ಕೆಸರಿನಲ್ಲಿ ಅರಳಿದ 'ಕಮಲ' ; ರಾಜಕೀಯಕ್ಕೆ ಬಾಲಿವುಡ್ ಕ್ವೀನ್..? ಕಂಗನಾ ಹೇಳಿದ್ದೇನು..?

ಕಂಗನಾ ರಣಾವತ್ ರಾಜಕೀಯಕ್ಕೆ ಬರ್ತಾರೆ ಅನ್ನುವ ಸುದ್ದಿ ಇಂದು ನಿನ್ನೆಯದ್ದಲ್ಲ. ರಾಜಕೀಯ ಪಕ್ಷಗಳು ಅನೇಕ ದಿನದಿಂದ ಕಂಗನಾ ನಡೆಯ ಮೇಲೆ ಕಣ್ಣಿಟ್ಟಿವೆ. ಮುಂದೊಂದು ದಿನ ಕಂಗನಾ ತಲೆಗೆ ಕಮಲ ಮುಡ್ಕೊಂಡು ಓಡಾಡುವ ನಿರೀಕ್ಷೆಯೂ ಇದೆ. ವಾತಾವರಣ ಹೀಗಿರುವಾಗ ಕಂಗನಾ ರಾಜಕೀಯಕ್ಕೆ ಎಂಟ್ರಿ ಕೊಡುವ ಮಾತುಗಳನ್ನಾಡಿದ್ದಾರೆ

ಟಿವಿ 09ನ 'ವಾಟ್​ ಇಂಡಿಯಾ ಥಿಂಕ್ಸ್​ ಟುಡೇ' ಕಾನ್​ಕ್ಲೇವ್​ನ ಸಂವಾದದಲ್ಲಿ ಭಾಗಿಯಾಗಿದ್ದ ಕಂಗನಾ, ದೇಶಕ್ಕಾಗಿ ಏನನ್ನಾದರೂ ಮಾಡಲು ನನಗೆ ಸೀಟ್​ ಆಗಲಿ ಟಿಕೆಟ್​​ ಆಗಲಿ ಅಥವಾ ಅಧಿಕಾರ ಆಗಲಿ ಯಾವುದು ಬೇಕಿಲ್ಲ ಎಂದಿದ್ದಾರೆ.

Kangana ranaut about her political entry

ನಾನು ನಟಿಯಾಗಿಯೇ ರಾಜಕೀಯ ಪಕ್ಷಗಳನ್ನ ಎದುರು ಹಾಕಿಕೊಂಡಿದ್ದೇನೆ ಎಂದಿರುವ ಕಂಗನಾ ಇದೇ ಸಮಯದಲ್ಲಿ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ರಾಜಕೀಯಕ್ಕೆ ಬರಬೇಕು ಎಂದರೆ ಇದು ಸರಿಯಾದ ಸಮಯ ಎಂದಿದ್ದಾರೆ

ಇದೇ ಸಮಯದಲ್ಲಿ ತಮ್ಮ ರಾಜಕೀಯದ ಪಾಂಡಿತ್ಯ ಹೆಚ್ಚಾಗಲು ತಮ್ಮ ತಲೈವಿ ಸಿನಿಮಾ ಸಹಕಾರಿಯಾಯಿತು ಎಂದಿರುವ ಕಂಗನಾ, ಪ್ರಾದೇಶಿಕ ರಾಜಕೀಯದ ಬಗ್ಗೆ ಆಳವಾದ ಜ್ಞಾನ ಬಂದಿದ್ದು ತಲೈವಿ ಚಿತ್ರದಿಂದ ಅಂದಿದ್ದಾರೆ.

Kangana ranaut about her political entry

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ಮೋದಿ ಅವರ Vocal For Lokal ಮಾತನ್ನು ನೆನಪಿಸುವಂತೆ ಗ್ಲೋಬಲ್​ ಆಗಬೇಕಿದ್ದರೆ ಮೊದಲು ಲೋಕಲ್ ಆಗಿರಬೇಕು ಎಂದು ಖ್ಯಾತ ನಿರ್ದೇಶಕ ಸತ್ಯಜಿತ್​ ರೇ ಹೇಳಿದ್ದರು ಅವರ ಮಾತನ್ನ ನಾನು ನಂಬುತ್ತೇನೆ ಎಂದು ಕೂಡಾ ಕಂಗನಾ ಹೇಳಿದ್ದಾರೆ.‌ಭಾರತ ಕಂಡ ಶ್ರೇಷ್ಠ ನಟಿ ನಾನು ಎಂಬರ್ಥದಲ್ಲಿ ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡು ಮಾತನಾಡಿದ್ದಾರೆ

ಈ ದೇಶ ನನಗೆ ಸಾಕಷ್ಟನ್ನು ನೀಡಿದೆ. ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕಾಗಿಯೇ ನಾನು ರಾಷ್ಟ್ರವಾದಿ ಆಗಿದ್ದೇನೆ' ಎಂಬ ವಾದವನ್ನೂ ಕಂಗನಾ ರಣಾವತ್ ಮಂಡಿಸಿದ್ದಾರೆ. ಉಳಿದಂತೆ ಕಂಗನಾ ರಣಾವತ್ ಅವರ ದೇಶಪ್ರೇಮದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು.

Kangana ranaut about her political entry

ಒಟ್ಟಿನಲ್ಲಿ ಕಂಗನಾ ರಣಾವತ್ ರಾಜಕೀಯದ ಶಕ್ತಿ ಬಗ್ಗೆ ಮಾತನಾಡಿದ್ದಾರೆ. ರಾಜಕೀಯದ ಅರ್ಥ ಹಾಗೂ ವಿಧ ಎರಡನ್ನೂ ವಿವರಿಸಿದ್ದಾರೆ. ಕಂಗನಾ ಅವರ ಈ ಮಾತನ್ನ ಮಾತನ್ನು ನೀವು ಹೇಗೆ ತೆಗೆದುಕೊಳ್ಳುತ್ತೀರಾ ಎನ್ನುವುದು ನಿಮಗೆ ಬಿಟ್ಟಿದ್ದು.

More from Filmibeat

English summary
Bollywood Queen Kangana Ranaut Says She Fought With Political Parties From Film Set At What India Thinks Today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X