For Quick Alerts
  ALLOW NOTIFICATIONS  
  For Daily Alerts

  ವರ್ಷಾಂತ್ಯಕ್ಕೆ ಕಿಯಾರಾ ಅಡ್ವಾನಿ ಸಿದ್ಧಾರ್ಥ್ ಮಲ್ಹೋತ್ರಾ?

  |

  ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾ ನಡುವೆ ಲವ್ವಿ, ಡವ್ವಿ ಇದೆ ಎನ್ನುವ ವಿಚಾರ ಹಲವು ದಿನಗಳಿಂದ ಬಾಲಿವುಡ್‌ನಲ್ಲಿ ಹರಿದಾಡುತ್ತಾ ಇದೆ. ಆದರೆ ಮಧ್ಯದಲ್ಲಿ ಕಿರಿಕ್ ಆಗಿತ್ತಂತೆ. ಈಗ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ.

  ಕಳೆದ ಕೆಲವು ದಿನಗಳಿಂದ ಕಿಯಾರ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಪ್ರೀತಿ ಬ್ರೇಕಪ್ ಆಗಿದೆ ಎನ್ನುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ ಈಗ ಅದು ಸರಿಯಾಗಿದೆ ಎಂದು ಈ ಜೋಡಿ ತೋರಿಸಿಕೊಟ್ಟಿದೆ. ಭೂಲ್ ಭುಲಯ್ಯ 2 ಚಿತ್ರದ ಪ್ರೀಮಿಯರ್ ಶೋಗೆ ಕಿಯಾರ ಜೊತೆಗೆ ಸಿದ್ಧಾರ್ಥ್. ಹಲವು ದಿನಗಳ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು, ಬ್ರೇಕಪ್ ಸುದ್ದಿಗೆ ಬ್ರೇಕ್ ಹಾಕಿದೆ.

  ಐದು ದಿನ ಕಳೆದರೂ ನಿಲ್ಲದ 'ಭೂಲ್ ಭುಲಯ್ಯ 2' ಓಟ: 5ನೇ ದಿನದ ಕಲೆಕ್ಷನ್ ಎಷ್ಟು?ಐದು ದಿನ ಕಳೆದರೂ ನಿಲ್ಲದ 'ಭೂಲ್ ಭುಲಯ್ಯ 2' ಓಟ: 5ನೇ ದಿನದ ಕಲೆಕ್ಷನ್ ಎಷ್ಟು?

  ಈಗ ಮತ್ತೆ ಈ ಬಾಲಿವುಡ್ ಕಪಲ್‌ ಮದುವೆ ಸುದ್ದಿ ಬಂದಿದೆ. ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚಿನ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ ಈ ಜೋಡಿ ತಮ್ಮ ರಿಲೆಶನ್‌ಷಿಪ್‌ ಕಾರಣ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ.

  ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್'ನಲ್ಲಿ ನಟ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಂಡಾಗ, ಮದುವೆಯ ಬಗ್ಗೆ ವದಂತಿಗಳು ಹರಡಲು ಪ್ರಾರಂಭಿಸಿದವು. ಆದರೆ, 'ಕಾಫಿ ವಿತ್ ಕರಣ್'ನ ಇತ್ತೀಚಿನ ಎಪಿಸೋಡ್ ಟೀಸರ್‌ನಲ್ಲಿ ಹೊರಬಂದಿದ್ದು, ಇದರಲ್ಲಿ ನಟ ಶಾಹಿದ್ ಕಪೂರ್, ಕಿಯಾರ ಅಡ್ವಾನಿ ಜೊತೆಗೆ ಭಾಗಿಯಾಗಿದ್ದಾರೆ. ಇದೇ ವೇಳೆ ವರ್ಷದ ಅಂತ್ಯದ ವೇಳೆಗೆ ಈ ಜೋಡಿ ತಮ್ಮ ಮದುವೆಯನ್ನು ಘೋಷಿಸಬಹುದು ಎಂಬ ಹಿಂಟ್‌ ನೀಡಿದ್ದಾರೆ.

  ಕಾರ್ಯಕ್ರಮದ ಸಮಯದಲ್ಲಿ ಸಿದ್ಧಾರ್ಥ್ ಗೆ ಮದುವೆಯ ಯೋಜನೆಗಳು ಮತ್ತು ಕಿಯಾರಾ ಅಡ್ವಾಣಿ ಜೊತೆಗಿನ ವದಂತಿಯ ಬಗ್ಗೆ ಕೇಳಲಾಗಿತ್ತು. ಆದರೆ ಸಿದ್ಧಾರ್ಥ್ ಮಲ್ಹೋತ್ರ ಪ್ರಶ್ನೆಗೆ ಉತ್ತರಿಸದೆ ತಪ್ಪಿಸಿಕೊಂಡರು. ಇದು ಮೇಲ್ನೋಟಕ್ಕೆ ಉತ್ತರ ನೀಡಲು ಅವರು ಹಿಂಜರಿದಿದ್ದು ಸ್ಪಷ್ಟವಾಯಿತು.

  ನಂತರ ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್' ಶೋಗೆ ಕಿಯಾರಾ ಅಡ್ವಾಣಿ ಮತ್ತು ಶಾಹಿದ್ ಕಪೂರ್ ಜೊತೆಯಾಗಿ ಆಗಮಿಸಿದ್ದರು. ಈ ಸಂಚಿಕೆ ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಸದ್ಯ ಇದರ ಟೀಸರ್ ಮಾತ್ರವೇ ಹೊರ ಬಂದಿದೆ.

  ಕಿಯಾರಾ ಅಡ್ವಾಣಿ ಮತ್ತು ಶಾಹಿದ್ ಕಪೂರ್ ಒಳಗೊಂಡ ಸಂಚಿಕೆಯ ಪ್ರೋಮೋ ಟೀಸರ್‌ನಲ್ಲಿ, ಕರಣ್ ಕಿಯಾರಾ ಅವರನ್ನು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗಿನ ಸಂಬಂಧದ ಸ್ಥಿತಿಯ ಬಗ್ಗೆ ಕೇಳುತ್ತಾರೆ. ಅದಕ್ಕೆ ಉತ್ತರಿಸುವಾಗ ಕಿಯಾರಾ ನಾಚುತ್ತಾ, ಇಬ್ಬರೂ ಆಪ್ತ ಸ್ನೇಹಿತರಿಗಿಂತ ಹೆಚ್ಚು ಎಂದು ಹೇಳುತ್ತಾರೆ.

  ಆದರೆ ಶಾಹಿದ್ ಕಪೂರ್ ಅವರ ಮದುವೆಯ ಬಗ್ಗೆ ಮಾತನಾಡಿರುವ ಶಾಹಿದ್ ಕಪೂರ್, ''ಈ ವರ್ಷದ ಅಂತ್ಯದ ವೇಳೆಗೆ ದೊಡ್ಡ ಘೋಷಣೆಗೆ ಸಿದ್ಧರಾಗಿರಿ ಆದರೆ ಅದು ಸಿನಿಮಾ ಅಂತೂ ಖಂಡಿತ ಅಲ್ಲ" ಎಂದು ಶಾಹಿದ್ ಹೇಳಿರುವು ಈಗ ಚರ್ಚೆಗೆ ಗ್ರಾಸವಾಗಿದೆ. ಶಾಹಿದ್ ಕಪೂರ್ ಕಿಯಾರ ಮತ್ತು ಸಿದ್ಧಾರ್ಥ್ ಮದುವೆ ಬಗ್ಗೆ ಈ ಮೂಲಕ ಸೂಚನೆ ಕೊಟ್ಟಿದ್ದಾರೆ.

  English summary
  Kaira Advani And Sidharth Malhotra To Get Married By The End Of This Year, Know more,
  Wednesday, August 24, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X