For Quick Alerts
  ALLOW NOTIFICATIONS  
  For Daily Alerts

  50 ವರ್ಷ ತುಂಬಿದ ಪತಿಗೆ ಗಂಭೀರವಾಗಿ ವಿಶ್ ಮಾಡಿದ ಕಾಜಲ್

  |

  ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಈಗ ಹಾಫ್ ಸೆಂಚುರಿ ಹೊಡೆದಿದ್ದಾರೆ. ಅವರೀಗ ತಮ್ಮ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಪ್ರೀತಿಯ ಪತಿಗೆ ನಟಿ ಕಾಜಲ್ ವಿಶ್ ಮಾಡಿದ್ದಾರೆ.

  ಅಜಯ್ ಜತೆ ನಟಿಸಲು ಕಾಜೋಲ್ ಒಪ್ಪಿಲ್ಲ ಯಾಕೆ? ಅಜಯ್ ಜತೆ ನಟಿಸಲು ಕಾಜೋಲ್ ಒಪ್ಪಿಲ್ಲ ಯಾಕೆ?

  ನಟಿ ಕಾಜಲ್ ಟ್ವಿಟ್ಟರ್ ಖಾತೆಯ ಮೂಲಕ ಅಜಯ್ ದೇವಗನ್ ಶುಭಾಶಯ ತಿಳಿಸಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು ನನ್ನ ಹುರುಪಿನ, ಬೆರಗಿನ, 'ಗಂಭೀರ' ಪತಿಗೆ. ನಿಮಗೆ ನಾನು ಕೂಡ 'ಗಂಭೀರ'ವಾಗಿ ಶುಭಾಶಯ ಹೇಳುವೆ. ಇನ್ನು ಮುಂದೆ ಇನ್ನಷ್ಟು ಅದ್ಭುತ ದಿನಗಳು, ವರ್ಷಗಳು ಇದೆ. ನಾನು 'ಗಂಭೀರ'ವಾಗಿ ಯೋಚನೆ ಮಾಡಿದ್ದಾನೆ ನೀವು 50ನೇ ವಯಸ್ಸಿನಲ್ಲಿ ಇನ್ನೂ ಸುಂದರವಾಗಿ ಕಾಣುತ್ತಿದ್ದೀರಿ.'' ಎಂದು ಟ್ವೀಟ್ ಮಾಡಿದ್ದಾರೆ.

  ಹೈ ಹೀಲ್ಸ್ ತಂದ ಎಡವಟ್ಟು: ಆಯತಪ್ಪಿ ಬಿದ್ದ ನಟಿ ಕಾಜೋಲ್.! ಹೈ ಹೀಲ್ಸ್ ತಂದ ಎಡವಟ್ಟು: ಆಯತಪ್ಪಿ ಬಿದ್ದ ನಟಿ ಕಾಜೋಲ್.!

  ಕಾಜಲ್ ಟ್ವೀಟ್ ನೋಡಿದರೆ ಗಂಭೀರ ಎನ್ನುವ ಪದವನ್ನು ಪದೇ ಪದೇ ಬಳಸಿದ್ದಾರೆ. ಅಜಯ್ ದೇವಗನ್ ಯಾವಾಗಲೂ ಗಂಭೀರವಾಗಿ ಇರುತ್ತಾರೆ ಎನ್ನುವ ಕಾರಣಕ್ಕೆ ತಮ್ಮ ಟ್ವೀಟ್ ಮೂಲಕ ತಮಾಷೆ ಮಾಡಿರಬಹುದು.

  ಅಜಯ್ ದೇವಗನ್ ಹಿಂದಿ ಚಿತ್ರರಂಗದ ಖ್ಯಾತ ನಟರಾಗಿದ್ದು, ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಹಾಗೂ ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ, ಇವರ ಸಾಧನೆಗೆ ಭಾರತ ಸರ್ಕಾರ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

  ಸದ್ಯ, ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಸಿನಿಮಾದ ಒಂದು ಪಾತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ.

  English summary
  Bollywood actress Kajol wishes for his husbend actor Ajay Devgn birthday. Ajay Devgn celebrating his 50th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X