Kalki 2898 AD: ಪ್ರಭಾಸ್, ದೀಪಿಕಾ ಪಡುಕೋಣೆ ನಟನೆಯ ಸೈನ್ಸ್ ಫಿಕ್ಷನ್ 'ಕಲ್ಕಿ' ಬಿಡುಗಡೆ ದಿನಾಂಕ ಫಿಕ್ಸ್

ನಟ ಪ್ರಭಾಸ್ ಸದ್ಯ 'ಸಲಾರ್' ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 700 ಕೋಟಿ ರೂಪಾಯಿ ಗಡಿಯತ್ತ ಇದೆ. ಇದರ ಬೆನ್ನಲ್ಲೇ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ವೈಜ್ಞಾನಿಕ ಸಿನಿಮಾ 'ಕಲ್ಕಿ 2898 ಎಡಿ' ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

'ಕಲ್ಕಿ 2898 ಎಡಿ' ಸಿನಿಮಾಕ್ಕೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರತಂಡ ಹಂಚಿಕೊಂಡಿರುವ ಹೊಸ ಮಾಹಿತಿ ಪ್ರಕಾರ 'ಕಲ್ಕಿ 2898 AD' ಮೇ 9, 2024 ರಂದು ಬಿಡುಗೆಯಾಗಲಿದೆ. ಅಂದು ಸಿನಿ ಪ್ರೇಮಿಗಳು ಥಿಯೇಟರ್‌ಗಳಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಜೋಡಿಯನ್ನು ಕಣ್ತುಂಬಿಕೊಳ್ಳಬಹುದು ಎಂದು ಚಿತ್ರತಂಡ ಶುಕ್ರವಾರ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.

Kalki 2898 AD: Prabhas, Deepika Padukone starrer sci-fi film gets a new release date

'ಕಲ್ಕಿ 2898 ಎಡಿ' ಹೊಸ ರಿಲೀಸ್ ಡೇಟ್

ಪ್ರೊಡಕ್ಷನ್ ಬ್ಯಾನರ್ ವೈಜಯಂತಿ ಮೂವೀಸ್ 'ಕಲ್ಕಿ 2898 ಎಡಿ' ಸಿನಿಮಾ ನಿರ್ಮಿಸುತ್ತಿದೆ. ತಮ್ಮ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಹೊಸ ರಿಲೀಸ್ ಡೇಟ್ ಘೋಷಿಸಿದ್ದು, ಇದರಲ್ಲಿ ನಟ ಪ್ರಭಾಸ್ ಅವರ ಹೊಸ ಲುಕ್ ಕಾಣಿಸುತ್ತಿದೆ. ವಿಭಿನ್ನವಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ ವೈಜಯಂತಿ ಮೂವೀಸ್.

"6000 ವರ್ಷಗಳ ಹಿಂದೆ ಕೊನೆಗೊಂಡ ಕಥೆ. ಮೇ 9, 2024 ರಂದು ಪ್ರಾರಂಭವಾಗುತ್ತದೆ. ಭವಿಷ್ಯವು ತೆರೆ ಕಾಣಲಿದೆ. #ಕಲ್ಕಿ 2898 ಎಡಿ ಎಂದು ವೈಜಯಂತಿ ಮೂವೀಸ್ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ನಟ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ಇತರರು ಕೂಡ ಪೋಸ್ಟ್ ಶೇರ್ ಮಾಡಿದ್ದಾರೆ.

ಪ್ರಭಾಸ್ ಅಭಿಮಾನಿಗಳನ್ನು ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದ, "ಭವಿಷ್ಯದ ಕ್ಷಣಗಣನೆ ಪ್ರಾರಂಭವಾಗಿದೆ! #Kalki2898AD 9ನೇ ಮೇ 2024 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ" ಎಂದಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಬಿಡುಗಡೆಯ ದಿನಾಂಕದೊಂದಿಗೆ ಚಿತ್ರದ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ.

ಈ ಹಿಂದೆ 2020 ರಲ್ಲಿ ಪ್ರಾಜೆಕ್ಟ್ ಕೆ ಎಂದು ಘೋಷಿಸಲಾಗಿದ್ದ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ನೋಡಿರದ ಜಗತ್ತಿಗೆ ಸಿನಿ ಪ್ರೇಕ್ಷಕರನ್ನು ಕರೆದುಕೊಂಡು ಹೋಗುತ್ತದೆ ಎಂದು ಚಿತ್ರತಂಡ ಭರವಸೆ ನೀಡಿದೆ. ಸಿನಿಮಾವನ್ನು ವೈಜಯಂತಿ ಮೂವೀಸ್ ಸಂಸ್ಥಾಪಕ ಅಶ್ವಿನಿ ದತ್ ನಿರ್ಮಿಸುತ್ತಿದ್ದಾರೆ.

ಕಲ್ಕಿ 2898AD ಎಡಿ

'ಕಲ್ಕಿ 2898AD ಎಡಿ' ಚಲನಚಿತ್ರದ ಅಧಿಕೃತ ಶೀರ್ಷಿಕೆಯನ್ನು ಜುಲೈ 2023 ರಲ್ಲಿ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ನಲ್ಲಿ ಚಿತ್ರತಂಡ ಘೋಷಿಸಿತ್ತು. ಚಿತ್ರದಲ್ಲಿ ನಟಿಸಿರುವ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಅವರನ್ನು ಭವಿಷ್ಯದ ಜಗತ್ತಿನಲ್ಲಿ ಇರುವಂತೆ ಫಸ್ಟ್ ಲುಕ್‌ನಲ್ಲಿ ತೋರಿಸಲಾಗಿದೆ.

ಫಸ್ಟ್ ಲುಕ್‌ನಲ್ಲಿ ನಟಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಪ್ರಭಾಸ್ ಅವರನ್ನು ಯುದ್ಧದಂತಹ ಸನ್ನಿವೇಶದಲ್ಲಿ ವಾರಿಯರ್‌ಗಳಂತೆ ತೋರಿಸಿದೆ. ನಿರ್ದೇಶಕ ನಾಗ್ ಅಶ್ವಿನ್ ಹೇಳುವಂತೆ, "ಭಾರತವು ಇದುವರೆಗೆ ಬರೆದ ಕೆಲವು ಶ್ರೇಷ್ಠ ಕಥೆಗಳು ಮತ್ತು ಸೂಪರ್ ಹೀರೋಗಳ ತವರು. ನಮ್ಮ ಚಿತ್ರವು ಇದನ್ನು ಹೊರತರುವ ಮತ್ತು ಪ್ರಪಂಚದೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿದೆ ಎಂದು ನಾವು ಅಂದುಕೊಂಡಿದ್ದೇವೆ. ನಮ್ಮ ಕಥೆಯನ್ನು ವಿಶ್ವದ ಎಲ್ಲಾ ಪ್ರೇಕ್ಷಕರಿಗೆ ಪರಿಚಯಿಸುತ್ತದೆ" ಎಂದಿದ್ದರು.

More from Filmibeat

English summary
Kalki 2898 AD: Prabhas, Deepika Padukone starrer Kalki new release date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X