For Quick Alerts
  ALLOW NOTIFICATIONS  
  For Daily Alerts

  ಹನಿಮೂನ್‌ಗೆ ಹೊರಟ ನವ ದಂಪತಿ ಕಾಜಲ್-ಗೌತಮ್

  By ಫಿಲ್ಮೀಡೆಸ್ಕ್
  |

  ನಟಿ ಕಾಜಲ್ ಅಗರ್ವಾಲ್ ಕೆಲವು ದಿನಗಳ ಹಿಂದಷ್ಟೆ ಮದುವೆಯಾಗಿದ್ದಾರೆ. ಮುಂಬೈನ ಯುವ ಉದ್ಯಮಿ ಗೌತಮಿ ಕಿಚ್ಚಿಲು ಜೊತೆ ಹಸೆಮಣೆ ಏರಿದ್ದಾರೆ ಮಗಧೀರನ ಸುಂದರಿ.

  ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚಲು ಅವರು ಅಕ್ಟೋಬರ್ 30 ರಂದು ಕುಟುಂಬ ಸದಸ್ಯರು, ಅತ್ಯಾಪ್ತ ಗೆಳೆಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

  ಕೊರೊನಾ ಭಯದ ನಡುವೆಯೇ ಮದುವೆಯಾದ ಕಾಜಲ್-ಗೌತಮ್, ಈಗ ಕೊರೊನಾ ಭಯದ ನಡುವೆಯೂ ಹನಿಮೂನ್‌ಗೆ ಹೊರಟು ನಿಂತಿದ್ದಾರೆ. ಮದುವೆ ಮುಗಿದ ಕೂಡಲೇ ಕಾಜಲ್ ಅಗರ್ವಾಲ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿತ್ತು ಆದರೆ ಅದು ಸುಳ್ಳಾಗಿದೆ.

  ಚಿತ್ರ ಹಂಚಿಕೊಂಡಿರುವ ಕಾಜಲ್

  ಚಿತ್ರ ಹಂಚಿಕೊಂಡಿರುವ ಕಾಜಲ್

  ಇಂದು (ನವೆಂಬರ್ 07) ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಚಿತ್ರ ಹಂಚಿಕೊಂಡಿರುವ ನಟಿ ಕಾಜಲ್ ಅಗರ್ವಾಲ್, 'ಬ್ಯಾಗ್‌ ಪ್ಯಾಕ್ ಮಾಡಿ ಮುಗಿಸಿ ಹೊರಡಲು ತಯಾರಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಇಬ್ಬರ ಟಿಕೆಟ್ ಉಳ್ಳ ಬ್ಯಾಗ್‌ನ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

  ಮಾಹಿತಿ ಗುಟ್ಟಾಗಿಟ್ಟ ಕಾಜಲ್

  ಮಾಹಿತಿ ಗುಟ್ಟಾಗಿಟ್ಟ ಕಾಜಲ್

  ಹನಿಮೂನ್‌ಗಾಗಿ ಯಾವ ದೇಶಕ್ಕೆ ಕಾಜಲ್ ಹಾಗೂ ಗೌತಮ್ ಹೋಗುತ್ತಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿಲ್ಲ ಈ ಜೋಡಿ. ಆದರೆ ಎಲ್ಲೆಡೆ ಕೊರೊನಾ ಇರುವಾಗ, ಕೊರೊನಾ ಇಲ್ಲದ ನ್ಯೂಜಿಲೆಂಡ್ ಅಥವಾ ಬೇರಾವುದೇ ದೇಶಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಒಳಾಂಗಣ ವಿನ್ಯಾಸದ ಸಂಸ್ಥೆ ಹೊಂದಿರುವ ಗೌತಮ್

  ಒಳಾಂಗಣ ವಿನ್ಯಾಸದ ಸಂಸ್ಥೆ ಹೊಂದಿರುವ ಗೌತಮ್

  ಕಾಜಲ್ ಪತಿ ಗೌತಮ್ ಕಿಚ್ಲು ಅವರು ಮುಂಬೈನಲ್ಲಿ ಉದ್ಯಮಿಯಾಗಿದ್ದಾರೆ. ಡಿಸೆರನ್ ಲಿವಿಂಗ್ ಹೆಸರಿನ ಒಳಾಂಗಣ ವಿನ್ಯಾಸದ ದೊಡ್ಡ ಸಂಸ್ಥೆಯೊಂದನ್ನು ಅವರು ಹೊಂದಿದ್ದಾರೆ. ಒಳಾಂಗಣ ವಿನ್ಯಾಸದ ಭಾರತದ ಅತ್ಯುತ್ತಮ ಸಂಸ್ಥೆಗಳಲ್ಲಿ ಗೌತಮ್ ಅವರ ಸಂಸ್ಥೆಯೂ ಒಂದು.

  ಕಮಲ್ ಹಾಸನ್, ಚಿರಂಜೀವಿ ಸಿನಿಮಾದ ಚಿತ್ರೀಕರಣ ಬಾಕಿ

  ಕಮಲ್ ಹಾಸನ್, ಚಿರಂಜೀವಿ ಸಿನಿಮಾದ ಚಿತ್ರೀಕರಣ ಬಾಕಿ

  ನಟಿ ಕಾಜಲ್ ಅಗರ್ವಾಲ್ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ 'ಇಂಡಿಯನ್ 2' ಹಾಗೂ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಕಾಜಲ್. ಕನ್ನಡದ ತಥಾಸ್ತು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಕಾಜಲ್.

  English summary
  Actress Kajal Agarwal and Businessman Gautam Kichlu going to honeymoon. They married recently on October 30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X