್ರಯುಕ್ತ 500 ಗಿಡಗಳನ್ನು 'ಕಾವೇರಿ ಕಾಲಿಂಗ್' ಪ್ರಾಜೆಕ್ಟ್‌ಗೆ ನೀಡಿದ್ದಾರೆ. ಇಶಾ ಫೌಂಡೇಶನ್ ಈ ಅಭಿಯಾನ ನಡೆಸುತ್ತಿದ್ದು, ಕಾವೇರಿ ನದಿಪಾತ್ರದುದ್ದಕ್ಕೂ ಲಕ್ಷಾಂತರ ಮರಗಳನ್ನು ಬೆಳೆಸುವ ಉದ್ದೇಶ ಫೌಂಡೇಶನ್‌ಗೆ ಇದೆ.

  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಶಾರುಖ್

  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಶಾರುಖ್

  ಕೊರೊನಾ ವೈರಸ್ ಇರುವ ಕಾರಣ ಶಾರುಖ್ ಖಾನ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ ಅವರು ಈದ್ ಹಬ್ಬವನ್ನೂ ಸಹ ಈ ಬಾರಿ ಆಚರಿಸಿಕೊಳ್ಳುತ್ತಿಲ್ಲ. ಕೇವಲ ತಮ್ಮ ಕುಟುಂಬದೊಂದಿಗೆ ಮಾತ್ರವೇ ಅವರು ಕಾಲಕಳೆಯುತ್ತಿದ್ದಾರೆ.

  ಈ ತರಹದ ಸಿನ್ಸೆಪ್ಟ್ ಇದುವರೆಗೂ ಬಂದಿಲ್ಲ | Shivakumar | Mukhavaada Illadavanu
  ಬಾಲಿವುಡ್ ಖ್ಯಾತ ನಟ-ನಟಿಯರಿಂದ ಶುಭಾಶಯ

  ಬಾಲಿವುಡ್ ಖ್ಯಾತ ನಟ-ನಟಿಯರಿಂದ ಶುಭಾಶಯ

  ನಟಿಯರಾದ ಮಾಧುರಿ ದೀಕ್ಷಿತ್, ಕರೀನಾ ಕಪೂರ್, ಜೂಹಿ ಚಾವ್ಲಾ, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಇನ್ನೂ ಹಲವಾರು ಮಂದಿ ಶಾರುಖ್‌ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಮಿತಾಬ್ ಬಚ್ಚನ್, ಸಲ್ಮಾನ್, ಅಮೀರ್ ಖಾನ್ ಸಹ ಶುಭಾಶಯ ಕೋರಿದ್ದಾರೆ.

  English summary
  Juhi Chawla gave 500 saplings to Isha Foundation on the occasion of Sharukh Khan's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X