For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಒಬ್ಬ ಗೂಂಡಾ, ಜೀವನ ನಾಶ ಮಾಡುತ್ತೇನೆ: ಟ್ವೀಟ್ ಮಾಡಿ ಖಾತೆ ಲಾಕ್ ಮಾಡಿದ ಕಮಲ್ ಖಾನ್

  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ವಿಮರ್ಶಕ ಕಮಲ್ ಖಾನ್ ನಡುವಿನ ದ್ವೇಷ ಮತ್ತೊಂದು ಹಂತಕ್ಕೆ ಹೋಗಿದೆ. ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾದ ಬಗ್ಗೆ ವಿಮರ್ಶೆ ಮಾಡಿ ಸಲ್ಮಾನ್ ಕೆಂಗಣ್ಣಿಗೆ ಗುರಿಯಾಗಿದ್ದ ಕಮಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಬಳಿಕ ರೊಚ್ಚಿಗೆದ್ದಿರುವ ಕಮಲ್ ಖಾನ್ ವಿರುದ್ಧ ಸಿಡಿದು ನಿಂತಿದ್ದಾರೆ.

  ಸಲ್ಮಾನ್ ವಿರುದ್ಧ ಟ್ವೀಟ್ ಮಾಡಿರುವ ಕಮಲ್ 'ಬಾಲಿವುಡ್ ಗೂಂಡಾ, ನಿಮಗೆ ಧೈರ್ಯ ಇದ್ದರೆ ಮುಂದೆ ನಿಂತು ಹೋರಾಡಿ. ಚೀಪ್ ಗಾಯಕರು ಮತ್ತು ಕಷ್ಟಪಡುತ್ತಿರುವ ನಟಿಯರ ಹಿಂದೆ ಅಡಗಿಕೊಳ್ಳಬೇಡಿ. ನಾನು ಪ್ರತಿಜ್ಞೆ ಮಾಡುತ್ತೇನೆ ನಿಮ್ಮ ವೃತ್ತಿಜೀವನವನ್ನು ನಾಶಮಾಡಿ ನಿಮ್ಮನ್ನು ಒಬ್ಬ ಟಿವಿ ನಟನನ್ನಾಗಿ ಮಾಡುತ್ತೇನೆ' ಎಂದಿದ್ದಾರೆ.

  ರಾಧೆ ಸಿನಿಮಾ ವಿಮರ್ಶೆ; ನಟ ಕಮಾಲ್ ವಿರುದ್ಧ ಮಾನಹಾನಿ ದೂರು ದಾಖಲಿಸಿದ ಸಲ್ಮಾನ್ ಖಾನ್ರಾಧೆ ಸಿನಿಮಾ ವಿಮರ್ಶೆ; ನಟ ಕಮಾಲ್ ವಿರುದ್ಧ ಮಾನಹಾನಿ ದೂರು ದಾಖಲಿಸಿದ ಸಲ್ಮಾನ್ ಖಾನ್

  ಈ ಟ್ವೀಟ್ ನಲ್ಲಿ ಎಲ್ಲೂ ಸಲ್ಮಾನ್ ಖಾನ್ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಇದು ಸಲ್ಮಾನ್ ಖಾನ್ ಗೆ ಹೇಳಿರುವುದು ಎನ್ನುವುದು ಸಲ್ಮಾನ್ ಅಭಿಮಾನಿಗಳಿಗೆ ತಿಳಿದಿದೆ. ಈ ಬಗ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿ ಸಲ್ಮಾನ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಮಾತಿನಚಕಮಕಿ ಬಳಿಕ ಕಮಲ್ ಖಾನ್ ತನ್ನ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ್ದಾರೆ.

  ಗೆದ್ದ ಮೇಲೆ ನಿಮ್ಮ ಪಕ್ಷದವರೇ ನಿಮಗೆ ಉಲ್ಟಾ ಹೊಡೆದರೆ ಉಪ್ಪಿ ಏನ್ ಮಾಡ್ತಾರೆ | Filmibeat Kannada

  ಟ್ವಿಟ್ಟರ್ ನಲ್ಲಿ 5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಮಲ್ ಇದೀಗ ತನ್ನ ಫಾಲೋ ಮಾಡುವವರಿಗೆ ಮಾತ್ರ ಟ್ವೀಟ್ ಕಾಣುವಂತೆ ಆಗುವಂತೆ ಸೆಟ್ಟಿಂಗ್ ಮಾಡಿದ್ದಾರೆ. ಬಾಲಿವುಡ್ ಬಿಗ್ ಸ್ಟಾರ್ ನನ್ನು ಎದುರುಹಾಕಿಕೊಂಡಿರುವ ಕಮಲ್ ಖಾನ್ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ.

  English summary
  Kamaal R. Khan promises he destroy Salman Khan career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X