'ಮರಾಠಿ ಮುಲ್ಗಿ'ಯಾಗಿ ಕಾಜೋಲ್: 'ತಾನಾಜಿ' ಚಿತ್ರದ ಫಸ್ಟ್ ಲುಕ್ ಔಟ್

ಬಾಲಿವುಡ್ ನಟ ಅಜಯ್ ದೇವ್ಗನ್ ಅಭಿನಯದ 100ನೇ ಸಿನಿಮಾ 'ತಾನಾಜಿ: ದಿ ಅನ್ಸಂಗ್ ವಾರಿಯರ್' ಚಿತ್ರದ ಟ್ರೈಲರ್ ನಾಳೆ (ನವೆಂಬರ್ 19) ಗ್ರ್ಯಾಂಡ್ ಆಗಿ ಬಿಡುಗಡೆ ಆಗಲಿದೆ. ಹೀಗಿರುವಾಗಲೇ, ಇಂದು ಮರಾಠಿ ಮುಲ್ಗಿಯಾಗಿ ಚಿತ್ರದಲ್ಲಿ ನಟಿಸಿರುವ ಕಾಜೋಲ್ ರವರ ಫಸ್ಟ್ ಲುಕ್ ನ ರಿವೀಲ್ ಮಾಡಲಾಗಿದೆ.

'ತಾನಾಜಿ: ದಿ ಅನ್ಸಂಗ್ ವಾರಿಯರ್' ಚಿತ್ರದಲ್ಲಿ ತಾನಾಜಿ ಮಾಲುಸರೆ ಪಾತ್ರಕ್ಕೆ ಅಜಯ್ ದೇವ್ಗನ್ ಬಣ್ಣ ಹಚ್ಚಿದ್ದರೆ, ತಾನಾಜಿ ಸಾಹಸಕ್ಕೆ ಸಾಥ್ ಕೊಟ್ಟ ಪತ್ನಿ ಸಾವಿತ್ರಿಬಾಯಿ ಮಾಲುಸರೆ ಆಗಿ ಕಾಜೋಲ್ ಅಭಿನಯಿಸಿದ್ದಾರೆ. ಮಹಾರಾಷ್ಟ್ರದ ಸಾಂಸ್ಕೃತಿಕ ಉಡುಗೆಯಲ್ಲಿ ಕಾಜೋಲ್ ಮಿಂಚಿರುವ ಪೋಸ್ಟರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಐತಿಹಾಸಿಕ ಚಿತ್ರವಾಗಿರುವ 'ತಾನಾಜಿ: ದಿ ಅನ್ಸಂಗ್ ವಾರಿಯರ್'ನಲ್ಲಿ ಸೈಫ್ ಅಲಿ ಖಾನ್, ಶರದ್ ಖೇಲ್ಕರ್, ಲೂಕ್ ಕೆನ್ನಿ, ಪದ್ಮಾವತಿ ರಾವ್, ಜಗಪತಿ ಬಾಬು, ಪಂಕಜ್ ತ್ರಿಪಾಠಿ, ನೇಹಾ ಶರ್ಮಾ ಮುಂತಾದವರ ದೊಡ್ಡ ತಾರಾಬಳಗವೇ ಇದೆ.

Kajols look in Tanhaji The Unsung warrior poster is out

ಅಂದ್ಹಾಗೆ, 'ತಾನಾಜಿ: ದಿ ಅನ್ಸಂಗ್ ವಾರಿಯರ್' ಚಿತ್ರವನ್ನ ಅಜಯ್ ದೇವ್ಗನ್, ಭೂಷಣ್ ಕುಮಾರ್, ಕೃಷನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಓಂ ರಾವುತ್ ಆಕ್ಷನ್ ಕಟ್ ಹೇಳಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ 'ತಾನಾಜಿ: ದಿ ಅನ್ಸಂಗ್ ವಾರಿಯರ್' ಚಿತ್ರ ಸೆಟ್ಟೇರಿತ್ತು. ಇದೀಗ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Bollywood Actress Kajol's look in Tanhaji: The Unsung warrior movie is out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X