ತಾಪ್ಸಿಯ ವೈರಲ್ ಟ್ವೀಟ್ ವಿರುದ್ಧ ಹರಿಹಾಯ್ದ ಕಂಗನಾ ರಣೌತ್
ಬಾಲಿವುಡ್, ಕ್ರೀಡಾ ಸೆಲೆಬ್ರಿಟಿಗಳ 'ಡ್ಯಾಮೇಜ್ ಕಂಟ್ರೋಲ್' ಟ್ವೀಟ್‌ಗಳಿಗೆ ವಿರುದ್ಧವಾಗಿ ನಟಿ ತಾಪ್ಸಿ ಪನ್ನು ಮಾಡಿದ ಟ್ವೀಟ್ ಇದೀಗ ಸಖತ್ ವೈರಲ್ ಆಗಿದೆ.
ಆದರೆ ತಾಪ್ಸಿ ಪನ್ನು ಟ್ವೀಟ್‌ಗೆ ವಿರುದ್ಧವಾಗಿ ಕಂಗನಾ ರಣೌತ್ ಮೂದಲಿಕೆಯ ಟ್ವೀಟ್ ಒಂದನ್ನು ಮಾಡಿದ್ದರು. ಆದರೆ ಕಂಗನಾ ಮಾಡಿದ್ದ ಟ್ವೀಟ್, ಟ್ವಿಟ್ಟರ್‌ನ ನಿಯಮಗಳಿಗೆ ಬಾಹಿರವಾಗಿದ್ದ ಕಾರಣ ಕಂಗನಾ ರ ಟ್ವೀಟ್ ಅನ್ನು ಟ್ವಿಟ್ಟರ್ ತೆಗೆದು ಹಾಕಿದೆ.
ಆದರೆ ಕಂಗನಾ ಮಾಡಿದ್ದ ಟ್ವೀಟ್ ನ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, 'ಬಿ ಗ್ರೇಡ್ ಜನರ ಬಿ ಗ್ರೇಡ್ ಯೋಚನೆಗಳು. ಪ್ರತಿಯೊಬ್ಬನೂ ಆತನ ನಂಬಿಕೆ, ತಾಯಿನಾಡು ಹಾಗೂ ಕುಟುಂಬದ ಬೆಂಬಲಕ್ಕೆ ಎದ್ದು ನಿಲ್ಲಬೇಕು. ಇದೇ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಮತ್ತು ಧರ್ಮ ಆಗಿರುತ್ತದೆ. ಉಚಿತ ಫಂಡ್‌ಗಳನ್ನು ತಿನ್ನುವವರಾಗಬೇಡಿ. ಇದಕ್ಕಾಗಿಯೇ ನಾನು ಇವರನ್ನು ಬಿ ಗ್ರೇಡ್ ಎಂದು ಕರೆಯುವುದು, ಇಂಥಹವರನ್ನು ನಿರ್ಲಕ್ಷಿಸಿ' ಎಂದು ಕಂಗನಾ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ ಅನ್ನು ಟ್ವಿಟ್ಟರ್ ಇಂಡಿಯಾ ತೆಗೆದು ಹಾಕಿದೆ.

ನಟಿ ತಾಪ್ಸಿ ಪನ್ನು ಹೇಳಿದ್ದು ಇಷ್ಟು, 'ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾದರೆ, ನೀವು ನಿಮ್ಮ ನಂಬಿಕೆಗಳನ್ನು ಗಟ್ಟಿಮಾಡಿಕೊಳ್ಳಬೇಕಿದೆಯೇ ಹೊರತು ಬೇರೆಯವರಿಗೆ ಆದರ್ಶದ ಪಾಠ ಮಾಡುವ ಶಿಕ್ಷಕರಾಗಬಾರದು' ಎಂದು ಟ್ವೀಟ್ ಮಾಡಿದ್ದರು.
Recommended Video
ಬಾಲಿವುಡ್ ಹಾಗೂ ಕ್ರೀಡಾ ಸೆಲೆಬ್ರಿಟಿಗಳು ಸರ್ಕಾರದ ಪರವಾಗಿ ಟ್ವೀಟ್‌ಗಳನ್ನು ಮಾಡುವ ಹೊತ್ತಿನಲ್ಲಿಯೇ ತಾಪ್ಸಿ ಪನ್ನು ಮಾಡಿದ ಈ ಟ್ವೀಟ್ ಸಖತ್ ವೈರಲ್ ಆಗಿದೆ. ಅಕ್ಷಯ್ ಕುಮಾರ್ ರ ನಿನ್ನೆ ಮಾಡಿದ್ದ ಟ್ವೀಟ್‌ಗಳಿಗಿಂತಲೂ ಹೆಚ್ಚು ಲೈಕ್‌ಗಳು, ರೀಟ್ವೀಟ್‌ಗಳು ತಾಪ್ಸಿ ಪನ್ನು ಅವರ ಟ್ವೀಟ್‌ಗೆ ದೊರೆತಿದೆ.


Click it and Unblock the Notifications











