For Quick Alerts
  ALLOW NOTIFICATIONS  
  For Daily Alerts

  ಆರ್ಯನ್-ಜಾಹ್ನವಿ ಫೋಟೋ ಬಗ್ಗೆ ಮೌನ ಮುರಿದ ಜೂಹಿ ಚಾವ್ಲಾ

  |

  ಶಾರೂಖ್ ಖಾನ್ ಮಗ ಆರ್ಯನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಬರ್ತಾನೆ ಇರುತ್ತೆ. ಕೆಲವೊಮ್ಮೆ ಆರ್ಯನ್ ಲುಕ್ ಥೇಟ್ ಶಾರೂಖ್ ಖಾನ್ ಯೌವನದಲ್ಲಿ ಹೇಗಿದ್ರು ಎನ್ನುವುದನ್ನ ನೆನಪಿಸುವಂತಿರುತ್ತೆ. ಕಳೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಶಾರೂಖ್ ಪುತ್ರ ಭಾಗಿಯಾಗಿದ್ದರು. ಈ ವೇಳೆ ಕ್ಯಾಮೆರಾಗಳೆಲ್ಲವೂ ಆರ್ಯನ್ ಕಡೆ ಫೋಕಸ್ ಆಗಿದ್ದವು. ಆರ್ಯನ್‌ಗೆ ಜೂಹಿ ಚಾವ್ಲಾ ಮಗಳು ಜಾಹ್ನವಿ ಮೆಹ್ತಾ ಸಾಥ್ ಕೊಟ್ಟಿದ್ದರು. ಶಾರೂಖ್ ಖಾನ್ ಮತ್ತು ಜೂಹಿ ಚಾವ್ಲಾ ಅಲಭ್ಯತೆಯಲ್ಲಿ ಆರ್ಯನ್ ಮತ್ತು ಜಾಹ್ನವಿ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಐಪಿಎಲ್ ಹರಾಜಿಗಿಂತ ಈ ಜೋಡಿ ಹೆಚ್ಚು ಗಮನ ಸೆಳೆದಿತ್ತು.

  ತೆರೆಮೇಲೆ ಮತ್ತು ತೆರೆಹಿಂದೆ ಶಾರೂಖ್ ಖಾನ್ ಮತ್ತು ಜೂಹಿ ಚಾವ್ಲಾ ಅವರ ಒಡನಾಟ ಹೇಗಿದೆ ಎನ್ನುವುದಕ್ಕೆ ಈ ಜೋಡಿ ಸಾಕ್ಷಿ ಎಂದು ಅನೇಕರು ಕಾಮೆಂಟ್ ಮಾಡಿದ್ದರು. ಇನ್ನು ಕೆಲವು ಆರ್ಯನ್ ಮತ್ತು ಜಾಹ್ನವಿಯ ಭವಿಷ್ಯ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ, ಆರ್ಯನ್ ಮತ್ತು ಜಾಹ್ನವಿ ಮೆಹ್ತಾ ಫೋಟೋ ಹಾಗೂ ಐಪಿಎಲ್ ಹರಾಜಿನಲ್ಲಿ ಅವರ ಭಾಗವಹಿಸುವಿಕೆ ಬಗ್ಗೆ ನಟಿ ಜೂಹಿ ಚಾವ್ಲಾ ಮೊದಲ ಸಲ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ...

  ನನ್ನ ಮತ್ತು ಶಾರೂಖ್ ನೋಡಿದಂತಿದೆ

  ನನ್ನ ಮತ್ತು ಶಾರೂಖ್ ನೋಡಿದಂತಿದೆ

  ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿರುವ ನಟಿ ಜೂಹಿ ಚಾವ್ಲಾ, ಆರ್ಯನ್ ಮತ್ತು ಜಾಹ್ನವಿ ಫೋಟೋ ವೈರಲ್ ಆದ ಕುರಿತು ಮೊದಲ ಸಲ ಮಾತನಾಡಿದ್ದಾರೆ. ''ಈ ಫೋಟೋ ನೋಡಿದಾಗ ಅನೇಕ ವಿಷಯಗಳು ನೆನಪಾಗುತ್ತದೆ. ನಿಜಕ್ಕೂ ಈ ಪ್ರಕೃತಿ ಎಂದು ಅದ್ಭುತ ಎನಿಸುತ್ತದೆ. ಈ ಫೋಟೋದಲ್ಲಿ ಆರ್ಯನ್ ನೋಡಲು ಥೇಟ್ ಶಾರೂಖ್ ಖಾನ್ ಯೌವನದಲ್ಲಿ ಹೇಗಿದ್ದರು ಎಂದು ಪ್ರತಿಬಿಂಬಿಸಿದೆ. ಆ ವಯಸ್ಸಿನಲ್ಲಿ ನಾನು ಹೇಗಿದ್ದೆ ಎಂದು ಜಾಹ್ನವಿ ನೋಡಿದರೆ ನೆನಪಾಗುತ್ತಿದೆ'' ಎಂದಿದ್ದಾರೆ.

  ವಿಶ್ವದ ಬೇಡಿಕೆಯ ನಟ: ಶಾರೂಖ್, ಅಲ್ಲು ಅರ್ಜುನ್, ಪ್ರಿಯಾಂಕಾ ಟಾಪ್ವಿಶ್ವದ ಬೇಡಿಕೆಯ ನಟ: ಶಾರೂಖ್, ಅಲ್ಲು ಅರ್ಜುನ್, ಪ್ರಿಯಾಂಕಾ ಟಾಪ್

  ಕ್ರಿಕೆಟ್ ಬಗ್ಗೆ ಇಬ್ಬರಿಗೂ ಆಸಕ್ತಿ ಇದೆ

  ಕ್ರಿಕೆಟ್ ಬಗ್ಗೆ ಇಬ್ಬರಿಗೂ ಆಸಕ್ತಿ ಇದೆ

  ''ಕ್ರಿಕೆಟ್ ಬಗ್ಗೆ ಇಬ್ಬರಿಗೂ ಬಹಳ ಆಸಕ್ತಿ ಇದೆ. ಅವರ ಆಸಕ್ತಿ ಕಂಡು ನನಗೆ ಬಹಳ ಖುಷಿಯಾಗಿದೆ. ಅವರಿಬ್ಬರು ಕ್ರಿಕೆಟ್‌ ಒಳಗೆ ಬಲವಂತವಾಗಿ ತಳ್ಳುತ್ತಿಲ್ಲ. ಅವರೇ ಬಯಸಿ ಆಯ್ಕೆ ಮಾಡಿಕೊಂಡು ಬಂದಿರುವುದು. ಇಬ್ಬರು ಕ್ರೀಡೆಯನ್ನು ಹೆಚ್ಚು ಫಾಲೋ ಮಾಡ್ತಾರೆ. ವಿಶೇಷವಾಗಿ ಜಾಹ್ನವಿ ವಿಶ್ವದ ಬೇರೆ ಕಡೆ ನಡೆಯುವ ಕ್ರಿಕೆಟ್ ಟೂರ್ನಿಗಳನ್ನು ನೋಡ್ತಾರೆ. ರಾತ್ರಿ ಸಮಯದಲ್ಲೂ ಎದ್ದು ಪಂದ್ಯಗಳನ್ನು ನೋಡ್ತಾರೆ'' ಎಂದು ಜೂಹಿ ಚಾವ್ಲಾ ತಿಳಿಸಿದರು.

  ಆ ದೇವರಿಗೆ ಕೃತಜ್ಞತೆ ಸಲ್ಲಿಸಿದೆ

  ಆ ದೇವರಿಗೆ ಕೃತಜ್ಞತೆ ಸಲ್ಲಿಸಿದೆ

  ''ಜಾಹ್ನವಿ ಕ್ರಿಕೆಟ್ ಬಗ್ಗೆ ಚರ್ಚಿಸಿದಾಗ ನನಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ಕ್ರಿಕೆಟ್ ಕುರಿತು ಕ್ರೀಡೆ ಬಗ್ಗೆ ತಾಂತ್ರಿಕವಾಗಿ ಎಷ್ಟೊಂದು ತಿಳಿದುಕೊಂಡಿದ್ದಾಳೆ ಎಂದು ನೋಡಿ ಸರ್ಪ್ರೈಸ್ ಆಗುತ್ತದೆ. ಐಪಿಎಲ್ ಹರಾಜಿನಲ್ಲಿ ಈ ಮಕ್ಕಳನ್ನು ನೋಡಿದಾಗ ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿದೆ. ಮಕ್ಕಳು ತಮ್ಮ ಸ್ವ-ಇಚ್ಛೆಯಿಂದ ತಮಗೆ ಅನಿಸಿದ್ದನ್ನು ಮಾಡಲು ತೆಗೆದುಕೊಂಡ ನಿರ್ಧಾರ ಖುಷಿ ಕೊಟ್ಟಿದೆ'' ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಹೇಳಿಕೊಂಡಿದ್ದಾರೆ.

  'ದಯವಿಟ್ಟು ಅವಕಾಶ ಕೊಡಿ': ಖ್ಯಾತ ನಟಿ ಬಳಿ ಕೇಳಿಕೊಂಡ ಶಾರೂಖ್'ದಯವಿಟ್ಟು ಅವಕಾಶ ಕೊಡಿ': ಖ್ಯಾತ ನಟಿ ಬಳಿ ಕೇಳಿಕೊಂಡ ಶಾರೂಖ್

  ಬಾಲಿವುಡ್‌ಗೆ ಎಂಟ್ರಿ?

  ಬಾಲಿವುಡ್‌ಗೆ ಎಂಟ್ರಿ?

  ಜೂಹಿ ಚಾವ್ಲಾ ಅವರ ಮಗಳು ಜಾಹ್ನವಿ ಮೆಹ್ತಾ ಸಾರ್ವಜನಿಕ ಕಾರ್ಯಕ್ರಮಗಳು, ವೇದಿಕೆಗಳಲ್ಲಿ ಕಾಣಿಸಿಕೊಳ್ಳಲು. ಪ್ರಚಾರ ಅಥವಾ ಮಾಧ್ಯಮಗಳಿಂದ ದೂರ. ಇನ್ನು ಶಾರೂಖ್ ಖಾನ್ ಪುತ್ರ ವೈಯಕ್ತಿಕವಾಗಿ ಗರ್ಲ್‌ಫ್ರೆಂಡ್ ವಿಚಾರಕ್ಕೆ ಆಗಾಗ ಸುದ್ದಿಯಾಗ್ತಾರೆ. ಇದರ ಜೊತೆಗೆ ಬಾಲಿವುಡ್ ಪ್ರವೇಶಿಸಲು ಎಲ್ಲ ಸಿದ್ಧತೆ ನಡೆಯುತ್ತಿದೆ ಎಂಬ ವರದಿಗಳು ಸಾಮಾನ್ಯವಾಗಿದೆ. ಸದ್ಯಕ್ಕೆ ಆರ್ಯನ್ ಚೊಚ್ಚಲ ಚಿತ್ರದ ಬಗ್ಗೆ ಯಾವುದೇ ಸುಳಿವು ಇಲ್ಲ. ಇನ್ನು ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಮೇಲೆ ಶಾರೂಖ್ ಖಾನ್ ಮತ್ತು ಜೂಹಿ ಚಾವ್ಲಾ ಬಂಡವಾಳ ಹೂಡಿಕೆ ಮಾಡಿದ್ದು, ಈ ಇಬ್ಬರು ಜಂಟಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

  English summary
  Bollywood actress Juhi chawla react on Aryan khan and jhanvi mehta Photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X