KGF 2: 'ಕೆಜಿಎಫ್ 2' ಕೆಟ್ಟಾಗಿದೆ ಎಂದು ಚೀಮಾರಿ ಹಾಕಿಸಿಕೊಂಡ ಬಾಲಿವುಡ್ ನಟ!
ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ರಿಲೀಸ್ ಆಗಿದೆ. ಚಿತ್ರಕ್ಕೆ ಎಲ್ಲೆಲ್ಲೂ ಜನ ಜೈ ಕಾರ ಹಾಕುತ್ತಿದ್ದಾರೆ. 'ಕೆಜಿಎಫ್ 2' ಚಿತ್ರ ಸೂಪರ್ ಎನ್ನುತ್ತಿರುವವರೇ ಹೆಚ್ಚು. ಹೆಚ್ಚಿನ ಜನರು 'ಕೆಜಿಎಫ್ 2' ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಅಂತ ಅಲ್ಲ. ಚಿತ್ರ ನೋಡಿದ ಪ್ರತಿಯೊಬ್ಬರು ಇದು ವರ್ಲ್ಡ್ ಕ್ಲಾಸ್ ಚಿತ್ರ ಎನ್ನುತ್ತಿದ್ದಾರೆ.
ಕೆಜಿಎಫ್ ಮೊದಲ ಭಾಗಕ್ಕಿಂದಲೂ ಈ ಚಿತ್ರ 100 ಪಟ್ಟು ಚೆನ್ನಾಗಿದೆ ಎಂದು, ನಿರ್ದೇಶಕ ಪ್ರಶಾಂತ್ ನೀಲ್‌ರನ್ನು ಹಾಡಿ ಹೊಗಳುತ್ತಾ ಇದ್ದಾರೆ. ಇನ್ನು ತೆರೆಗಪ್ಪಳಿಸಿದ 'ಕೆಜಿಎಫ್ 2' ಚಿತ್ರ ಮೊದಲ ದಿನವೇ ಜನ ಮನ ಗೆದ್ದು ಬೀಗಿದೆ. ವಿಶ್ವದಾದ್ಯಂತ ಚಿತ್ರಕ್ಕೆ ಸಕಾರಾತ್ಮಕ ವಿಮರ್ಶೆ ಬಂದಿದೆ.
ಹೀಗಿರೋವಾಗ ಒಂದೇ ಒಂದು ಅಪಸ್ವರ ಕೇಳಿ ಬಂದಿದೆ. 'ಕೆಜಿಎಫ್ 2' ಅತ್ಯಂತ ಕೆಟ್ಟ ಚಿತ್ರ ಎಂದು ಬಾಲಿವುಡ್‌ನ ವಿವಾದಿತ ನಟ ಕಮಾಲ್ ಆರ್ ಖಾನ್ ಹೇಳಿದ್ದಾರೆ. 'ಕೆಜಿಎಫ್ 2' ಚಿತ್ರವನ್ನು ನೋಡಿದ ಕಮಲ್ ಈ ಚಿತ್ರವನ್ನು ನೋಡಿ ತಲೆ ಹಾಳಾಗಿದೆ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
Recommended Video


'ಕೆಜಿಎಫ್ 2' ಕೆಟ್ಟ ಚಿತ್ರ: ಕಮಾಲ್ ಆರ್ ಖಾನ್!
ಕಮಲ್ ಅರ್ ಖಾನ್ ಬಾಲಿವುಡ್‌ನಲ್ಲಿ ಸದ ವಿವಾದಗಳಿಂದಲೆ ಸದ್ದಾಗುತ್ತಾರೆ. ಕಮಲ್ ಖಾನ್ ತನ್ನನ್ನು ತಾನೇ ನಟ ಮತ್ತು ವಿಮರ್ಶಕ, ವಿಶ್ಲೇಷಕ ಎಂದು ಕರೆದುಕೊಳ್ಳುತ್ತಾರೆ. 'ಕೆಜಿಎಫ್ 2' ಚಿತ್ರವನ್ನು ನೋಡಿದ ಅವರು ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದರೆ. ಪೂರ್ತಿ ಚಿತ್ರವನ್ನು ನೋಡುವ ಮೊದಲೇ, 30 ನಿಮಿಷ ಚಿತ್ರವನ್ನು ನೋಡಿ, ಈ ಚಿತ್ರ ನೋಡಿ ತಲೆ ಹಾಳಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
'ಕೆಜಿಎಫ್ 2' ಚಿತ್ರವನ್ನು ಟೀಕಿಸಿದ ಕೆಆರ್‌ಕೆ!
ಕೆಆರ್‌ಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ಕೆಜಿಎಫ್ 2' ಚಿತ್ರವನ್ನು ಟೀಕಿಸಿದ್ದಾರೆ. "30 ನಿಮಿಷಗಳ #KGF2 ಚಿತ್ರ ಮುಗಿದು ಹೋಗಿದೆ ಮತ್ತು ಇಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತೇ ಆಗುತ್ತಿಲ್ಲ." ಎಂದು ಇಂಗ್ಲಿಷ್‌ನಲ್ಲಿ ಬರೆದ ಬಳಿಕ. "ಸಿಕ್ಕಾಪಟ್ಟೆ ಡೈಲಾಗ್. ತಲೆ ಕೆಟ್ಟು ಹೋಗಿದೆ! ಇದು #RRR ಗಿಂತ 10 ಪಟ್ಟು ದೊಡ್ಡದಾದ ಕೆಟ್ಟ ಸಿನಿಮಾ" ಎಂದು ಬರೆದುಕೊಂಡಿದ್ದಾರೆ.

ಕೆಆರ್‌ಕೆ ಹೇಳಿಕೆಗೆ ಭಾರಿ ವಿರೋಧ!
ಟ್ವಿಟರ್ ಬಳಕೆದಾರರು ಈತನಿಗೆ ಛೀಮಾರಿ ಹಾಕಲಾಗುತ್ತಿದ್ದಾರೆ. ಕೆಜಿಎಫ್ 2 ಚಿತ್ರದ ಬಗ್ಗೆ ಕೆಆರ್‌ಕೆ ಮಾಡಿರುವ ಟ್ವೀಟ್‌ನಿಂದಾಗಿ 'ದೇಶದ್ರೋಹಿ' ನಟ ಎನ್ನುವ ಹೆಸರಿನ ಅಡಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಜೊತೆಗೆ ಇನ್ನು ಕೆಲವರು ಈತನ್ನು ಬಂಧಿಸುವಂತೆ ಮುಂಬೈ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

'ಕೆಜಿಫ್ 2' ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ!
ಕೆಆರ್‌ಕೆ ಟ್ವೀಟ್‌ಗೆ ಉತ್ತರಿಸಿದ ಜನ. ನೀನು ಏನೇ ಬಾಯಿ ಬಡಿದುಕೊಂಡರು ಕೂಡ ಕೆಜಿಎಫ್ ಮತ್ತು RRR ಚಿತ್ರಗಳಂತಹ ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. 'ಕೆಜಿಎಫ್' ಚಿತ್ರಕ್ಕೂ ಮುನ್ನ ಈತ RRR ಚಿತ್ರದ ಬಗ್ಗೆ ಮಾತನಾಡಿದ್ದರು. RRR ಅತ್ಯಂತ ಕೆಟ್ಟ ಚಿತ್ರ ಎಂದು ಕಮೆಂಟ್ ಮಾಡಿದ್ದರು. ಹಾಗಾಗಿ ಈಗ ಈತನಿಗೆ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.


Click it and Unblock the Notifications











