Bholaa Trailer: ಹೀರೊಯಿನ್, ಐಟಂ ಸಾಂಗ್, ಫ್ಲಾಶ್‌ಬ್ಯಾಕ್.. 'ಖೈದಿ' ಕಥೆಯನ್ನು ಹಾಳು ಮಾಡಿದ್ರಾ ದೇವಗನ್?

ಅಜಯ್ ದೇವಗನ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ 'ಭೋಳಾ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದು ತಮಿಳಿನ ಸೂಪರ್ ಹಿಟ್ 'ಖೈದಿ' ಚಿತ್ರದ ಅಫೀಷಿಯಲ್ ರೀಮೆಕ್. ಆದರೆ ಟ್ರೈಲರ್ ನೋಡಿದರೆ ಹಿಂದಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿರೋದು ಗೊತ್ತಾಗುತ್ತಿದೆ. ಇನ್ನು ಈ ಆಕ್ಷನ್ ಎಂಟರ್‌ಟೈನರ್‌ ಚಿತ್ರವನ್ನು ಥ್ರಿಡಿಯಲ್ಲಿ ಕಟ್ಟಿಕೊಟ್ಟಿದ್ದು ಮಾರ್ಚ್ 30ಕ್ಕೆ ತೆರೆಗಪ್ಪಳಿಸಲಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ 'ಖೈದಿ' ಸಿನಿಮಾ ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಪರಭಾಷಾ ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಕಾರ್ತಿ ಚಿತ್ರದಲ್ಲಿ ಹೀರೊ ಆಗಿ ಅಬ್ಬರಿಸಿದ್ದರು. ದಿಲ್ಲಿ ಎನ್ನುವ ಕೈದಿ ಪಾತ್ರದಲ್ಲಿ ನಟಿಸಿ ಗೆದ್ದಿದ್ದರು. 80 ಕಿಲೋಮೀಟರ್ ಅಂತರ, 4 ಗಂಟೆ, 10 ವರ್ಷಗಳ ನಿರೀಕ್ಷೆ, ಸಾವಿಗೆ ಹತ್ತಿರವಾಗಿ, ಆಸೆಗೆ ದೂರವಾಗಿ ನಡೆಯುವ ದಿಲ್ಲಿ ಹೋರಾಟ ಪ್ರೇಕ್ಷಕರ ಮನಗೆದ್ದಿತ್ತು. ಒಂದು ರಾತ್ರಿ ನಡೆಯುವ ಕಥೆ ಪ್ರೇಕ್ಷಕರನ್ನು ಸೀಟಿನ ತುದಿ ತಂದು ಕೂರಿಸಿತ್ತು.

Kaithi Hindi Remake: Ajay Devgn Starrer Bholaa Trailer Released

'ಖೈದಿ' ಕಥೆಯನ್ನು ಸಾಕಷ್ಟು ಬದಲಾವಣೆ ಮಾಡಿ ಅಜಯ್ ದೇವಗನ್ ಬಾಲಿವುಡ್ ಪ್ರೇಕ್ಷಕರ ಮುಂದಿಡಲು ಮುಂದಾಗಿದ್ದಾರೆ. ಹಿಂದಿ ನೇಟಿವಿಟಿಗೆ ತಕ್ಕಂತೆ ಐಟಂ ಸಾಂಗ್, ಹೀರೊಯಿನ್, ಫ್ಲಾಶ್‌ಬ್ಯಾಕ್ ಎಲ್ಲಾ ಸೇರಿಸಿ ಕಥೆ ಕಟ್ಟಿಕೊಟ್ಟಿದ್ದಾರೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಬಾಲಿವುಡ್ ಪ್ರೇಕ್ಷಕರು ಟ್ರೈಲರ್ ನೋಡಿ ಖುಷಿಯಾಗಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗೋದು ಗ್ಯಾರೆಂಟಿ ಎನ್ನುತ್ತಿದ್ಧಾರೆ. ಆದರೆ ತಮಿಳು ಪ್ರೇಕ್ಷಕರು ಅಯ್ಯಯ್ಯೋ ಏನಿದು ಖೈದಿ ಕಥೆಯನ್ನು ಈ ರೀತಿ ಹಾಳು ಮಾಡಿದ್ಧಾರೆ ಎಂದು ಕಾಮೆಂಟ್ ಮಾಡ್ತಿದ್ದಾರೆ.

ತಮಿಳಿನಲ್ಲಿ ಪೊಲೀಸ್ ಅಧಿಕಾರಿ ಬಿಜೋಯ್ ಆಗಿ ನರೇನ್ ನಟಿಸಿದ್ದರು. ಆದರೆ ಹಿಂದಿಯಲ್ಲಿ ಈ ಪಾತ್ರಕ್ಕೆ ಟಬು ಬಣ್ಣ ಹಚ್ಚಿದ್ದಾರೆ. ಐಪಿಎಸ್ ಆಫೀಸರ್ ಡೈನಾ ಜೋಸೆಫ್ ಆಗಿ ಟಬು ಮಿಂಚಿದ್ದಾರೆ. ಬಹುತೇಕ ಸಿನಿಮಾ ಇವರಿಬ್ಬರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಮಿಳಿನಲ್ಲಿ ದಿಲ್ಲಿ ಪತ್ನಿಯ ಬಗ್ಗೆ ಹೆಚ್ಚು ಕಥೆ ಇರಲಿಲ್ಲ. ಆದರೆ ರೀಮೆಕ್ ವರ್ಷನ್‌ನಲ್ಲಿ ಅಮಲಾ ಪೌಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರದಲ್ಲಿ ಯಾವುದೇ ಹಾಡು ಇರಲಿಲ್ಲ. ಆದರೆ 'ಭೋಳಾ' ಚಿತ್ರದಲ್ಲಿ ಐಟಂ ಸಾಂಗೊಂದಿದೆ.

'ಭೋಳಾ' ಚಿತ್ರದಲ್ಲಿ ನಾಯಕನ ಫ್ಲಾಶ್‌ಬ್ಯಾಕ್ ಕಥೆಯನ್ನು ಕೂಡ ಹೇಳಿರೋದು ಟ್ರೈಲರ್ ನೋಡಿದರೆ ಅರ್ಥವಾಗ್ತಿದೆ. ಆದರೆ ಬಹಳ ಅದ್ಧೂರಿಯಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್ ನೋಡುಗರಿಗೆ ಸಖತ್ ಮಜಾ ಕೊಡ್ತಿದೆ. ಮೇಕಿಂಗ್ ಕೂಡ ಅದ್ಧೂರಿಯಾಗಿದ್ದು ರವಿ ಬಸ್ರೂರು ಬಿಜಿಎಂ ಕಿಕ್ ಕೊಡ್ತಿದೆ. 'ಖೈದಿ' ಸಿನಿಮಾ ನೋಡದವರಿಗೆ 'ಭೋಳಾ' ಇಷ್ಟವಾಗಬಹುದು. ಆದರೆ ತಮಿಳು ಸಿನಿಮಾ ಇಷ್ಟಪಟ್ಟವರಿಗೆ ರೀಮೆಕ್ ಇಷ್ಟ ಆಗೋದು ಅನುಮಾನ ಎನ್ನಲಾಗ್ತಿದೆ.

Kaithi Hindi Remake: Ajay Devgn Starrer Bholaa Trailer Released

10 ವರ್ಷ ಜೈಲು ಶಿಕ್ಷೆ ನಂತರ ತನ್ನ ಮಗಳನ್ನು ನೋಡಲು ಹೊರಟ ದಿಲ್ಲಿಗೆ ಅನಿವಾರ್ಯವಾಗಿ ಪೊಲೀಸ್ ಅಧಿಕಾರಿ ಬಿಜಯ್‌ಗೆ ಸಹಾಯ ಮಾಡಬೇಕಾಗಿ ಬರುತ್ತದೆ. ಬಿಜಯ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಕೊಲ್ಲಲು ದುಷ್ಟರ ಗುಂಪು ಹವಣಿಸುತ್ತಿರುತ್ತದೆ. ಅಷ್ಟೇ ಅಲ್ಲ 5 ಜನ ಪೊಲೀಸರ ಜೊತೆ ಸಮಸ್ಯೆಗೆ ಸಿಲುಕಿದ ನಾಲ್ವರು ಯುವಕರು, ಒಬ್ಬ ಯುವತಿಯನ್ನು ಕಾಪಾಡುವ ಹೊಣೆ ದಿಲ್ಲಿ ಹೆಗಲೇರುತ್ತೆ. ಅಷ್ಟಕ್ಕೂ ಆ ದುಷ್ಟರು ಬಿಜಯ್ ಹಾಗೂ ಪೊಲೀಸ್ ಠಾಣೆ ಮೇಲೆ ದಾಳಿ ಯಾಕೆ ಮಾಡ್ತಾರೆ? ಅವರನ್ನು ದಿಲ್ಲಿ ಕಾಪಾಡ್ತಾನಾ? ಮಗಳನ್ನು ಭೇಟಿ ಆಗ್ತಾನಾ ? ಅನ್ನೋದು ಸಿನಿಮಾ ಕಥೆ.

'ಖೈದಿ' ಕಥೆಯನ್ನು ಅಜಯ್ ದೇವಗನ್ ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಮೂಲ ಸಿನಿಮಾವನ್ನು ಮೀರಿಸಿ ರೀಮೆಕ್ ಮಾಡಿ ಗೆಲ್ಲೋದು ಯಾವಾಗಲೂ ಸವಾಲಿನ ಕೆಲಸ. ಅಜಯ್ ದೇವಗನ್ ಹೀರೊ ಆಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಆ ಜವಾಬ್ದಾರಿಯನ್ನು ಹೇಗೆ ನಿಭಾಯಿಸಿದ್ದಾರೆ ಅನ್ನೋದನ್ನು ಕಾದು ನೋಡಬೇಕು. ಇನ್ನು ಟ್ರೈಲರ್ ನೋಡಿ ಸಿನಿಮಾ ಚೆನ್ನಾಗಿದ್ಯೋ ಚೆನ್ನಾಗಿಲ್ವೋ ಹೇಳೋಕ್ಕಾಗಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅಜಯ್ ದೇವಗನ್ ಮಾತ್ರ 'ಪಠಾಣ್' ರೀತಿಯಲ್ಲೇ ಈ ಸಿನಿಮಾ ಕೂಡ ಕಲೆಕ್ಷನ್ ಮಾಡುತ್ತೆ ಎಂದಿದ್ದಾರೆ.

More from Filmibeat

English summary
Kaithi Hindi Remake: Ajay Devgn Starrer Bholaa Trailer Released. It is scheduled to be released theatrically on 30 March 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X