»   » ಕಮಲ್-ವಿಶ್ವರೂಪಂ II ಟ್ರೇಲರ್ ನೋಡಿ

ಕಮಲ್-ವಿಶ್ವರೂಪಂ II ಟ್ರೇಲರ್ ನೋಡಿ

Posted By:
Subscribe to Filmibeat Kannada

ಅಭಿನಯದ ವಿಶ್ವ ವಿದ್ಯಾಲಯದಂತಿರುವ ಕಮಲ್ ಹಾಸನ್ ಅವರ ಬಹುನಿರೀಕ್ಷಿತ ವಿಶ್ವರೂಪಂ ಚಿತ್ರದ ಎರಡನೇ ಭಾಗದ ಟೀಸರ್ ಬಿಡುಗಡೆಗೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿದೆ. ಎಲ್ಲಾ ಅಂದು ಕೊಂಡಂತೆ ಆಗಿದ್ದರೆ ಆಗಸ್ಟ್ ತಿಂಗಳ ಅಂತ್ಯಕ್ಕೆ ಈ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ಈಗ ಸೆಪ್ಟೆಂಬರ್ ಮೊದಲ ವಾರಕ್ಕೆ ಮುಂದೂಡಲ್ಪಟ್ಟಿದೆ.

ಜುಲೈ ತಿಂಗಳಿನಲ್ಲಿ ವಿಶ್ವರೂಪಂ 2 ಮೊದಲ ಟ್ರೇಲರ್ ಬಿಡುಗಡೆಗೊಂಡಿತ್ತು. ಈಗ ಎರಡನೇ ಟ್ರೇಲರ್ ಕಮ್ ಟೀಸರ್ ಸದ್ದು ಮಾಡಿದೆ. ಬಿಡುಗಡೆಗೆ ಮುನ್ನ ಸಾಕಷ್ಟು ವಿವಾದಗಳನ್ನು ವಿಶ್ವರೂಪಂ ಚಿತ್ರ ಸೃಷ್ಟಿಸಿತ್ತು. ಅದರೆ, ತೆರೆ ಕಂಡ ನಂತರ ಪ್ರೇಕ್ಷಕರು, ವಿಮರ್ಶಕರಿಂದ ಮುಕ್ತಕಂಠದ ಹೊಗಳಿಕೆ ಸಿಕ್ಕಿತು. ಜತೆ ಬಾಕ್ಸಾಫೀಸ್ ನಲ್ಲೂ ಭರ್ಜರಿ ಗಳಿಕೆ ಸಿಕ್ಕಿತ್ತು. ಈಗ ವಿಶ್ವರೂಪಂ 2 ಟ್ರೇಲರ್ ಬಿಡುಗಡೆಯಾಗಿದ್ದು, ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ ನೋಡಿ

Kamal Hassan's Vishwaroopam 2 official trailer

ಐಐಎಫ್ಎ 2013 ಸಮಾರಂಭದಲ್ಲಿ ವಿಶ್ವರೂಪಂ 2 ರ ಟ್ರೇಲರ್ ಅನ್ನು ಮೊದಲ ಬಾರಿಗೆ ಕಮಲ್ ಅವರು ಕಳೆದ ಜುಲೈನಲ್ಲಿ ಬಿಡುಗಡೆ ಮಾಡಿದರು. ಐಐಎಫ್ಎ ನಂಥ ಜಾಗತಿಕ ವೇದಿಕೆ ಸಿಕ್ಕಿದ್ದು ಹಾಗೂ ವಿಶ್ವರೂಪಂ ಎರಡನೇ ಭಾಗದ ಟ್ರೇಲರ್ ನೋಡಿ ಬಾಲಿವುಡ್ ಮಂದಿ ಮೆಚ್ಚಿದ್ದು ನೋಡಿ ಕಮಲ್ ಖುಷಿಯಾಗಿದ್ದರು.

ವಿಶ್ವರೂಪಂ II ಸೆಪ್ಟೆಂಬರ್ ಮೊದಲ ವಾರ ತೆರೆ ಕಾಣುವುದು ಬಹುತೇಕ ಖಚಿತವಾಗಿದೆ. ಅದರೆ, ಮೊದಲ ಆವೃತ್ತಿ ತೆರೆ ಕಾಣಲು ಉಂಟಾಗಿದ್ದ ಅಡ್ಡಿ ಆತಂಕಗಳು ಎರಡನೇ ಭಾಗಕ್ಕೂ ಎದುರಾಗುವ ಭೀತಿ ಕಾಡುತ್ತಿದೆ. ವಿಶ್ವರೂಪಂ 2 ಇನ್ನೂ ಶೇ 10 ರಷ್ಟು ಕೆಲಸ ಬಾಕಿಯಿದೆಯಂತೆ ಮುಂದಿನ ದೀಪಾವಳಿ ವೇಳೆಗಾದರೂ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಮಲ್ ಹಾಸನ್, ಪೂಜಾ ಕುಮಾರ್, ಆಂಡ್ರಿಯಾ ಜೆರೆಮಿಯಾ, ರಾಹುಲ್ ಬೋಸ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ್ರ ಭಾರತದ ಗುಪ್ತಚರ ಅಧಿಕಾರಿ ಹಾಗೂ ಉಗ್ರರ ನಡುವಿನ ಹೋರಾಟದ ಕಥೆ ಹೊಂದಿದೆ. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪಕ್ಕೆ ಕಮಲ್ ತಕ್ಕ ಉತ್ತರ ನೀಡಿದ್ದರು.

English summary
Kamal Hassan starrer Vishwaroopam 2 is slowly making its way to hit the silver screens. The movie makers who came up with the movie's first official trailer in early July, has now released the second trailer. Vishwaroopam 2, the sequel of Vishwaroopam, has been very much sensationalised before its release.
Please Wait while comments are loading...