For Quick Alerts
  ALLOW NOTIFICATIONS  
  For Daily Alerts

  ಮೋದಿ ಗೆದ್ದ ಖುಷಿಗೆ ಚಾಯ್-ಪಕೋಡ ಮಾಡಿದ ಕಂಗನಾ

  |

  ನರೇಂದ್ರ ಮೋದಿ ಗೆಲುವನ್ನು ಮೋದಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಬಿ ಜೆ ಪಿಯ ಅಭೂತ ಪೂರ್ವ ಗೆಲುವು ಮೋದಿ ಭಕ್ತರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ಜೊತೆಗೆ ಮೋದಿಯ ದೊಡ್ಡ ಅಭಿಮಾನಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣವಾತ್ ಕೂಡ ಸಂಭ್ರಮ ಆಚರಿಸಿದ್ದಾರೆ.

  ಮೋದಿ ಗೆಲುವನ್ನು ಕಂಗನಾ ವಿಭಿನ್ನವಾಗಿ ಆಚರಿಸಿದ್ದಾರೆ. ಮನೆಯಲ್ಲಿ ಬಿಸಿ ಬಿಸಿ ಚಾಯ್ ಮತ್ತು ಪಕೋಡ ಮಾಡಿ ಮನೆಯವರಿಗೆಲ್ಲ ಹಂಚುವ ಮೂಲಕ ಗೆಲುವನ್ನು ಸಂಭ್ರಮಿಸಿದ್ದಾರೆ. ಕಂಗನಾ ಅಡುಗೆ ಮಾಡುವುದು ತೀರ ಅಪರೂಪವಂತೆ. ಆದ್ರೆ ಖುಷಿ ಹೆಚ್ಚಾದರೆ ಮತ್ರಾ ಅಡುಗೆ ಮಾಡಿ ಸಂಭ್ರಮಿಸುತ್ತಾರಂತೆ.

  ಕಂಗನಾಗೆ ಭಯಪಟ್ಟು ಸಿನಿಮಾ ರಿಲೀಸ್ ಡೇಟ್ ಬದಲಾಯಿಸಿದ್ರಾ ಹೃತಿಕ್?

  ಈ ಬಗ್ಗೆ ಕಂಗನಾ ಸಹೋದರಿ ರಂಗೋಲಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ. "ಕಂಗನಾ ಅಡುಗೆ ಮಾಡುವುದು ತೀರ ಅಪರೂಪ. ಆದ್ರೆ ಯಾವಾಗ ಆಕೆ ಅತೀ ಖುಷಿಯಾಗಿರುತ್ತಾಳೋ ಆಗ ಮಾತ್ರ ಅಡುಗೆ ಮಾಡುತ್ತಾರೆ. ನರೇಂದ್ರ ಮೋದಿ ಗೆದ್ದ ಖುಷಿಗೆ ಮನೆಯವರಿಗೆ ಚಾಯ್ ಪಕೋಡ ಟ್ರೀಟ್ ಕೊಡಿಸಿದ್ದಾಳೆ" ಎಂದು ಹೇಳಿದ್ದಾರೆ.

  ಕಂಗನಾ ಅಡುಗೆ ಮಾಡುತ್ತಿರುವ ಒಂದಿಷ್ಟು ಫೋಟೋವನ್ನು ಸಾಮಾಜಿಕಾ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ರಂಗೋಲಿ. ಕಂಗನಾ ಸಹೋದರಿ ರಂಗೋಲಿ ಕುಟುಂಬದವರ ಜೊತೆ ಕುಳಿತು ಬಿಸಿ ಬಿಸಿ ಚಾಯ್ ಕುಡಿದು, ಪಕೋಡ ತಿಂದು ಸಂತಸ ಪಟ್ಟಿದ್ದಾರೆ.

  English summary
  Bollywood actress Kangana had made pakodas and chai in celebration of Modi's victory. Kangana cooks rarely, when she is absolutely exhilarated, She treated her family with chai pakoras.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X