ಮೊದಲು ಇಲ್ಲಿಂದ ಹೊರಗಡೆ ಹೋಗಿ, ಚಿಟಿಕೆ ಹೊಡೆದು, ಬೆರಳು ತೋರಿಸಿ, ಗುಡುಗಿದ ಕಾಜೋಲ್...!
ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವೃತೆ ಈಗ ಅವರ ಅನುಭವಕ್ಕೆ ಬರುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಕಾಜೋಲ್ ಕೋಪ ಮಾಡಿಕೊಂಡಿದ್ದಾರೆ. ಬೆರಳು ತೋರಿಸಿ ಏಯ್ ನಡೆಯಿರಿ ಹೊರಗೆ ಎಂದು ಪಾಪರಾಜಿಗಳ ಮೇಲೆ ಕಿಡಿ ಕಾರಿದ್ದಾರೆ.
ಹೌದು, ಅಸಲಿಗೆ ಕಾಜೋಲ್ ಬೆಂಗಾಲಿ ಚೆಲುವೆ. ಹೀಗಾಗಿ ಪ್ರತಿ ವರ್ಷ ಕಾಜೋಲ್ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ಮನೆ ಮಂದಿಯ ಜೊತೆ ದುರ್ಗಾ ಪೂಜೆಯನ್ನು ಮಾಡುತ್ತಾರೆ. ಇನ್ನೂ.. ರಾಣಿ ಮುಖರ್ಜಿ, ಆಲಿಯಾ ಭಟ್, ಜಯಾ ಬಚ್ಚನ್, ಸೇರಿ ಹಿಂದಿ ಚಿತ್ರರಂಗದ ಅನೇಕ ತಾರೆಯರು ಕಾಜೋಲ್ ಅವರ ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಮನೆಯ ಬೆಡ್ ರೂಮ್ ವೊಂದನ್ನ ಹೊರತು ಪಡಿಸಿದರೆ, ಬಾಲಿವುಡ್ ಸ್ಟಾರ್‌ಗಳ ದಿನ ನಿತ್ಯದ ಚಲನ-ವಲನ, ಹಾವ-ಭಾವಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಪಾಪರಾಜಿಗಳು ಕೂಡ ಬಂದು ದೇವಿಯ ದರ್ಶನವನ್ನು ಪಡೆಯುತ್ತಾರೆ. ಕಾಜೋಲ್ ಮತ್ತು ಸಂಗಡಿಗರ ಭಾವ ಚಿತ್ರಗಳನ್ನು ತೆಗೆಯುತ್ತಾರೆ.

ಈ ಬಾರಿ ಕೂಡ ಈ ಕೆಲಸದ ಪ್ರಯುಕ್ತ ಪಾಪರಾಜಿಗಳು ತೆರಳಿದ್ದರು. ಆದರೆ ಈ ಸಲ ಹೀಗೆ ಹೋದ ಪಾಪರಾಜಿಗಳು ಕಾಜೋಲ್ ಅವರ ಕೋಪಕ್ಕೆ ಗುರಿಯಾದ್ದಾರೆ. ಯಾಕೆಂದರೆ.. ದುರ್ಗಾದೇವಿ ವಿಗ್ರಹದ ಮುಂದೆ ನಿಂತ ಕಾಜೋಲ್ ಮತ್ತು ಕುಟುಂಬದ ಫೋಟೋ ತೆಗೆಯುವ ಆತುರದಲ್ಲಿ ಪಾಪರಾಜಿಗಳು ಧರಿಸಿದ್ದ ಶೂ ಮತ್ತು ಚಪ್ಪಲಿಯನ್ನು ತೆಗೆಯದೇ ಹಾಗೇ ಒಳ ನುಗ್ಗಿದ್ದಾರೆ. ದೇವಿಯ ವಿಗ್ರಹದ ಸುತ್ತ ಮುತ್ತ ಶೂ ಮತ್ತು ಚಪ್ಪಲಿಯಲ್ಲಿಯೇ ಓಡಾಡಿದ್ದಾರೆ. ಇದನ್ನು ಕಂಡು ಕೆರಳಿ ಕೆಂಡವಾದ ಕಾಜೋಲ್ ಅಲ್ಲಿದ್ದ ಎಲ್ಲ ಪಾಪರಾಜಿಗಳ ವಿರುದ್ಧ ಗುಡುಗಿದ್ದಾರೆ.
ನೀವೆಲ್ಲ ಏನು ಅಂದುಕೊಂಡಿದ್ದೀರಾ, ದೇವರ ಪೀಠದ ಮೇಲೆ ಶೂ ಹಾಕಿಕೊಂಡು ಹತ್ತುತ್ತಿದ್ದೀರಾ, ದೇವರ ವಿಗ್ರಹ ಇದೆ ಅಲ್ಲಿ ಈ ಕೂಡಲೇ ಎಲ್ಲರು ಕೆಳಗಿಳಿಯಿರಿ ಎಂದಿದ್ದಾರೆ. ಬೆರಳು ತೋರಿಸಿ ಚಿಟಿಕೆ ಹೊಡೆದು ಮೊದಲು ಇಲ್ಲಿಂದ ಹೊರ ನಡೆಯಿರಿ ಎಂದು ಕೂಗಿದ್ದಾರೆ. ಆ ನಂತರ ಕೈಗೆ ಮೈಕ್ ಎತ್ತಿಕೊಂಡು ಇಲ್ಲಿ ಪೂಜೆ ನಡೆಯುತ್ತಿದೆ ಅದಕ್ಕೆ ಗೌರವ ಇರಲಿ ಯಾರೆಲ್ಲ ಶೂ ಹಾಕಿಕೊಂಡಿದ್ದೀರೋ ಅವರೆಲ್ಲ ವಿಗ್ರಹದಿಂದ ವೇದಿಕೆಯಿಂದ ದೂರ ಹೋಗಿ ಎಂದಿದ್ದಾರೆ. ಪೂಜೆ ನಡೆಯುತ್ತಿದೆ ಅದಕ್ಕೆ ಗೌರವ ಕೊಡಿ ಎಂದು ಸಿಟ್ಟಾಗಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ವ್ಯಕ್ತಿಯೊಬ್ಬರು ದುರ್ಗಾ ಪೂಜೆ ನಡೆಯುವ ಸ್ಥಳದಲ್ಲಿ ಶಿಳ್ಳೆ ಹೊಡೆದಿದ್ದಾರೆ. ಇದಕ್ಕೂ ಕೆರಳಿ ಕೆಂಡವಾದ ಕಾಜೋಲ್ ಯಾರು ಶಿಳ್ಳೆ ಹೊಡೆದಿದ್ದು ಎಂದು ಕಿರುಚಿದ್ದಾರೆ. ಎಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಗೊತ್ತಿಲ್ಲವಾ ಎಂದು ಕಿಡಿ ಕಾರಿದ್ದಾರೆ.
ಸದ್ಯಕ್ಕೆ ಕಾಜೋಲ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಜೋಲ್ ಅವರ ಈ ನಡೆಗೆ ವ್ಯಾಪಕವಾದ ಪ್ರಶಂಸೆ ಸಿಕ್ತಿದೆ. ಇನ್ನೂ ಕೆಲವರು ದುರ್ಗಾ ಪೂಜೆಯಲ್ಲಿ ಜಯಾ ಬಚ್ಚನ್ ಕೂಡ ಭಾಗಿಯಾಗಿದ್ದ ಹಿನ್ನೆಲೆ ಕಾಜೋಲ್ ಮತ್ತು ಜಯಾ ಬಚ್ಚನ್ ನಡುವೆ ಹೋಲಿಕೆ ಮಾಡುತ್ತಿದ್ದಾರೆ. ಕಿರುಚಾಟ, ಕೂಗಾಟದ ವಿಚಾರದಲ್ಲಿ ಜಯಾ ಬಚ್ಚನ್ ಮತ್ತು ಕಾಜೋಲ್ ನಡುವೆ ಹೆಚ್ಚೇನು ವ್ಯತ್ಯಾಸ ಇಲ್ಲ ಎನ್ನುತ್ತಿದ್ದಾರೆ. ಕಾಜೋಲ್ ಅವರ ಕಾಲೆಳೆಯುತ್ತಿದ್ದಾರೆ.


Click it and Unblock the Notifications











