India
  For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಮೇಲೆ ಈತನಿಗ್ಯಾಕಿಷ್ಟು ಹೊಟ್ಟೆ ಉರಿ? 'ಶಂಶೇರ' ಟೀಸರ್ ನೋಡಿದ್ಮೇಲೆ ಕಮಾಲ್ ಕಿರಿಕ್!

  |

  ದಕ್ಷಿಣದ ಸಿನಿಮಾ ಬೇಜಾನ್ ಸದ್ದು ಮಾಡುತ್ತಿವೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಇತಿಹಾಸ ಸೃಷ್ಟಿಸಿವೆ. ಅದರಲ್ಲೊಂದು 'ಕೆಜಿಎಫ್ 2'. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ವಿಶ್ವದೆಲ್ಲೆಡೆ ಬೇಜಾನ್ ಸದ್ದು ಮಾಡಿತ್ತು. ವಿಶ್ವದ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ 'ಕೆಜಿಎಫ್ 2' ಮೂರನೇ ಸ್ಥಾನದಲ್ಲಿದೆ.

  ವಿಶ್ವವೇ ಮೆಚ್ಚಿದ ಸಿನಿಮಾ ಮೇಲೆ ಈತನೊಬ್ಬನಿಗೆ ಮಾತ್ರ ಅದ್ಯಾಕೋ ದ್ವೇಷ. 'ಕೆಜಿಎಫ್ 2' ಬಿಡುಗಡೆಯಾದಲ್ಲಿಂದ ಉರಿದುರಿದು ಬೀಳುತ್ತಿದ್ದಾನೆ. ಆತನೇ ಬಾಲಿವುಡ್‌ನ ಕಿರಿಕ್ ಕ್ರಿಟಿಕ್ ಕಮಾಲ್ ಆರ್ ಖಾನ್. 'ಕೆಜಿಎಫ್ 2' ಬಿಡುಗಡೆಯಾದಲ್ಲಿಂದ ಈ ಸಿನಿಮಾ ಬಗ್ಗೆ ಒಂದಲ್ಲ ಒಂದು ಕಮೆಂಟ್ ಮಾಡುತ್ತಲೇ ಇದ್ದಾನೆ.

  ಸಾಗರದ ಕೆಳದಿ ಅರಸರ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿದ ಯಶ್ 'ಯಶೋಮಾರ್ಗ'ಸಾಗರದ ಕೆಳದಿ ಅರಸರ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿದ ಯಶ್ 'ಯಶೋಮಾರ್ಗ'

  ಇತ್ತೀಚೆಗೆ ಕಮಲ್ ಹಾಸನ್ ಅಭಿನಯದ ಸಿನಿಮಾ 'ವಿಕ್ರಂ' ರಿಲೀಸ್ ಆದಾಗಲೂ, 'ಕೆಜಿಎಫ್ 2' ಸಿನಿಮಾವನ್ನು ಜರಿದಿದ್ದ. ಈಗ ಮತ್ತೆ ಖ್ಯಾತೆ ತೆಗೆದಿದ್ದಾನೆ. ರಣ್‌ಬೀರ್ ಕಪೂರ್ ಅಭಿನಯದ 'ಶಂಶೇರ' ಸಿನಿಮಾದ ಟೀಸರ್ ನೋಡಿ 'ಕೆಜಿಎಫ್ 2'ಗೆ ಟಾಂಗ್ ಕೊಟ್ಟಿದ್ದಾನೆ. ಅಸಲಿಗೆ ಈತ ಏನು ಹೇಳಿದ್ದಾನೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಶಂಶೇರ' ಉತ್ತಮ

  'ಶಂಶೇರ' ಉತ್ತಮ

  ರಣ್‌ಬೀರ್ ಕಪೂರ್ ಹಾಗೂ ಸಂಜಯ್ ದತ್ ಅಭಿನಯದ ಸಿನಿಮಾ 'ಶಂಶೇರ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನೋಡಿ ಕಮಾಲ್ ಆರ್ ಖಾನ್ ಸುಮ್ಮನೆ ಕೂತಿರಲಿಲ್ಲ. ಟ್ವಿಟರ್‌ನಲ್ಲಿ 'ಶಂಶೇರ' ಟೀಸರ್ ಬಗ್ಗೆ ಕಮೆಂಟ್‌ ಮಾಡಿದ್ದರು.'ಶಂಶೇರ' ಟೀಸರ್ ಹೊಗಳುವುದಕ್ಕೂ 'ಕೆಜಿಎಫ್ 2' ಸಿನಿಮಾವನ್ನು ಎಳೆದು ತಂದಿದ್ದಾನೆ. 'ಕೆಜಿಎಫ್ 2' ಸಿನಿಮಾದಷ್ಟೇ 'ಶಂಶೇರ' ಸಿನಿಮಾ ಕೂಡ ಉತ್ತಮ ಸಿನಿಮಾ ಎಂದು ಹೊಗಳಿದ್ದಾನೆ.

  'ಕೆಜಿಎಫ್ 2' ಭರ್ಜರಿ 50 ದಿನ: ಯಶ್-ಪ್ರಶಾಂತ್ ನೀಲ್ ಬರೆದ ದಾಖಲೆಯೇನು?'ಕೆಜಿಎಫ್ 2' ಭರ್ಜರಿ 50 ದಿನ: ಯಶ್-ಪ್ರಶಾಂತ್ ನೀಲ್ ಬರೆದ ದಾಖಲೆಯೇನು?

  'ಕೆಜಿಎಫ್ 2'ಗಿಂತ 'ಶಂಶೀರ' ದೊಡ್ಡ ಹಿಟ್

  ಇಲ್ಲಿಗೆ ಸುಮ್ಮನಾಗಿಲ್ಲ. 'ಶಂಶೀರ'ದಲ್ಲಿ ಸಂಜಯ್ ದತ್ ಪಾತ್ರವನ್ನು ಹಾಡಿ ಹೊಗಳಿದ್ದಾನೆ. ಸಂಜಯ್ ದತ್ 'ಕೆಜಿಎಫ್ 2' ಸಿನಿಮಾಗಿಂತ 'ಶಂಶೀರ'ದಲ್ಲಿ ಡೇಂಜರಸ್‌ ಅಂತೆ ಕಾಣುತ್ತಾರೆ. ಹಿಂದಿ ಪ್ರೇಕ್ಷಕರು 'ಕೆಜಿಎಫ್ 2' ಸಿನಿಮಾ ಒಪ್ಪಿಕೊಂಡಂತೆ 'ಶಂಶೀರ' ಸಿನಿಮಾವನ್ನು ಒಪ್ಪಿಕೊಂಡರೆ, ಅದಕ್ಕಿಂತ ದೊಡ್ಡ ಹಿಟ್ ಆಗುತ್ತೆ ಎಂದು ಕಮೆಂಟ್ ಮಾಡಿದ್ದಾನೆ. ಇದು ಮತ್ತೆ ಯಶ್ ಅಭಿಮಾನಿಗಳಿಗೆ ಕೋಪಕ್ಕೆ ಕಾರಣವಾಗಿದೆ.

  'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ

  'ವಿಕ್ರಂ' ಮುಂದೆ 'ಕೆಜಿಎಫ್ 2' ಬಚ್ಚಾ

  ಕಮಲ್‌ ಹಾಸನ್ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ವಿಕ್ರಂ' ಬಿಡುಗಡೆಯಾದಗಲೂ ಹೀಗೆ ಉಲ್ಟಾ ಸೀದಾ ಮಾತಾಡಿದ್ದ. 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದ್ದರೂ ಕಮಾಲ್ ಆರ್ ಖಾನ್ ಮಾತ್ರ ನೆಗೆಟಿವ್ ಕಮೆಂಟ್ ಮಾಡುವುದನ್ನು ನಿಲ್ಲಿಸಿರಲಿಲ್ಲ. 'ವಿಕ್ರಂ' ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ 'ಕೆಜಿಎಫ್ 2' ಮೇಲೆ ಟೀಕೆಗಳನ್ನೇ ಮಾಡಿದ್ದ. 'ವಿಕ್ರಂ ಮುಂದೆ 'ಕೆಜಿಎಫ್ 2 ಬಚ್ಚಾ' ಎಂದು ಟ್ವೀಟ್ ಮಾಡಿದ್ದ. ಇದು ಯಶ್ ಅಭಿಮಾನಿಗಳನ್ನು ಕೆರಳಿಸಿತ್ತು.

  'ಕೆಜಿಎಫ್ 2' ಬಳಿಕ ಪ್ರಭಾಸ್‌ ಮೇಲೆ ಹೆಚ್ಚಿದ ಒತ್ತಡ: ಪ್ರಶಾಂತ್‌ ನೀಲ್‌ಗೆ ಸ್ಪೆಷಲ್ ಕಾಲ್‌ಶೀಟ್!'ಕೆಜಿಎಫ್ 2' ಬಳಿಕ ಪ್ರಭಾಸ್‌ ಮೇಲೆ ಹೆಚ್ಚಿದ ಒತ್ತಡ: ಪ್ರಶಾಂತ್‌ ನೀಲ್‌ಗೆ ಸ್ಪೆಷಲ್ ಕಾಲ್‌ಶೀಟ್!

  ಕಮಾಲ್ 'ಕೆಜಿಎಫ್ 2' ವಿರೋಧಿಸಲು ಏನು ಕಾರಣ

  ಕಮಾಲ್ 'ಕೆಜಿಎಫ್ 2' ವಿರೋಧಿಸಲು ಏನು ಕಾರಣ

  'ಕೆಜಿಎಫ್ 2' ವಿರುದ್ಧ ಕಮಾಲ್ ಆರ್ ಖಾನ್ ಟೀಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ಹೀಗೆ ಕಮೆಂಟ್ ಮಾಡಿದ್ದಾನೆ. 'ಕೆಜಿಎಫ್ 2' ಸಿನಿಮಾ ನೋಡಿ ಉಗಿದಿದ್ದ. ಯಶ್ ಫೋಟೊ ಶೇರ್ ಮಾಡಿ ಬೋಜ್‌ಪುರಿ ನಟನಿದ್ದಂತೆ ಇದ್ದೀಯಾ ಎಂದು ಕಮೆಂಟ್ ಮಾಡಿದ್ದ. ಈಗ 'ಶಂಶೇರ' ಸಿನಿಮಾ ಇಟ್ಕೊಂಡು ಮತ್ತೆ ಅಖಾಡಕ್ಕಿಳಿದಿದ್ದಾನೆ.

  English summary
  Kamaal R Khan Says Shamshera is More Dangerous Than KGF 2, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X