ಒಪ್ಪಿದರಷ್ಟೇ ಇಲ್ಲಿ ಮುಂದುವರೆಯುತ್ತಾರೆ, ನಮ್ಮ ಜೊತೆ ಮಲಗು ಎಂದು ಯಾರು ಬಲವಂತ ಮಾಡಲ್ಲ ಎಂದ ನಟಿ.!
ಲೈಂಗಿಕ ಹಗರಣಗಳಿಂದ ಮಲಯಾಳಂ ಚಿತ್ರರಂಗ ನಲುಗಿ ಹೋಗಿದೆ. ದಿನಕ್ಕೊಂದು ಸೆ* ಬಾಂಬ್ ಮಲಯಾಳಂ ಚಿತ್ರರಂಗದ ಮೇಲೆ ಬೀಳುತ್ತಿರುವ ಕಾರಣದಿಂದ, ದೇಶವ್ಯಾಪಿ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ ಎನ್ನುವ ಚರ್ಚೆ ಶುರುವಾಗಿದೆ. ಇದು ಕೇವಲ ಮಲಯಾಳಂ ಚಿತ್ರರಂಗದ ಕಥೆ ಮಾತ್ರ ಅಲ್ಲ, ಎಲ್ಲ ಭಾಷೆಯ ಚಿತ್ರರಂಗದ ಕಥೆ ಕೂಡ ಒಂದೇ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ನಡುವೆ ಕಾಮ್ಯಾ ಪಂಜಾಬಿ ಚಿತ್ರರಂಗದ ಕಥೆ ಗೊತ್ತಿಲ್ಲ. ಆದರೆ ಕಿರುತೆರೆ ಮಾತ್ರ ತುಂಬಾ ಕ್ಲೀನ್ ಆಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಹೊಸದೊಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಹೌದು, ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಾಮ್ಯಾ ಪಂಜಾಬಿ, ಹಿಂದೆ ಕಿರುತೆರೆಯಲ್ಲಿ ಏನೆಲ್ಲ ನಡೆದಿತ್ತು ಅನ್ನುವುದು ನನಗೆ ಗೊತ್ತಿಲ್ಲ. ಆದರೆ, ನಾನು ನೋಡಿರುವಂತೆ ಕಿರುತೆರೆ ಜಗತ್ತು ಈಗ ತುಂಬಾನೇ ಸ್ವಚ್ಚವಾಗಿದೆ ಎಂದಿದ್ದಾರೆ. ಕಿರುತೆರೆಯಲ್ಲಿ ಕೊಳಕು ಮನಸ್ಥಿತಿಯವರು ಯಾರು ಇಲ್ಲ ಎಂದಿರುವ ಕಾಮ್ಯಾ ಪಾತ್ರಕ್ಕೆ ಇಲ್ಲಿ ಬೇಕಿರುವುದು ಕೇವಲ ಅರ್ಹತೆ ಮತ್ತು ಯೋಗ್ಯತೆ ಅಷ್ಟೇ ಎಂದಿದ್ಧಾರೆ. ನಿಮ್ಮಲ್ಲಿ ಟ್ಯಾಲೆಂಟ್ ಇದ್ದರೆ ಇಲ್ಲಿ ಅವಕಾಶ ನೀಡುತ್ತಾರೆ ಹೊರತು ಹಾಸಿಗೆ ಹಂಚಿಕೊಂಡರಷ್ಟೇ ಪಾತ್ರ ಕೊಡುವುದಾಗಿ ಇಲ್ಲಿ ಯಾರು ಹೇಳಲ್ಲ ಎಂದಿದ್ದಾರೆ.

ಮುಂದುವರೆದು ಚಿತ್ರರಂಗದಲ್ಲಿ ಹೆಣ್ಣಿನ ಸಮ್ಮತಿಯಿಲ್ಲದೇ ಈ ತರಹದ ಘಟನೆ ನಡೆಯಲು ಸಾಧ್ಯ ಇಲ್ಲ ಎಂದಿರುವ ಕಾಮ್ಯಾ, ನಮ್ಮ ಜೊತೆ ಮಲಗಲೇಬೇಕು ಎಂದು ಇಲ್ಲಿ ಯಾರು ಯಾರನ್ನೂ ಬಲವಂತ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಯಾರಾದರೂ ಮುಟ್ಟಿದರೆ ಅವರ ಸ್ಫರ್ಶದಲ್ಲಿ ಕಾಮದ ಬಯಕೆ ಇದೇ ಎಂದು ಅನಿಸಿದಾಗ ನೇರವಾಗಿಯೇ ನನಗೆ ಇದೆಲ್ಲ ಇಷ್ಟ ಇಲ್ಲ ಎಂದು ಹೇಳಿದರೆ ಅದು ಅಲ್ಲಿಗೆ ಮುಗಿಯುತ್ತೆ ಆ ನಂತರ ಅವರು ಮತ್ತೆ ನಿಮ್ಮನ್ನು ಮುಟ್ಟಲು ಬರುವುದಿಲ್ಲ ಎಂದಿರುವ ಕಾಮ್ಯಾ, ಅನೇಕರು ನಮಗೆ ಕಹಿ ಅನುಭವವಾಗಿದೆ. ನಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳುತ್ತಾರೆ. ಆದರೆ ನಾನು ಆಗಲೇ ಹೇಳಿದಂತೆ ಹುಡುಗಿ ಬಯಸದೇ ಇದ್ದರೆ, ಒಪ್ಪದೇ ಇದ್ದರೆ.. ಇದೆಲ್ಲ ಆಗಲ್ಲ ಎಂದಿದ್ದಾರೆ.
ಇನ್ನೂ ನಾನು ನನ್ನ ಈ ಸುಧೀರ್ಘ ಪ್ರಯಾಣದಲ್ಲಿ ಸುಮಾರು ಹೆಣ್ಣು ಬಾಕರನ್ನು ನಾನು ನೋಡಿದ್ದೇನೆ ಆದರೆ ಅವರು ಕೂಡ ಒಪ್ಪಿಗೆ ಇಲ್ಲದೇ ಮುಂದುವರೆಯಲ್ಲ ಎಂದಿರುವ ಕಾಮ್ಯಾ ಪಂಜಾಬಿ ಕಿರುತೆರೆಯಲ್ಲಿಯಂತೂ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಇಲ್ಲ. ಚಿತ್ರರಂಗ ಮತ್ತು ಓಟಿಟಿಯ ಕಥೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅಂದ್ಹಾಗೇ ಕಾಮ್ಯಾ ಪಂಜಾಬಿ ರೇಥ್ .. ಅಸ್ತಿತ್ವ.. ಏಕ್ ಪ್ರೇಮ್ ಕಹಾನಿ, ಬಾನೂ ಮೇ ತೇರಿ ದುಲ್ಹನ್, ಪಿಯಾ ಕಾ ಘರ್, ಮರ್ಯಾದಾ ಲೇಕಿನ್ ಕಬ್ ತಕ್, ಕ್ಯೂ ಹೋತಾ ಹೈ ಪ್ಯಾರ್, ಹೀಗೆ ಅನೇಕ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ಸದ್ಯಕ್ಕೆ ಕಾಮ್ಯಾ ಪಂಜಾಬಿ ಅವರ ಈ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಕಿರುತೆರೆಯಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ನಿಮಗೆ ಗೊತ್ತಿರದೇ ಇದ್ದರೆ, ನಿಮ್ಮ ಪಾಡಿಗೆ ನೀವು ಸುಮ್ಮನೆ ಇರಿ ಎನ್ನುತ್ತಿದ್ದಾರೆ. ಮತ್ತೊಮ್ಮೆ ಶುರುವಾದ ಹೋರಾಟದ ದಾರಿಯನ್ನೂ ತಪ್ಪಿಸಬೇಡಿ ಎಂದು ಕಿಡಿ ಕಾರುತ್ತಿದ್ಧಾರೆ.


Click it and Unblock the Notifications











