For Quick Alerts
  ALLOW NOTIFICATIONS  
  For Daily Alerts

  ವಾರದಲ್ಲಿ ಎರಡನೇ ಬಾರಿ ಕಮಾರ್ ಆರ್ ಖಾನ್ ಬಂಧನ: ಈ ಭಾರಿ ಪ್ರಕರಣ ಗಂಭೀರ

  |

  ವಿವಾದಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ಕಳೆದ ವಾರ ಭಾರತಕ್ಕೆ ಬಂದಿದ್ದ ಕಮಾಲ್ ರಷೀದ್ ಖಾನ್ ಅನ್ನು ಮುಂಬೈನ ಮಲಾಡ್ ಪೊಲೀಸರು 2020 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.

  ಇದೀಗ ಮುಂಬೈನ ವರ್ಸೋವಾ ಪೊಲೀಸರು ಕಮಾಲ್ ಆರ್ ಖಾನ್ ಅನ್ನು 2019 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಶಕ್ಕೆ ಪಡೆದಿದ್ದಾರೆ.

  ವಿವಾದಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಬಂಧನವಿವಾದಿತ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಬಂಧನ

  2020 ರಲ್ಲಿ ಕಮಾಲ್ ಆರ್ ಖಾನ್ ಮಾಡಿದ್ದ ದ್ವೇಷಪೂರ್ಣ ಟ್ವೀಟ್‌ನ ವಿರುದ್ಧ ರಾಹುಲ್ ಕನ್ವಾಲ್ ಎಂಬುವರು ಮುಂಬೈನ ಮಲಾಡ್ ಪೊಲೀಸರಿಗೆ ದೂರು ನೀಡಿದ್ದರು. ಕಮಾಲ್ ಆರ್ ಖಾನ್ ಭಾರತದಲ್ಲಿ ವಾಸಿಸುತ್ತಿರಲಿಲ್ಲವಾದ್ದರಿಂದ ಅವರ ಬಂಧನ ಸಾಧ್ಯವಾಗಿರಲಿಲ್ಲ. ಆದರೆ ಆಗಸ್ಟ್ 30ರ ಬೆಳಿಗ್ಗೆ ಕಮಾಲ್ ಆರ್ ಖಾನ್ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಪೊಲೀಸರು ಬಂಧಿಸಿದ್ದರು.

  ಕಮಾಲ್ ಆರ್ ಖಾನ್ ಇನ್ನೂ ಜೈಲಿನಲ್ಲಿರುವಂತೆಯೇ ವರ್ಸೋವಾ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಹಾಕಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದರನ್ನು ಅವರನ್ನು ವಶಕ್ಕೆ ಪಡೆದಿದ್ದಾರೆ.

  2019 ರಲ್ಲಿ ಜಿಮ್ ಟ್ರೈನರ್ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಮಾಲ್ ಆರ್ ಖಾನ್ ಅನ್ನು ಇದೀಗ ವರ್ಸೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  2019 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯು 2021 ರಲ್ಲಿ ದೂರು ನೀಡಿದ್ದರು. ಕಮಾಲ್ ಆರ್ ಖಾನ್ ಗೆ ಭಾರಿ ದೊಡ್ಡ ವ್ಯಕ್ತಿಗಳ ಸಂಪರ್ಕ ಇದ್ದುದ್ದರಿಂದ ತಾನು ದೂರು ನೀಡಲು ಭಯಗೊಂಡಿದ್ದೆ ಎಂದು ತಡವಾಗಿ ದೂರು ನೀಡುತ್ತಿರುವ ಬಗ್ಗೆ ಯುವತಿ ಪೊಲೀಸರಲ್ಲಿ ಹೇಳಿದ್ದಾರೆ. ಇದೀಗ ಕಮಾಲ್ ಆರ್ ಖಾನ್ ಅನ್ನು 14 ದಿನಗಳ ಕಾಲ ವರ್ಸೋವಾ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ನೀಡಿದೆ.

  'ಕೆಜಿಎಫ್ 2', 'RRR' ಸೇರಿದಂತೆ ಒಳ್ಳೆಯ ಸೂಪರ್ ಹಿಟ್ ಸಿನಿಮಾಗಳನ್ನು ಸಹ ತೀರ ಕಳಪೆ, ತಲೆ ನೋವಿನ ಸಿನಿಮಾಗಳು ಎಂದೆಲ್ಲ ಕಮಾಲ್ ಆರ್ ಖಾನ್ ವಿಮರ್ಶೆ ಮಾಡಿದ್ದರು. ಸದಾ ಒಂದಿಲ್ಲೊಂದು ವಿವಾದಾತ್ಮಕ ಟ್ವೀಟ್, ನಟ-ನಟಿಯರ ಖಾಸಗಿ ಜೀವನದ ಬಗ್ಗೆ ಹೇಳಿಕೆ, ಕೆಟ್ಟ ಸಿನಿಮಾ ವಿಮರ್ಶೆ ಮಾಡುವುದು ಕಮಾಲ್ ಆರ್ ಖಾನ್ ಸ್ಟೈಲ್. ಈತ 'ದೇಶದ್ರೋಹಿ' ಹೆಸರಿನ ಸಿನಿಮಾ ನಿರ್ದೇಶಿಸಿ ತಾನೇ ಆ ಸಿನಿಮಾದಲ್ಲಿ ನಟಿಸಿದ್ದ ಸಹ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು.

  English summary
  Kamal R Khan arrested again. He firstly arrested on August 30 by Malad police now by Varsova police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X