'ಪತಿ ಹೇಳಿದ್ರೆ ನಟನೆ ಬಿಡ್ತೀನಿ' ಎಂದ ಕಾಜಲ್ ಹೊಸ ಚಿತ್ರಕ್ಕೆ ಸಹಿ

ಉದ್ಯಮಿ ಜೊತೆ ವೈವಾಹಿಕ ಜೀವನ ಆರಂಭಿಸಿದ ನಂತರ ಕಾಜಲ್ ಅಗರ್‌ವಾಲ್ ಸಿನಿ ಜೀವನ ಮುಂದುವರಿಯುವುದು ಅನುಮಾನ ಎಂಬ ಮಾತುಗಳಿದ್ದವು. ಅದೆಲ್ಲದಕ್ಕೂ ತೆರೆ ಎಳೆದ ಕಾಜಲ್ ಶೂಟಿಂಗ್‌ನಲ್ಲಿ ಸಕ್ರಿಯರಾಗಿದ್ದರು.

ಈಗಾಗಲೇ ಒಪ್ಪಿಕೊಂಡಿರುವ ನಾಲ್ಕೈದ ಚಿತ್ರಗಳು ಕಾಜಲ್ ಬಳಿ ಇದೆ. ಈ ಸಿನಿಮಾಗಳ ಚಿತ್ರೀಕರಣದಲ್ಲೂ ತೊಡಗಿಕೊಂಡಿದ್ದರು. ಈಗ ಕೋವಿಡ್ ಕಾರಣದಿಂದ ಶೂಟಿಂಗ್‌ಗೆ ಬ್ರೇಕ್ ಹಾಕಿ ಕುಟುಂಬ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ನಡುವೆ ಕಾಜಲ್ ಅಗರ್‌ವಾಲ್ ಹಿಂದಿಯಲ್ಲಿ ಸಿನಿಮಾ ಆರಂಭಿಸಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರಕ್ಕೆ ಉಮಾ ಎಂದು ಹೆಸರಿಡಲಾಗಿದೆ. ಮುಂದೆ ಓದಿ...

ಉಮಾ ಚಿತ್ರದಲ್ಲಿ ಕಾಜಲ್ ನಟನೆ

ಉಮಾ ಚಿತ್ರದಲ್ಲಿ ಕಾಜಲ್ ನಟನೆ

ಜೂನ್ 4 ರಂದು ಶುಕ್ರವಾರ ನಟಿ ಕಾಜಲ್ ಅಗರ್‌ವಾಲ್ ತಮ್ಮ ಹೊಸ ಹಿಂದಿ ಸಿನಿಮಾ ಅನೌನ್ಸ್ ಮಾಡಿದರು. ಈ ಚಿತ್ರಕ್ಕೆ ಉಮಾ ಎಂದು ನಾಮಕರಣ ಮಾಡಲಾಗಿದ್ದು, 'ಉಮಾ' ಪಾತ್ರದಲ್ಲಿ ನಟಿ ಅಭಿನಯಿಸುತ್ತಿದ್ದಾರೆ. ತಥಾಗತ ಸಿಂಘಾ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಮಿರಾಜ್ ಗ್ರೂಪ್‌ನ ಮಂತ್ರರಾಜ್ ಪಾಲಿವಾಲ್ ಮತ್ತು ಅವಿರೇಶ್ ಘೋಷ್ ನಿರ್ಮಿಸುತ್ತಿದ್ದಾರೆ.

ಮುಂದಿನ ವರ್ಷದಲ್ಲಿ ಆರಂಭ

ಮುಂದಿನ ವರ್ಷದಲ್ಲಿ ಆರಂಭ

ಉಮಾ ಸಿನಿಮಾ ಮಹಿಳಾ ಪ್ರಧಾನ ಕಥೆ ಹೊಂದಿದೆ. ಈ ಚಿತ್ರವೂ ವರ್ಷದ ನಂತರ ಅಂದ್ರೆ 2022ರ ಅರಂಭದಲ್ಲಿ ಅಧಿಕೃತವಾಗಿ ಶುರುವಾಗಬಹುದು. ಸದ್ಯಕ್ಕೆ ಉಮಾ ಪಾತ್ರವನ್ನು ಕಾಜಲ್ ನಿರ್ವಹಿಸುತ್ತಿದ್ದು, ಇತರೆ ಪಾತ್ರವರ್ಗದಲ್ಲಿ ಯಾರೆಲ್ಲ ನಟಿಸಬಹುದು ಎಂಬುದಕ್ಕೆ ಉತ್ತರ ಇಲ್ಲ.

ನಟನೆ ಬಿಡ್ತೀನಿ ಎಂದ ಕಾಜಲ್

ನಟನೆ ಬಿಡ್ತೀನಿ ಎಂದ ಕಾಜಲ್

ವೈವಾಹಿಕ ಬದುಕಿನ ಆರಂಭಿಸಿರುವ ಕಾಜಲ್ ಅಗರ್‌ವಾಲ್ ನಟನೆಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ ಎಂಬ ಸುದ್ದಿಗಳು ವರದಿಯಾಗಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ''ನನಗೆ ಪತಿ ಹಾಗೂ ಕುಟುಂಬ ಬೆಂಬಲವಾಗಿದೆ. ಸಿನಿ ಜರ್ನಿ ಮುಂದುವರಿಸಲು ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ನಟನೆ ಬೇಡ ಎಂದು ನನ್ನ ಪತಿ ಹೇಳಿದ್ರೆ ನಾನು ಖಂಡಿತಾ ಮುಂದುವರಿಸಲ್ಲ'' ಎಂದು ಹೇಳಿದ್ದಾರೆ.

Recommended Video

ಇಂಥ ಪರಿಸ್ಥಿತಿ ಯಾವ ಕಲಾವಿದರಿಗೂ ಬರಬಾರದು | Senior Actress B Jayamma | Filmibeat Kannada
ಕಾಜಲ್ ಸಿನಿಮಾಗಳು

ಕಾಜಲ್ ಸಿನಿಮಾಗಳು

ದುಲ್ಕರ್ ಸಲ್ಮಾನ್ ಜೊತೆ ಹೇ ಸಿನಾಮಿಕ, ಚಿರಂಜೀವಿ ಜೊತೆ ಆಚಾರ್ಯ, ಕಮಲ್ ಹಾಸನ್ ಜೊತೆ ಇಂಡಿಯನ್ 2, ಪ್ಯಾರೀಸ್ ಪ್ಯಾರೀಸ್, ಇನ್ನು ಹೆಸರಿಡದ ಎರಡು ತಮಿಳು ಚಿತ್ರಗಳು ಸೇರಿದಂತೆ ಹಲವು ಪ್ರಾಜೆಕ್ಟ್‌ಗಳ ಕಾಜಲ್ ಬಳಿ ಇದೆ.

More from Filmibeat

English summary
Kajal Aggarwal announces her next hindi movie titled UMA with popular ad-filmmaker Tathagata Singha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X