ವಾವ್..! 48 ಕೋಟಿ ವೆಚ್ಚದ ಕಂಗನಾ ರಣಾವತ್ ಆಫೀಸ್ ಇದು
ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಕನಸಿನ ಆಫೀಸ್ ನೋಡಿದ್ರೆ ನಿಜಕ್ಕು ಅಚ್ಚರಿ ಪಡಿತ್ತೀರಿ. ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಆಕರ್ಷಕ ಆಫೀಸ್ ಇಡೀ ಬಾಲಿವುಡ್ ಅನ್ನು ದಂಗು ಬಡಿಸಿದೆ. ಕಂಗನಾ ಮುಂಬೈನ ಪಾಲಿ ಹಿಲ್ಸ್ ಬಳಿ ಐಷಾರಾಮಿ ಆಫೀಸ್ ನಿರ್ಮಿಸಿದ್ದಾರೆ. ಈ ಮೂಲಕ ಸುಮಾರು 10 ವರ್ಷಗಳ ಕಂಗನಾ ಕನಸು ಈಗ ನನಸಾಗಿದೆ.
Recommended Video
ಸೆಲೆಬ್ರಿಟಿ ಡಿಸೈನರ್ ಆಗಿರುವ ಶಬ್ನಮ್ ಗುಪ್ತ ಮತ್ತು ಕಂಗನಾ ರಣಾವತ್ ಅವರೇ ಈ ಆಫೀಸ್ ನ ಡಿಸೈನ್ ಮಾಡಿದ್ದಾರೆ. ವಿಶೇಷ ಅಂದರೆ ಇದು ಪರಿಸರ ಸ್ನೇಹಿಯಾಗಿದ್ದು, ಪ್ಲಾಸ್ಟಿಕ್ ರಹಿತ ಆಫೀಸ್ ಆಗಿದೆ. ಸಖತ್ ಸ್ಟೈಲಿಶ್ ಆಗಿರುವ ಕಂಗನಾ ಆಫೀಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಖ್ಯಾತಿಗಳಿಸಿರುವ ಕಂಗನಾ, ತನ್ನದೆ ಆದ ಆಫೀಸ್ ಇರಬೇಕು ಎನ್ನುವ ಕನಸುಕಂಡಿದ್ದರು. ಅವರ ಆಸೆಯಂತೆ 48 ಕೋಟಿ ರೂಪಾಯಿ ವೆಚ್ಚದ ಆಫೀಸ್ ತಲೆ ಎತ್ತಿ ನಿಂತಿದೆ. ಕಂಗನಾ ಆಫೀಸ್ ಹೇಗಿದೆ ನೀವೆ ನೋಡಿ...

ಪ್ರಶಾಂತವಾಗಿದೆ ಆಫೀಸ್ ಪ್ರದೇಶ
ಕಂಗನಾ ಆಫೀಸ್ ತುಂಬಾ ವಿಶಾಲವಾಗಿದೆ. ಆಫೀಸ್ ಹೊರಾಂಗಣ ಮತ್ತು ಒಳಗೆ ಆಕರ್ಷಕವಾಗಿದೆ. ಅಂದ್ಹಾಗೆ ಕಂಗನಾ ಕೆಲವು ವರ್ಷಗಳ ಹಿಂದೆಯೆ ಈ ಆಫೀಸ್ ಕಟ್ಟಡವನ್ನು ಖರೀದಿಸಿದ್ದರಂತೆ. ಆದರೀಗ ಕಟ್ಟಡಕ್ಕೆ ಹೊಸ ರೂಪ ನೀಡಿ, ಅದ್ಭುತ ಡಿಸೈನ್ ಮೂಲಕ ಆಫೀಸ್ ಆಗಿ ಪರಿವರ್ತಿಸಿಕೊಂಡಿದ್ದಾರೆ.

ಸಭೆ, ಚರ್ಚೆಗೆ ಪ್ರತ್ಯೇಕ ಸ್ಥಳ
ಈ ಆಫೀಸ್ ನಲ್ಲಿ ಪ್ರತಿಯೊಂದಕ್ಕೂ ಒಂದೊಂದು ಪ್ರತ್ಯೇಕ ಸ್ಥಳವಿದೆ. ಚರ್ಚೆ, ಸಭೆ ನಡೆಸಲು ವಿಶಾಲವಾದ ಪ್ರದೇಶವಿದೆ. ಇಂಟೀರಿಯರ್ ಡಿಸೈನ್ ಅದ್ಭುತವಾಗಿದೆ. ಇನ್ನೂ ಪ್ಲೇ ದಿ ವೈಲ್ಡ್ ಕಾರ್ಡ್ ಎಂದು ಬರೆದಿರುವ ಜಾಗ ಕೂಡ ಆಕರ್ಷಕವಾಗಿದೆ.

ಮರದಿಂದ ನಿರ್ಮಿಸಿದ ವಸ್ತುಗಳು
ಆಫೀಸ್ ಒಳಗೆ ಎಂಟ್ರಿ ಆಗುತ್ತಿದ್ದಂತೆ ಮರದಿಂದ ನಿರ್ಮಿಸಿದ ಡಿಸೈನ್ ಗಳು ಗಮನ ಸೆಳೆಯುತ್ತವೆ. ಲೈಟ್ಸ್, ಟೆಬಲ್, ಖುರ್ಚಿ ಸೇರಿದಂತೆ ಪ್ರತಿಯೊಂದು ಸಹ ಮರದಿಂದ ನಿರ್ಮಾಣ ಮಾಡಲಾಗಿದೆ. ಸುಂದರವಾದ ದೀಪಗಳು ಆಫೀಸ್ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಕಾಫಿ ಏರಿಯಾ
ಕಂಗನಾ ರಣಾವತ್ ಗೆ ಕಾಫಿ ಅಂದರೆ ತುಂಬಾ ಇಷ್ಟವಂತೆ. ಹಾಗಾಗಿ ಆಫೀಸ್ ನಲ್ಲಿ ವಿಶೇಷವಾಗಿ ಕಾಫಿಗಾಗಿ ಪ್ರತ್ಯೇಕ ಜಾಗ ಮಾಡಿಸಿದ್ದಾರೆ. ಕಾಫಿ ಮಾಡಲು ಮತ್ತು ಕುಡಿಯಲು ಆ ಜಾಗವನ್ನು ಬಳಸಬಹುದು.

ಮೇಕಪ್ ಪ್ರದೇಶ ಮತ್ತು ಕೆಫೆಟೇರಿಯಾ
ಕಂಗನಾ ಆಫೀಸ್ ನಲ್ಲಿಯೂ ಮೇಕಪ್ ರೂಮ್ ಇದೆ. ಇನ್ನೂ ವಿಶ್ರಾಂತಿ ಪಡೆಯಲು, ಊಟಕ್ಕೆ ಪ್ರತ್ಯೇಕವಾಗಿ ವಿಶಾಲವಾದ ಸ್ಥಳವಿದೆ. ಕಂಗನಾ ಆಫೀಸ್ ನ ಪ್ರತಿಯೊಂದು ಏರಿಯಾವು ಆಕರ್ಷಕವಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.


Click it and Unblock the Notifications











