For Quick Alerts
  ALLOW NOTIFICATIONS  
  For Daily Alerts

  ಅಜಯ್ ಜತೆ ನಟಿಸಲು ಕಾಜೋಲ್ ಒಪ್ಪಿಲ್ಲ ಯಾಕೆ?

  |

  ಕಾಜೋಲ್ ಹೆಸರು ಕೇಳದವರಿಲ್ಲ. ಶಾರುಖ್ ಖಾನ್ ಕಾಜೋಲ್ ಜೋಡಿಯ 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ' ಚಿತ್ರ ಇನ್ನೂ ಮುಂಬೈನ ಶಿವಾಜಿ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವುದು ಸಾರ್ವಕಾಲಿಕ ದಾಖಲೆ. ಕಾಜೋಲ್ ಈಗ ನಟ ಅಜಯ್ ದೇವಗನ್ ಪತ್ನಿಯಾಗಿದ್ದರೂ ಅವರಿಗೆ ಈಗಲೂ ಹೇರಳ ಅವಕಾಶಗಳಿವೆ. ಆಗಾಗ ಬಣ್ಣಹಚ್ಚುತ್ತಿರುವ ಕಾಜಲ್ ಈಗ ಸಾಕಷ್ಟು ಚೂಸಿಯಾಗಿದ್ದಾರೆ.

  ಕಾಜೋಲ್ ಇತ್ತೀಚಿಗೆ ಬಂದಿರುವ ಆಫರ್ ಒಂದನ್ನು ತಿರಸ್ಕರಿಸಿದ್ದಾರೆ. ಪತಿ ಅಜಯ್ ದೇವಗನ್ ಜೋಡಿಯಾಗಿ 'ಸನ್ ಆಫ್ ಸರ್ದಾರ್' ಚಿತ್ರದಲ್ಲಿ ನಟಿಸುವಂತೆ ಕಾಜೋಲ್ ಅವರನ್ನು ಚಿತ್ರದ ನಿರ್ದೇಶಕರಾದ ಅಶ್ವಿನಿ ಧೀರ್ ಆಹ್ವಾನ ನೀಡಿದ್ದರು. ಆದರೆ ಅದನ್ನು ಕಾಜೋಲ್ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪತಿ ಅಜಯ್ ದೇವಗನ್ ಎದುರು ನಟಿಸಲು ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಅವರ ಹೆಸರನ್ನು ಸೂಚಿಸಿದ್ದಾರೆ.

  ಮಾಧ್ಯಮಕ್ಕೆ ಬಂದ ಮಾಹಿತಿ ಪ್ರಕಾರ "ಚಿತ್ರದ ನಿರ್ದೇಶಕರಾದ ಅಶ್ವಿನಿ ಕಥೆ ಹೆಣೆಯುವಾಗಲೇ ಕಾಜೋಲ್ ಅವರನ್ನೇ ಅಜಯ್ ಜೋಡಿಯಾಗಿ ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಹೀಗಾಗಿ ಕಥೆ ರೆಡಿಯಾದ ತಕ್ಷಣ ಅವರು ಕಾಜೋಲ್ ಇರುವಲ್ಲಿಗೆ ಬಂದು ಕಥೆ ಹೇಳಿದ್ದಾಗಿದೆ. ಕಥೆಯನ್ನೇನೋ ಕಾಜೋಲ್ ಕೇಳಿದರಾರದೂ ನಟಿಸಲು ಒಪ್ಪಲೇ ಇಲ್ಲ. ಬದಲಿಗೆ ಈ ಪಾತ್ರಕ್ಕೆ ಸೋನಾಕ್ಷಿ ಸೂಟ್ ಆಗುತ್ತಾರೆ ಎಂದರಂತೆ.

  ತಮ್ಮ ಈ ನಡೆಗೆ ಕಾಜೋಲ್ "ನನಗೆ ಮನೆ ಮತ್ತು ಮಕ್ಕಳ ಜವಾಬ್ದಾರಿಗಳಿವೆ. ನಾನೀಗ ಚಿತ್ರದಲ್ಲಿ ನಟಿಸಲು ಸಾಧ್ಯವಾಗದು. ನನ್ನ ಕುಟುಂಬ, ಮಕ್ಕಳು ಮುಖ್ಯವಾಗಿರುವ ಈ ವೇಳೆಯಲ್ಲಿ ನಾನು ಸಿನಿಮಾಗೆ ಕಮಿಟ್ ಆಗಲಾರೆ" ಎಂದಿದ್ದಾರೆ. ನಂತರ ಅವರ ಸಲಹೆ ಮೇರೆಗೆ ಸೋನಾಕ್ಷಿಯನ್ನು ಆಯ್ಕೆಮಾಡಿಕೊಂಡಿದ್ದಾರೆ ನಿರ್ದೇಶಕಕಾದ ಅಶ್ವಿನಿ. ಒಟ್ಟಿನಲ್ಲಿ ಬಾಲಿವುಡ್ ಸಿನಿಪ್ರೇಕ್ಷಕರಿಗೆ ತೆರೆಯಲ್ಲಿ ಮತ್ತೊಮ್ಮೆ ಪತಿ-ಪತ್ನಿಯರನ್ನು ನೋಡುವ ಅವಕಾಶ ಮಿಸ್ ಆಗಿದೆ. ಕಾಜೋಲ್ ಪ್ರೇಕ್ಷಕರಿಗಂತೂ ಫುಲ್ ನಿರಾಸೆಯಾಗಿದೆ. (ಏಜೆನ್ಸೀಸ್)

  English summary
  Son Of Sardar director Ashwini Dhir was keen to sign Kajol opposite Ajay Devgn in his movie. But Kajol turned down the offer.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X