ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಲುಕ್ ನೋಡಿದ್ರಾ?
ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ನಟ ಪ್ರಭಾಸ್ ಅಭಿನಯದ ಕಲ್ಕಿ 2898 AD ಸಿನಿಮಾ ಪ್ರಭಾಸ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹೆಚ್ಚಿಸಿದೆ. ಕಲ್ಕಿ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿ ಕಲಾವಿದರ ಬಳಗವೆ ಇದೆ.
ಮಹಾನಟಿ ಮತ್ತು ಯೇವಡೆ ಸುಬ್ರಹ್ಮಣ್ಯಂ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿರುವ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಟ ಅಮಿತಾಬ್ ಬಚ್ಚನ್ ಅಕ್ಟೋಬರ್ 11 ರಂದು ತಮ್ಮ 81 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಿನವನ್ನು ವಿಶೇಷವಾಗಿಸಲು, 'ಕಲ್ಕಿ 2898 AD' ಚಿತ್ರತಂಡ ಅಮಿತಾಬ್ ಬಚ್ಚನ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಜನ್ಮದಿನಕ್ಕೆ ಶುಭ ಹಾರೈಸಿದ ಕಲ್ಕಿ ಚಿತ್ರತಂಡ
'ಕಲ್ಕಿ 2898 AD' ಚಿತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಅಪ್‌ಡೇಟ್‌ನಲ್ಲಿ, ನಿರ್ಮಾಪಕರು ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಹೊಸ ಪೋಸ್ಟರ್ ಹಂಚಿಕೊಂಡಿದೆ. ಜೊತೆಗೆ ಜನ್ಮದಿನದ ಶುಭಾಶಯಗಳು ಎಂದು ಶೀರ್ಷಿಕೆಯಲ್ಲಿ ಬರೆದಿದೆ.
ಅಮಿತಾಬ್ ಬಚ್ಚನ್ ಮುಂದಿನ ಚಿತ್ರಗಳು
ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಗಣಪತ್' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದು, ಅಕ್ಟೋಬರ್ 20 ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ, ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ನಿರ್ದೇಶನದಲ್ಲಿ ಬರುತ್ತಿರುವ ನಟ ರಜನಿಕಾಂತ್ ಅಭಿನಯದ ತಲೈವರ್ 170 ಸಿನಿಮಾದಲ್ಲಿಯು ಕಾಣಿಸಿಕೊಳ್ಳಲಿದ್ದಾರೆ.
ಕಲ್ಕಿ 2898 AD
ಕಲ್ಕಿ 2898 AD ಒಂದು ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರವಾಗಿದ್ದು, ನಾಗ್ ಅಶ್ವಿನ್ ಸಿನಿಮಾದ ಚುಕ್ಕಾಣಿ ಹಿಡಿದಿದ್ದಾರೆ. ಯೇವಡೆ ಸುಬ್ರಮಣ್ಯಂ, ಮಹಾನಟಿ ಮತ್ತು ಎಕ್ಸ್-ಲೈಫ್ (ಪಿಟ್ಟ ಕಥಲು ಸಂಕಲನದ ಒಂದು ಭಾಗ) ನಂತರ ನಾಗ್ ಅಶ್ವಿನ್ ಅವರ ನಾಲ್ಕನೇ ನಿರ್ದೇಶನದ ಸಿನಿಮಾ ಇದು.

ಪ್ರಭಾಸ್ ನಾಯಕ ನಟನಾಗಿ 'ಪ್ರಾಜೆಕ್ಟ್ ಕೆ' ಎಂಬ ಶೀರ್ಷಿಕೆಯಡಿಯಲ್ಲಿ ಚಲನಚಿತ್ರವನ್ನು ಆರಂಭದಲ್ಲಿ 2020 ರಲ್ಲಿ ಘೋಷಿಸಲಾಯಿತು. ಇದಾದ ನಂತರ ನಟಿ ದಿಶಾ ಪಟಾನಿ, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ನಂತರ ಘೋಷಿಸಲಾಯಿತು.
ಚಿತ್ರದ ಟೀಸರ್ 2023 ರ ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು. ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಚಿತ್ರವನ್ನು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿ. ಅಸ್ವಾನಿ ದತ್ ನಿರ್ಮಿಸಿದ್ದಾರೆ. ವಡ ಚೆನ್ನೈ ಮತ್ತು ಮಹಾನ್ ಚಿತ್ರಗಳಿಗೆ ಹೆಸರುವಾಸಿಯಾದ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.
ಈ ಹಿಂದೆ, ಚಿತ್ರದ ಹಲವು ಫೋಟೋಗಳು ಮತ್ತು ವಿಡಿಯೋಗಳು ಲೀಕ್ ಆಗಿದ್ದು ನಿರ್ಮಾಪಕರು ಹಕ್ಕುಸ್ವಾಮ್ಯ ಉಲ್ಲಂಘನೆಯ ವಿರುದ್ಧ ಕಾನೂನು ನೋಟಿಸ್ ನೀಡಿದ್ದರು. ಕಲ್ಕಿ ಸಿನಿಮಾದ ಯಾವುದೇ ಫೋಟೋ, ದೃಶ್ಯ, ಸ್ಟಿಲ್‌ಗಳು, ಸಂಗೀತವನ್ನು ಅನುಮತಿಯಿಲ್ಲದೆ ಬಳಸಿದರೆ, ಹಕ್ಕುಸ್ವಾಮ್ಯ ಕಾಯ್ದೆಯಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ ಎಂದು ಹೇಳಿದ್ದರು.
600 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ 'ಕಲ್ಕಿ 2898 AD' ಸಿನಿಮಾ ನಿರ್ಮಾಣವಾಗಿದ್ದು, ಇದು ಅತ್ಯಂತ ದುಬಾರಿ ಭಾರತೀಯ ಚಲನಚಿತ್ರ ಎನ್ನಲಾಗುತ್ತಿದೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಜನವರಿ 2024ರಲ್ಲಿ ಬಿಡುಗಡೆಯಾಗಲಿದೆ. ಎಂದು ವರದಿಯಾಗಿದೆ.


Click it and Unblock the Notifications











