ನನ್ನ ಮಗಳ ತಂಟೆಗೆ ಬಂದ್ರೆ, ಮೇಲೆ ಕಾರು ಹತ್ತಿಸಿಬಿಡ್ತೀನಿ; ಕಾಜೋಲ್ ಎಚ್ಚರಿಕೆ

ಬಾಲಿವುಡ್ ನಟಿ ಕಾಜೋಲ್ ನಟನೆಯ 'ಮಾ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ವಿಶಾಲ್ ಫೌರಿಯಾ ನಿರ್ದೇಶನದ ಸಿನಿಮಾ ಮುಂದಿನ ವಾರವೇ ತೆರೆಗೆ ಬರಲಿದೆ. ಇದೊಂದು ಮೈಥಲಾಜಿಕಲ್ ಹಾರರ್ ಸಿನಿಮಾ.

ಮದುವೆ ಬಳಿಕ ಕಾಜೋಲ್ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದರು. ಆದರೂ ಒಳ್ಳೆ ಅವಕಾಶ ಸಿಕ್ಕಾಗ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ವರ್ಷಕ್ಕೊಂದು ಸಿನಿಮಾ ಎನ್ನುವಂತೆ ಆಕೆಯ ಸಿನಿಮಾಗಳು ಬಿಡುಗಡೆ ಆಗುತ್ತಿದೆ. 'ಮಾ' ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಚೆಲುವೆ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ.

Kajol Slams Trolls Targeting Daughter Nyasa Ahead of Maa Movie Release

1999ರಲ್ಲಿ ನಟ ಅಜಯ್ ದೇವಗನ್ ಜೊತೆ ಕಾಜೋಲ್ ಹಸೆಮಣೆ ಏರಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ನ್ಯಾಸ ಕೂಡ ಚಿತ್ರರಂಗಕ್ಕೆ ಬರ್ತಾಳೆ ಎನ್ನುವ ಗುಸುಗುಸು ಶುರುವಾಗಿದೆ. ಮಗ ಯುಗ್ ಓದುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಸರ್ವೇ ಸಾಧಾರಣ ಎನ್ನುವಂತಾಗಿದೆ. ಸೆಲೆಬ್ರೆಟಿಗಳು ಮಾತ್ರವಲ್ಲ ಅವರ ಮಕ್ಕಳನ್ನು ಕೂಡ ಕೆಲವರು ಟ್ರೋಲ್ ಮಾಡುತ್ತಾರೆ.

ಸ್ಟಾರ್ ಕಿಡ್‌ಗಳ ಬಗ್ಗೆಯೂ ಅಭಿಮಾನಿಗಳಿಗೆ ಎಲ್ಲಿಲ್ಲದ ಆಸಕ್ತಿ. ಅವರು ಹೋದಲ್ಲಿ ಬಂದಲ್ಲಿ ನೋಡಲು ಮುಗಿಬೀಳುತ್ತಾರೆ. ಫೋಟೊ, ವೀಡಿಯೋ ಹಿಡಿಯುವುದು ಮಾಡುತ್ತಿರುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದು ಇದೆ. ಜೊತೆಗೆ ಕೆಲವರು ತಾರೆಯರ ಮಕ್ಕಳನ್ನು ನಾನಾ ಕಾರಣಕ್ಕೆ ಟ್ರೋಲ್ ಮಾಡುತ್ತಾರೆ. ನೆಪೋ ಕಿಡ್ ಎನ್ನುವ ಹಣೆಪಟ್ಟಿ ಕೂಡ ಕಟ್ಟಿಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್‌ಗಳಿಗೆ ಬಹುತೇಕ ಮೆಚ್ಚುಗೆ ಸೂಚಿಸಿದರೆ ಕೆಲವರು ಮಾತ್ರ ಟ್ರೋಲ್ ಮಾಡುವುದಕ್ಕೆ ಕಾಯುತ್ತಿರುತ್ತಾರೆ.

Kajol Slams Trolls Targeting Daughter Nyasa Ahead of Maa Movie Release

ತಮ್ಮ ಮಗಳು ನ್ಯಾಸಳನ್ನು ಟ್ರೋಲ್ ಮಾಡುವವರ ಬಗ್ಗೆ ನಟ ಕಾಜೋಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಕೊಂಚ ಖಾರವಾಗಿಯೇ ಕಾಜೋಲ್ ಟ್ರೋಲಿಗರ ಬಗ್ಗೆ ಮಾತನಾಡಿದ್ದಾರೆ. ನನ್ನ ಮಗಳನ್ನು ಟ್ರೋಲ್ ಮಾಡುವುದು ನನ್ನ ಕಾರ್ ಮುಂದೆ ಬರಬೇಡಿ, ಮೇಲೆ ಹತ್ತಿಸಿಬಿಡುತ್ತೇನೆ ಎಂದಿದ್ದಾರೆ.

'ಮಾ' ಚಿತ್ರದಲ್ಲಿ ಹೆಣ್ಣು ಮಗಳ ತಾಯಿ ಪಾತ್ರದಲ್ಲಿ ಕಾಜೋಲ್ ನಟಿಸಿದ್ದಾರೆ. ದುಷ್ಠ ಶಕ್ತಿಗಳಿಂದ ಮಗಳನ್ನು ಕಾಪಾಡುವ ಗಟ್ಟಿಗಿತ್ತಿ ಪಾತ್ರ ಅದು. ಪ್ರತಿ ಕ್ಷಣ ಮಗಳನ್ನು ಕಣ್ಣಿನ ರೆಪ್ಪೆಯಂತೆ ಕಾಯುವ ತಾಯಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ಕೂಡ ಮಗಳ ಬಗ್ಗೆ ಇಷ್ಟೇ ಕಾಳಜಿ ವಹಿಸುತ್ತೀರಾ? ಅವಳ ಭದ್ರತೆ ಬಗ್ಗೆ ಸದಾ ಆಲೋಚಿಸುತ್ತೀರಾ? ಬಹಳ ಕಟ್ಟುನಿಟ್ಟಾಗಿ ಇರ್ತೀರಾ? ಎನ್ನುವ ಪ್ರಶ್ನೆಗೆ "ಮೊದಲು ಆ ರೀತಿ ಇದ್ದೆ. ಈಗ ಇಲ್ಲ. ಈ ಸ್ವಲ್ಪ ತಾಳ್ಮೆಯಿಂದ ವರ್ತಿಸುತ್ತೀನಿ" ಎಂದಿದ್ದಾರೆ.

ತಮ್ಮ ಮಕ್ಕಳನ್ನು ಟ್ರೋಲಿಗರು ಟಾರ್ಗೆಟ್ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ "ಅಂತಹವರು ನನ್ನ ಕಾರ್ ಮುಂದೆ ಬರಬೇಡಿ. ಬಂದರೆ ಮೇಲೆ ಹತ್ತಿಸಿಬಿಡುತ್ತೇನೆ" ಎಂದು ಕಾಜೋಲ್ ಹೇಳಿದ್ದಾರೆ. 'ಹೆಲಿಕಾಪ್ಟರ್ ಈಲಾ' ಚಿತ್ರದಲ್ಲಿನ ಪಾತ್ರದಂತೆ ಮಕ್ಕಳನ್ನು ನೋಡಿಕೊಳ್ಳುತ್ತೇನೆ. ಟ್ರೋಲ್ ಸಣ್ಣ ಭಾಗ ಅಷ್ಟೆ. ಅದು ಬಿಟ್ಟು ಧನಾತ್ಮಕ ವಿಚಾರಗಳ ಬಗ್ಗೆ ಆಲೋಚಿಸಿ ಎಂದು ಮಕ್ಕಳಿಗೆ ಹೇಳುತ್ತೇನೆ. 'ಕೇವಲ 1% ಅಥವಾ 0.1% ಜನರು ಹಾಗೆ ಟ್ರೋಲ್ ಮಾಡುತ್ತಾರೆ. ಅವರು ನಿಜವೋ ಅಲ್ಲವೋ ಎಂದು ನನಗೆ ತಿಳಿದಿಲ್ಲ. ನೀವು ಒಳ್ಳೆಯದರ ಮೇಲೆ ಗಮನಹರಿಸಬೇಕು ಎಂದು ಮಕ್ಕಳಿಗೆ ಹೇಳುತ್ತಲೇ ಇರುತ್ತೇನೆ ಎಂದಿದ್ದಾರೆ.

ಸದ್ಯ 'ಸರ್ಜಮೀನ್' ಹಾಗೂ 'ಮಹಾರಂಗಿ: ಕ್ವೀನ್ ಆಫ್ ಕ್ವೀನ್ಸ್' ಎಂಬ ಎರಡು ಸಿನಿಮಾಗಳಲ್ಲಿ ಕಾಜೋಲ್ ನಟಿಸುತ್ತಿದ್ದಾರೆ. 1992ರಲ್ಲಿ ಬಂದಿದ್ದ 'ಬೆಕುದಿ' ಎಂಬ ಸಿನಿಮಾ ಮೂಲಕ ಆಕೆ ಬಾಲಿವುಡ್ ಪ್ರವೇಶಿಸಿದ್ದರು. ಬಳಿಕ 'ಬಾಜೀಗರ್', 'ದಿಲ್‌ವಾಲೆ ದುಲಾನಿಯಾ ಲೆ ಜಾಯೆಂಗೆ', 'ಕರಣ್ ಅರ್ಜುನ್', 'ಕುಚ್ ಕುಚ್ ಹೋತಾ ಹೈ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Bollywood actress Kajol lashes out at trolls targeting her daughter Nyasa;
Read more about: kajol actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X