ಕಾಜೋಲ್‌ಗೆ 'ಸೆಲ್ಫಿ' ಶಾಕ್, ಕೃಷ್ಣ ಸುಂದರಿಯನ್ನು ಸುತ್ತುವರೆದ ಅಭಿಮಾನಿಗಳು ; ನಡುಗಿದ ನಟಿ
ಸೆಲೆಬ್ರೆಟಿಗಳೂ ಅಭಿಮಾನಿಗಳ ''ಸೆಲ್ಫಿ'' ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ. ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ.
ಆದರೂ ಕೂಡ ಈ ಸೆಲ್ಫಿ ಸಮಸ್ಯೆಯಿಂದ ಮುಕ್ತಿ ಮಾತ್ರ ಸಿಕ್ತಿಲ್ಲ. ಬೆಲ್ಲಕ್ಕೆ ಇರುವೆ ಮುತ್ತಿಕೊಂಡಂತೆ ಜನ ಎಲ್ಲಾ ಭದ್ರ ಕೋಟೆಯನ್ನು ದಾಟಿ ಈ ಸೆಲೆಬ್ರಿಟಿಗಳನ್ನು ಮುತ್ತಿಕೊಳ್ಳುತ್ತಾರೆ. ಅದರಲ್ಲಿಯೂ ನಾಯಕಿಯರ ಪಾಡು ಹೇಳಲು ಅಸಾಧ್ಯ. ಅಭಿಮಾನದ ನೆಪದಲ್ಲಿ ಕೊಡಬಾರದ ಟಾರ್ಚರ್‌ನ ಕೊಡಲು ಕೆಲವರು ಕೊಡುತ್ತಾರೆ. ಅಂಧಾಭಿಮಾನದ ಪ್ರದರ್ಶನ ಮಾಡ್ತಾರೆ. ತಮ್ಮ ನೆಚ್ಚಿನ ನಟಿಗೆ ನರಕ ದರ್ಶನವನ್ನೂ ಕೂಡ ಮಾಡಿಸುತ್ತಾರೆ. ಇದಕ್ಕೆ ವೈರಲ್ ಆದ ಕಾಜೋಲ್ ವಿಡಿಯೋ ಮತ್ತೊಂದು ಸಾಕ್ಷಿ.

ಹೌದು, ಇಂದು (ಮಾರ್ಚ್ 16) ಕಾಜೋಲ್ ಮುಂಬೈನಲ್ಲಿ ಪ್ರತಿಷ್ಠಿತ ಫ್ಯಾಶನ್ ಈವೆಂಟ್‌ಗೆ ತೆರಳಿದ್ದರು. ಈ ವಿಷಯ ಮೊದಲೇ ಹೊರ ಬಿದ್ದ ಕಾರಣ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಭಿಮಾನಿಗಳು ಬಿಡಾರ ಹೂಡಿದ್ದರು.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಬಾಲಿವುಡ್‌ನಲ್ಲಿ ''ಪಾಪರಾಜಿ'' ಕಲ್ಚರ್ ಇದೆ. ಇವರಿಗೆ ಫೋಟೊ ಸಿಕ್ಕರೆ ಸಾಕು. ಎದುರುಗಡೆ ಇರುವ ವ್ಯಕ್ತಿ ಎಷ್ಟೇ ದೊಡ್ಡವರಾದರು ಕೂಡ ಇವರು ಹಿಂದೆ ಸರಿಯುವುದಿಲ್ಲ. ಬದಲಿಗೆ ಕ್ಯಾಮರಾ ಹಿಡಿದು ಮೈಮೇಳೆ ಬೀಳುತ್ತಾರೆ.
ಕಾಜೋಲ್ ವಿಚಾರದಲ್ಲಿ ಕೂಡ ಆಗಿದ್ದು ಇದೆ. ಹಸಿರು ಸೀರೆ, ಗೋಲ್ಡನ್ ಬ್ಲೌಸ್ ಧರಿಸಿ ಕಾಜೋಲ್ ಕಾರ್ಯಕ್ರಮಕ್ಕೆ ಬಂದಿದ್ದೇ ತಡ, ಒಂದು ಕಡೆ ಸೆಲ್ಫಿಗಾಗಿ ಅಭಿಮಾನಿಗಳು ಸುತ್ತವರೆದರೆ ಮತ್ತೊಂದು ಕಡೆ ಪಾಪರಾಜಿಗಳು ಸುತ್ತುವರೆದರು. ಅಭಿಮಾನದ ಸೋಗಿನಲ್ಲಿ ಬಂದ ಕೆಲವರು ಕಾಜೋಲ್ ಅವರನ್ನು ಮುಟ್ಟುವ ಪ್ರಯತ್ನವನ್ನು ಕೂಡ ಮಾಡಿದರು. ಇದೆಲ್ಲದರಿಂದ ಕಾಜೋಲ್ ಹೈರಾಣಾಗಿದ್ದು ಸುಳ್ಳಲ್ಲ. ಅವರ ಮುಖದಲ್ಲಿ ಆತಂಕ ಸ್ಪಷ್ಟವಾಗಿ ಕಾಣುತ್ತಿತ್ತು.
ಹೀಗಾಗಿಯೇ ಅರೆಕ್ಷಣ ಕೂಡ ಅಲ್ಲಿ ನಿಲ್ಲುವ ಧೈರ್ಯ ಮಾಡದ ಕಾಜೋಲ್, ಮನದಿಂದ ಯಾರ ಜೊತೆ ಸೆಲ್ಫಿ ಕ್ಲಿಕಿಸಿಕೊಳ್ಳಲಿಲ್ಲ. ಪಾಪರಾಜಿಗಳು ನಿಲ್ಲುವಂತೆ ಕೇಳಿಕೊಂಡರು ಕೂಡ ಕ್ಯಾಮರಾಗೆ ಫೋಸ್ ನೀಡಲಿಲ್ಲ. ತಮ್ಮ ಕಾರ ಬಳಿ ಹೋದ ನಂತರವೇ ಕಾಜೋಲ್ ನಿರಾಳರಾದರು.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರ ಆಕ್ರೋಶವನ್ನು ಕೂಡ ಹೆಚ್ಚಿಸಿದೆ. ಹಲವರು ಪಾಪರಾಜಿಗಳ ವಿರುದ್ಧ ಕೆಂಡ ಕಾರಿದರೆ, ಇನ್ನೂ ಕೆಲವರು ಅಲ್ಲಿ ಕಾಜೋಲ್ ಅವರನ್ನು ಮುತ್ತಿಕೊಂಡ ಅಭಿಮಾನಿಗಳ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ಧಾರೆ. ಮತ್ತೂ ಕೆಲವರು ಕಾರ್ಯಕ್ರಮದ ಆಯೋಜಕರ ವಿರುದ್ಧ ಕಿಡಿ ಕಾರುತ್ತಿದ್ಧಾರೆ.ಭದ್ರತಾ ವೈಫಲ್ಯದ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಕಾಜೋಲ್ ಅವರಿಗಾದಂತೆಯೇ ನಿಧಿ ಅಗರ್ವಾಲ್ ಅವರಿಗೆ ಕೂಡ ಈ ಅಂಧಾಭಿಮಾನದಿಂದ ನರಕ ದರ್ಶನವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ನಿಧಿ ಅಗರ್ವಾಲ್ ಅವರು ಪರದಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇಷ್ಟೇ ಅಲ್ಲ ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಸಮಂತಾ ಭಾಗವಹಿಸಿದಾಗ ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಜನ ಸಮಂತಾ ಅವರನ್ನು ಮುತ್ತಿಕೊಂಡಿದ್ದರು. ಈ ಅಂಧಾಭಿಮಾನಕ್ಕೆ ಸ್ಯಾಮ್ ಕೂಡ ಹೈರಾಣಾಗಿದ್ದರು. ಈಗ ಕಾಜೋಲ್ ಸರದಿ.
ಇನ್ನುಳಿದಂತೆ ಕಾಜೋಲ್ ಕೊನೆಯದಾಗಿ ''ಮಾ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಈ ಚಿತ್ರ ತೆರೆಗೆ ಬಂದಿತ್ತು. ಸದ್ಯ ಕಾಜೋಲ್ ''ಮಹಾರಾಗ್ನಿ: ಕ್ವೀನ್ ಆಫ್ ಕ್ವೀನ್ಸ್''ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚರಣ್ ತೇಜ್ ಉಪ್ಪಲಪತಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭುದೇವ, ನಸೀರುದ್ದೀನ್ ಷಾ, ಸಂಯುಕ್ತ, ಜಿಶು ಸೇನ್‌ಗುಪ್ತಾ, ಆದಿತ್ಯ ಸೀಲ್, ಪ್ರಮೋದ್ ಪಾಠಕ್ ಹಾಗೂ ಛಾಯಾ ಕದಂ ಪ್ರಮುಖ ಪಾತ್ರಗಳಲ್ಲಿದ್ಧಾರೆ.


Click it and Unblock the Notifications











