For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಜೊತೆ ರಾಜಮೌಳಿ ತಂದೆ ಸಿನಿಮಾ; ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ವಿಜಯೇಂದ್ರ ಪ್ರಸಾದ್

  |

  ಖ್ಯಾತ ಬರಹಗಾರ, ರಾಜಮೌಳಿ ತಂದೆ ಕೆ.ವಿ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಾರೆ ಅಂದರೆ ಆ ಸಿನಿಮಾದ ಮೇಲೆ ಎಲ್ಲಿಲ್ಲದ ನಿರೀಕ್ಷೆ, ಕುತೂಹಲ ಹುಟ್ಟಿಕೊಳ್ಳುತ್ತದೆ. ಇದೀಗ ಸಲ್ಮಾನ್ ಜೊತೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮತ್ತೆ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ ಎನ್ನುವ ಇಂಟ್ರೆಸ್ಟಿಂಗ್ ವಿಚಾರ ಬಹಿರಂಗವಾಗಿದೆ.

  ಅಂದಹಾಗೆ ವಿಜಯೇಂದ್ರ ಪ್ರಸಾದ್ ಮತ್ತು ಸಲ್ಮಾನ್ ಕಾಂಬಿನೇಷನ್‌ನಲ್ಲಿ ಬಂದ 'ಭಜರಂಗಿ ಭೈಜಾನ್' ಸಿನಿಮಾ ನೆನಪಿದೆ ತಾನೆ. ಈ ಸೂಪರ್ ಹಿಟ್ ಚಿತ್ರವನ್ನು ಮರೆಯಲು ಸಾಧ್ಯವಿಲ್ಲ. ಭಾರತೀಯ ಚಿತ್ರರಂಗದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. 2015ರಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಬಾಕ್ಸ್ ಆಫೀಸ್‌ನಲ್ಲೂ ದಾಖಲೆಯ ಕಮಾಯಿ ಮಾಡಿತ್ತು.

  ಈ ಸಿನಿಮಾ ಬಿಡುಗಡೆಯಾಗಿ 6 ವರ್ಷಗಳು ಕಳೆದಿವೆ. ಇದೀಗ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಮಾಡಲು ಕೆ.ವಿ ವಿಜಯೇಂದ್ರ ಪ್ರಸಾದ್ ನಿರ್ಧರಿಸಿದ್ದಾರೆ ಎನ್ನುವ ಕುತೂಹಲಕಾರಿ ಸಂಗತಿ ಬಹಿರಂಗವಾಗಿದೆ. ಈ ಬಗ್ಗೆ ಸ್ವತಃ ವಿಜಯೇಂದ್ರ ಪ್ರಸಾದ್ ಅವರೇ ಬಹಿರಂಗಪಡಿಸಿದ್ದಾರೆ. ಪಿಂಕ್ವಿಲ್ಲಾ ವೆಬ್ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿಜಯೇಂದ್ರ ಪ್ರಸಾದ್ ಭಜರಂಗಿ ಭೈಜಾನ್ ಸೀಕ್ವೆಲ್ ಬಗ್ಗೆ ಬಹಿರಂಗ ಪಡಿಸಿದ್ದಾರೆ.

  "ನಾನು 'ಭಜರಂಗಿ ಭೈಜಾನ್-2' ಭೇದಿಸಲು ಪ್ರಯತ್ನಿಸುತ್ತಿದ್ದೇನೆ. ಸ್ವಲ್ಪ ಸಮಯದ ಹಿಂದೆ ನಾನು ಈ ವಿಚಾರವನ್ನು ಸಲ್ಮಾನ್ ಖಾನ್ ಗೆ ಹೇಳಿದ್ದೆ. ಈ ವಿಚಾರ ಕೇಳಿ ಉತ್ಸುಕರಾಗಿದ್ದಾರೆ. ಆದರೆ ಆದನ್ನು ಮುಂದೆ ಸಾಗಿಸಲು ಸರಿಯಾದ ವಾಹನ ಹುಡುಕುತ್ತಿದ್ದೇನೆ. ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

  "ನಾನು ಆಕಸ್ಮಿಕವಾಗಿ ಸಲ್ಮಾನ್ ಖಾನ್ ಅವರನ್ನು ಭೇಟಿಯಾದಾಗ ಭಜರಂಗಿ ಭೈಜಾನ್ ಸೀಕ್ವೆಲ್ ಬಗ್ಗೆ ಹೇಳಿದೆ. ಒಳ್ಳೆಯ ಐಡಿಯಾ ಎಂದು ಹೇಳಿದರು. ನನ್ನ ಪ್ಲಾನ್ ಅನ್ನು ಬ್ಲಾಕ್ ಬಸ್ಟರ ಖಾನ್ ಗೆ ವಿವರಿಸಿದೆ" ಎಂದು ಹೇಳಿದ್ದಾರೆ. ವಿಜಯೇಂದ್ರ ಪ್ರಸಾದ್ ರಚನೆಯಲ್ಲಿ ಸಲ್ಮಾನ್ ಖಾನ್ ಹೀರೋ ಆಗಿ ಮಿಂಚುತ್ತಾರೆ ಎನ್ನುವುದನ್ನೇ ಕೇಳಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇನ್ನೇನಾದ್ರು ಸಿನಿಮಾ ಬಿಡುಗಡೆಯಾದ್ರೆ ಹೇಗಿರಬಹುದು ಕ್ರೇಜ್ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ.

  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada

  'ಭಜರಂಗಿ ಭೈಜಾನ್' ಮೊದಲ ಭಾಗದಲ್ಲಿ ಮೋಡಿ ಮಾಡಿದ್ದ ಸಲ್ಮಾನ್ ಖಾನ್, ಕರೀನಾ ಕಪೂರ್, ಹರ್ಷಾಲಿ ಮಲ್ಹೋತ್ರ, ನವಾಜುದ್ದೀನ್ ಸಿದ್ದಿಕಿ ಎರಡನೇ ಭಾಗದಲ್ಲೂ ಇರ್ತಾರಾ ಎಂದು ಕಾದುನೋಡಬೇಕು.

  English summary
  K.V Vijayendra Prasad planned for bajrangi bhaijaan sequel, He confirms working on sequel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X